ಮಾಗಲು ಗ್ರಾಮದಲ್ಲಿ ಕೆಂಚಾಂಬಿಕೆಯ ಸುಗ್ಗಿ

KannadaprabhaNewsNetwork |  
Published : May 11, 2026, 01:45 AM IST
ಕೆಂಚಾಂಬಿಕೆ | Kannada Prabha

ಸಾರಾಂಶ

ಶ್ರೀ ಕೆಂಚಾಂಬಿಕೆ ದೊಡ್ಡಜಾತ್ರೆಯು ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ಮುಕ್ತಾಯಗೊಂಡ ಬಳಿಕ ಆ ದೇವರ 48 ಹಳ್ಳಿಗಳ ಪೈಕಿ ಒಂದಾಗಿರುವ ತಾಲೂಕಿನ ಯಸಳೂರು ಹೋಬಳಿ ಮಾಗಲು ಗ್ರಾಮದ ಕೆಂಚಾಂಬಿಕೆಯ ಕಟ್ಟೆಯಲ್ಲಿ ಹಗಲು ಸುಗ್ಗಿಯು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪಟೇಲರ ಸಮ್ಮುಖದಲ್ಲಿ ಶ್ರೀ ನರಹರಿ ಭಟ್ ಹಾಗೂ ಸಂಗಡಿಗರ ನೇತೃತ್ವದ ಪುರೋಹಿತವರ್ಗ ಅಭಿಷೇಕ, ಅಲಂಕಾರ, ಪೂಜೆ, ಮಹಾಮಂಗಳಾರತಿ ನೆರವೇರಿಸಿದರು.

ಆಲೂರು: ಶ್ರೀ ಕೆಂಚಾಂಬಿಕೆ ದೊಡ್ಡಜಾತ್ರೆಯು ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ಮುಕ್ತಾಯಗೊಂಡ ಬಳಿಕ ಆ ದೇವರ 48 ಹಳ್ಳಿಗಳ ಪೈಕಿ ಒಂದಾಗಿರುವ ತಾಲೂಕಿನ ಯಸಳೂರು ಹೋಬಳಿ ಮಾಗಲು ಗ್ರಾಮದ ಕೆಂಚಾಂಬಿಕೆಯ ಕಟ್ಟೆಯಲ್ಲಿ ಹಗಲು ಸುಗ್ಗಿಯು ವಿಜೃಂಭಣೆಯಿಂದ ನಡೆಯಿತು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪಟೇಲರ ಸಮ್ಮುಖದಲ್ಲಿ ಶ್ರೀ ನರಹರಿ ಭಟ್ ಹಾಗೂ ಸಂಗಡಿಗರ ನೇತೃತ್ವದ ಪುರೋಹಿತವರ್ಗ ಅಭಿಷೇಕ, ಅಲಂಕಾರ, ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಆನಂತರ ದೇವಿಗೆ ಕೆಂಡಕೊಂಡ ಸೇವೆ ನಡೆದು ಹಲವಾರು ಭಕ್ತರು ಹರಕೆ ಸಲ್ಲಿಕೆಯ ರೂಪದಲ್ಲಿ ಕೆಂಡಹಾಯ್ದು ತಮ್ಮ ಭಕ್ತಿ ಮೆರೆದರು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ನರಹರಿ ಭಟ್ಟರು, ಮಾಗಲು ಗ್ರಾಮದಲ್ಲಿ ಶ್ರೀ ಕೆಂಚಾಂಬಿಕೆಯು ಹೇಮಾವತಿ ನದಿಯ ಸನಿಹದಲ್ಲಿ ಇಲ್ಲಿನ ಅನೇಕ ಮರಿ ರಕ್ಕಸರನ್ನು ಸಂಹರಿಸಿ, ಅದಕ್ಕಾಗಿ ಬಳಸಿದ್ದ ಬಿಲ್ಲನ್ನು ಎಸೆದಾಗ ಅಲ್ಲಿಯೇ ಒಂದು ಕೊಳ ನಿರ್ಮಾವಾಯಿತು. ಅದನ್ನು ಇಂದಿಗೂ ಬಿಲ್ಗೊಳ ಎಂದು ಕರೆಯಲಾಗುತ್ತಿದೆ. ಇದು ಹರಿಹಳ್ಳಿಯಲ್ಲಿ ನೆಲೆಸಿರುವ ಕೆಂಚಾಂಬಿಕೆಯ ಮೂರನೇ ಕಲ್ಯಾಣಿ ಇದಾಗಿದ್ದು ಹಿರಿಯರು ಅಭಿಪ್ರಾಯ ಪಡುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಬೂಜಿ ಜಯಂತಿ ಆಚರಣೆಯಲ್ಲಿ ಲೋಪ: 15ರಂದು ದಸಂಸ ಪ್ರತಿಭಟನೆ
ಬಸ್‌ ಡಿಕ್ಕಿ ನವವಿವಾಹಿತ ಬೈಕ್‌ ಸವಾರ ಸಾವು