ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕುಂಬಾರ ವಿದ್ಯಾರ್ಥಿ ನಿಲಯ ಆವರಣದಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಜಾತ್ಯತೀತ ಮನೋಧರ್ಮದ ಕೆಂಪೇಗೌಡರು ಜಾತಿ ಮತ್ತು ವೃತ್ತಿ ಆಧಾರಿತವಾಗಿ ಪೇಟೆಗಳನ್ನು ನಿರ್ಮಿಸಿ ಎಲ್ಲ ವರ್ಗದವರಿಗೆ ಆರ್ಥಿಕ ಭದ್ರತೆ ಒದಗಿಸಿಕೊಟ್ಟರು. ತಮ್ಮ ಆಡಳಿತದಲ್ಲಿ ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೊಳಿಸುತ್ತಾ ಗ್ರಾಮ ಸ್ವರಾಜ್ಯದ ಕನಸನ್ನ ನನಸು ಮಾಡಿದ ಮಹಾ ನಾಯಕ ಎಂದು ಬಣ್ಣಿಸಿದರು.500 ವರ್ಷಗಳ ಹಿಂದಿಯೇ ಕೋಟೆ, ಪೇಟೆ, ಕೆರೆ, ಉದ್ಯಾನ ಮತ್ತು ದೇವಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಸಮಚಿತ್ತ ಆಡಳಿತವನ್ನ ನೀಡಿದ್ದರು. ಇಂದಿಗೂ ಗ್ರಾಮಾಂತರ ಪ್ರದೇಶದ ಅಸಂಖ್ಯಾತ ನಿರುದ್ಯೋಗಿ ಯುವಕರಿಗೆ ಬೆಂಗಳೂರು ಮಹಾನಗರ ಉದ್ಯೋಗ ಕೇಂದ್ರವಾಗಿದೆ. ಕೆಂಪೇಗೌಡರ ದೂರು ದೃಷ್ಟಿಯ ಫಲವನ್ನು ಇಂದಿನ ಯುವ ಜನರು ಅನುಭವಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಕುಲಕಸುಬು ಅವಲಂಬಿತ ಅತಿ ಹಿಂದುಳಿದ ಸಮುದಾಯಗಳಾದ ಕುಂಬಾರ, ಮಡಿವಾಳ, ಉಪ್ಪಾರ, ನೇಕಾರ, ತಿಗಳ ಸೇರಿದಂತೆ ವಿವಿಧ ಸಮುದಾಯಗಳ ಆರ್ಥಿಕ ಬಲವರ್ಧನೆಯನ್ನು ಕೆಂಪೇಗೌಡರು ಪ್ರತ್ಯೇಕ ಪೇಟೆಗಳನ್ನು ಸ್ಥಾಪಿಸಿ ಎಲ್ಲ ಹಿಂದುಳಿದ ಸಮುದಾಯಗಳಿಗೆ ಆರ್ಥಿಕ ನ್ಯಾಯವನ್ನು ಒದಗಿಸಿದ್ದು, ಅವರಲ್ಲಿನ ಸಾಮಾಜಿಕ ನ್ಯಾಯದ ಮನೋಭಾವನಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.