ಮಲೆಯಾಳಿ ಪ್ರಥಮ ಭಾಷೆ ಮಾಡಲು ಹೊರಟ ಕೇರಳ ಸರ್ಕಾರ: ಖಂಡನೆ

KannadaprabhaNewsNetwork |  
Published : Jan 11, 2026, 02:00 AM IST
10ಕೆಎಂಎನ್ ಡಿ24 | Kannada Prabha

ಸಾರಾಂಶ

ನೂರಾರು ವರ್ಷಗಳಿಂದ ಕಾಸರಗೋಡಿನಲ್ಲಿ ಕನ್ನಡ ಮಾದ್ಯಮ ಶಾಲೆಗಳು ನಡೆಯುತ್ತಿದ್ದು, ಕನ್ನಡವೇ ಸಾರ್ವಭೌಮ ಎನ್ನುತ್ತಿರುವಾಗ ಕೇರಳ ಸರ್ಕಾರ ಇದೀಗ ಕನ್ನಡ ಶಾಲೆಗಳನ್ನು ಮುಚ್ಚುವ ಜೊತೆಗೆ ಕೇರಳ ಭಾಷೆಗೆ ಆದ್ಯತೆ ನೀಡಲು ಮುಂದಾಗಿದೆ. ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಕೇರಳ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಕನ್ನಡ ಶಾಲೆಗಳ ಉಳಿಸುವ ಪ್ರಯತ್ನ ಮಾಡಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜ್ಯದ ಗಡಿಭಾಗ ಕಾಸರಗೋಡಿನಲ್ಲಿ ಕನ್ನಡ ಮಾದ್ಯಮ ಶಾಲೆಗಳನ್ನು ಮುಚ್ಚಿ ಕೇರಳ ಮಲೆಯಾಳಿ ಪ್ರಥಮ ಭಾಷೆಯನ್ನಾಗಿಸಲು ಮುಂದಾಗಿರುವ ಕೇರಳ ಮುಖ್ಯ ಮಂತ್ರಿಗಳ ಕ್ರಮ ಖಂಡಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಟಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು ನೇತೃತ್ವದಲ್ಲಿ ಪಟ್ಟಣದ ಮೈಸೂರು- ಬೆಂಗಳೂರು ಹೆದ್ದಾರಿ ಬಳಿಯ ಕುವೆಂವು ಪುತ್ಥಳಿ ಬಳಿ ಸೇರಿದದ ಕಾರ್ಯಕರ್ತರು ಕೇರಳ ಸರ್ಕಾರದ ಕ್ರಮವನ್ನು ಖಂಡಿಸಿದರು.

ನೂರಾರು ವರ್ಷಗಳಿಂದ ಕಾಸರಗೋಡಿನಲ್ಲಿ ಕನ್ನಡ ಮಾದ್ಯಮ ಶಾಲೆಗಳು ನಡೆಯುತ್ತಿದ್ದು, ಕನ್ನಡವೇ ಸಾರ್ವಭೌಮ ಎನ್ನುತ್ತಿರುವಾಗ ಕೇರಳ ಸರ್ಕಾರ ಇದೀಗ ಕನ್ನಡ ಶಾಲೆಗಳನ್ನು ಮುಚ್ಚುವ ಜೊತೆಗೆ ಕೇರಳ ಭಾಷೆಗೆ ಆದ್ಯತೆ ನೀಡಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಕೇರಳ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಕನ್ನಡ ಶಾಲೆಗಳ ಉಳಿಸುವ ಪ್ರಯತ್ನ ಮಾಡಬೇಕು. ಹೊಸದಾಗಿ ನಿಯಮ ಜಾರಿ ಮಾಡಿ ಕಾಸರಗೋಡಿನಲ್ಲಿ ಕನ್ನಡಕ್ಕೆ ಕುತ್ತು ತರುವ ಯತ್ನ ಮಾಡಿ ಕನ್ನಡಿಗರನ್ನು ಕೆರಳುವಂತೆ ಮಾಡಿದ್ದು ಇದನ್ನು ರಾಜ್ಯ ಸರ್ಕಾರ ತಡೆದು ನಮ್ಮ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ನಂತರ ಕಸಾಪ ಪ್ರಧಾನ ಕಾರ್ಯದರ್ಶಿ ಸ್ವಾಮೀಗೌಡ ಮಾತನಾಡಿ, ಕಾಸರಗೋಡಿನಲ್ಲಿ ಕನ್ನಡ ಭಾಷಿಕರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳ ಗಡಿಭಾಗದ ಕನ್ನಡಿಗರಿಗೆ ತೊಂದರೆ ಯಾಗದಂತೆ ನೋಡಿಕೊಲ್ಳಬೇಕು. ಅಲ್ಲಿನ ಕನ್ನಡಿಗರ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಅವರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆದರೆ ಕಾಸರಗೋಡಿಗೂ ನಮ್ಮ ಕಾರ್ಯಕರ್ತರು ಪ್ರಯಾಣ ಬೆಳೆಸಿ ಕೇರಳ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಪುರುಷೋತ್ತಮ, ಬೌದ್ಧ ಮಹಾಸಭಾ ಅಧ್ಯಕ್ಷ ಕೆ.ಟಿ.ರಂಗಯ್ಯ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಯರಾಮು, ಗ್ರಾಪಂ ಸದಸ್ಯ ಅಪ್ಪಾಜಿ, ರವಿಕಕುಮಾರ್, ಕಡತನಾಳು ಜಯಶಂಕರ್, ಪದಾಧಿಕಾರಿಗಳಾದ ಕೆಆರ್‌ಸ್ ಚಂದ್ರು, ಕರವೇ ಬಸವರಾಜು, ಉಮಾಶಂಕರ್, ದಿನೇಶ್, ಸೀತಾರಾಮು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ