ಕೆಂಪೇಗೌಡರ ಆಡಳಿತ ಸ್ಮರಣೀಯ

KannadaprabhaNewsNetwork | Published : Jun 30, 2025 12:34 AM

ಚನ್ನಪಟ್ಟಣ: ಇಂದು ಬೆಂಗಳೂರು ವಿಶ್ವಭೂಪಟದಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ ಎಂದರೆ ಅದಕ್ಕೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯೇ ಕಾರಣ. ಉತ್ತಮ ಆಡಳಿತಗಾರರಾಗಿದ್ದ ಅವರು ಸದಾ ಸ್ಮರಣೀಯರು ಎಂದು ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್ ಅಭಿಪ್ರಾಯಪಟ್ಟರು.

ಚನ್ನಪಟ್ಟಣ: ಇಂದು ಬೆಂಗಳೂರು ವಿಶ್ವಭೂಪಟದಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ ಎಂದರೆ ಅದಕ್ಕೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯೇ ಕಾರಣ. ಉತ್ತಮ ಆಡಳಿತಗಾರರಾಗಿದ್ದ ಅವರು ಸದಾ ಸ್ಮರಣೀಯರು ಎಂದು ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್ ಅಭಿಪ್ರಾಯಪಟ್ಟರು.

ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಕೆಂಪೇಗೌಡ ಆಚರಣಾ ಸಮಿತಿ ಆಯೋಜಿಸಿದ್ದ 516ನೇ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ನಾಡಪ್ರಭುವಿಗೆ ಗೌರವ ಸಲ್ಲಿಸುವ ಸಲುವಾಗಿ ನಗರದಲ್ಲಿನ ಬಸ್ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ತೀರ್ಮಾನಿಸಿದ್ದು, ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನಾವೆಲ್ಲರೂ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಕನ್ನಡ ಉಪನ್ಯಾಸಕಿ ಶೈಲಜಾ ಶಿವಾನಂದ್ ಮಾತನಾಡಿ, ರಾಜಪ್ರಭುತ್ವದಲ್ಲಿ ಬಂದು ನಾಡಪ್ರಭು ಪಟ್ಟಕ್ಕೇರಿದ ಕೆಂಪೇಗೌಡರು ಕೇವಲ ಆಡಳಿತಾರರು ಮಾತ್ರವಲ್ಲದೆ ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿ ಎಂಬುದನ್ನು ಇತಿಹಾಸ ತಿಳಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಲಕ್ಷ್ಮಿ ದೇವಮ್ಮ, ಪೌರಾಯುಕ್ತ ಮಹೇಂದ್ರ, ಬಿಇಒ ರಾಮಲಿಂಗಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆ ಚಂದ್ರು, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಕೆಂಪೇಗೌಡ ಆಚರಣಾ ಸಮಿತಿಯ ರಾಂಪುರ ಧರಣೀಶ್, ನಗರಸಭಾ ಸದಸ್ಯರಾದ ಸುಮಾ ರವೀಶ್, ಸತೀಶ್ ಬಾಬು, ರಮೇಶ್‌ಗೌಡ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬೋರ್‌ವೆಲ್ ರಂಗನಾಥ್, ಅಕ್ಕೂರು ಶೇಖರ್, ರಮೇಶ್‌ಗೌಡ, ಆನಂದಸ್ವಾಮಿ, ಎಲೇಕೇರಿ ರವೀಶ್, ಡಿ.ಕೆ.ಕಾಂತರಾಜು, ಕರುಣ್ ಆನಂದ್, ಪವಿತ್ರಾ ರೆಡ್ಡಿ ಇತರರಿದ್ದರು.

ಪೋಟೊ೨೭ಸಿಪಿಟಿ೪:

ನಗರದ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ನಡೆದ ಕೆಂಪೇಗೌಡ ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು.