ಕೇರಳ ಹಡಗು ದುರಂತ : ಇಬ್ಬರು ಗಂಭೀರ, ನಾಲ್ವರು ಕಣ್ಮರೆ

KannadaprabhaNewsNetwork |  
Published : Jun 12, 2025, 02:07 AM ISTUpdated : Jun 12, 2025, 11:45 AM IST
೩೨ | Kannada Prabha

ಸಾರಾಂಶ

ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿದುರಂತ ಪ್ರಕರಣದಲ್ಲಿ ರಕ್ಷಣೆಗೊಳಗಾದ 18 ಮಂದಿ ಸಿಬ್ಬಂದಿ ಪೈಕಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ನಾಲ್ವರಿಗೆ ಭಾಗಶಃ ಗಾಯವಾಗಿದೆ.

 ಮಂಗಳೂರು :  ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿದುರಂತ ಪ್ರಕರಣದಲ್ಲಿ ರಕ್ಷಣೆಗೊಳಗಾದ 18 ಮಂದಿ ಸಿಬ್ಬಂದಿ ಪೈಕಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ನಾಲ್ವರಿಗೆ ಭಾಗಶಃ ಗಾಯವಾಗಿದೆ. 

ಆರು ಮಂದಿಯನ್ನು ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ 12  ಮಂದಿಗೆ ನಗರದ ಹೊಟೇಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಕೇರಳದ ಬೇಪೂರ್ ಕಡಲ ಕಿನಾರೆಯಿಂದ 78  ನಾಟಿಕಲ್ ಮೈಲ್ ದೂರದಲ್ಲಿ ಸೋಮವಾರ ಹಡಗಿಗೆ ಬೆಂಕಿ ಆವರಿಸಿತ್ತು. 22 ಮಂದಿ ಸಿಬ್ಬಂದಿಯಿದ್ದ ಹಡಗಿನಲ್ಲಿ ೧೮ ಮಂದಿರ ರಕ್ಷಣೆ ಮಾಡಲಾಗಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ.

ಕೇರಳದ ಬಂದರು ಪ್ರವೇಶಕ್ಕೆ ಅವಕಾಶ ಲಭಿಸದ ಕಾರಣ ಗಾಯಾಳುಗಳನ್ನು ಮಂಗಳೂರಿಗೆ ಕೋಸ್ಟ್‌ಗಾರ್ಡ್‌ ನೌಕೆಯಲ್ಲಿ ಕರೆತರಲಾಗಿದೆ. ಬಂದರಿನಿಂದ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ರವಾನಿಸಲಾಗಿದೆ. ಶ್ರೀಲಂಕಾದಿಂದ ಮುಂಬೈಗೆ ಸಾಗುತ್ತಿದ್ದ ಸಿಂಗಾಪುರ ಮೂಲದ ಹಡಗಿನಲ್ಲಿ ಪೈಂಟ್, ಗನ್ ಪೌಡರ್ ಸೇರಿದಂತೆ ಹಲವು ವಸ್ತುಗಳ ಸಾಗಾಟ ಮಾಡಲಾಗುತ್ತಿತ್ತು.

ಸಿಂಗಾಪುರದ MV ವಾನ್ ಹೈ 503 ಬೆಂಕಿ ಕಾಣಿಸಿದ ಹಡಗು ಆಗಿದೆ. ಭಾರತ್ ನೇವಿ ಶಿಪ್ ಐಎನ್ಎಸ್‌ ಸೂರತ್‌ನ ಯೋಧರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಹಡಗಿನಲ್ಲಿದ್ದು ನಾಪತ್ತೆಯಾದ ನಾಲ್ವರು ಸಿಬ್ಬಂದಿಯ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೋಸ್ಟ್‌ಗಾರ್ಡ್‌ನ ಐಸಿಜಿಎಸ್‌ ರಾಜ್‌ದೂತ್‌ ನೌಕೆ ಶೋಧ ಕಾರ್ಯ ನಡೆಸುತ್ತಿದೆ.

ಹಡಗಿನಲ್ಲಿ ಹರಡಿರುವ ಬೆಂಕಿ ನಂದಿಸಲು ಇಂಡಿಯನ್ ಕೋಸ್ಟ್ ಗಾರ್ಡ್ ಶಿಪ್ ಐಸಿಜಿಎಸ್‌ ಸಚೇತ್ ಮತ್ತು ಸಮುದ್ರ ಪ್ರೆಹರಿ ಪ್ರಯತ್ನ ನಡೆಸುತ್ತಿದೆ. ಈ ಹಡಗಿನಲ್ಲಿ ಚೀನಾದ 8, ತೈವಾನ್ 4 , ಮ್ಯಾನ್ಮಾರ್ 4, ಇಂಡೋನೇಷಿಯಾದ 2 ಮಂದಿ ಸಿಬ್ಬಂದಿ ಇದ್ದರು.

ಈ ಘಟನೆಯಲ್ಲಿ ಹಲವಾರು ಕಂಟೇನರ್‌ಗಳು ಹಡಗಿನಿಂದ ಸಮುದ್ರಕ್ಕೆ ಬಿದ್ದಿರುವ ಬಗ್ಗೆ ಭಾರತೀಯ ತಟರಕ್ಷಣಾ ಪಡೆ ಮಾಹಿತಿ ನೀಡಿದೆ.

WAN HAI 503 ಎನ್ನುವುದು ಕಂಟೈನರ್ ಶಿಪ್ ಆಗಿದ್ದು, IMO number 9294862 ನ ಈ ಶಿಪ್‌ನ್ನು 2005 ರಲ್ಲಿ ನಿರ್ಮಿಸಲಾಗಿದೆ. 262.80 ಮೀಟರ್ ಉದ್ದದ ಈ ಹಡಗು 42,532 ಟನ್‌ ಸರಕು ಸಾಮರ್ಥ್ಯ ಹೊಂದಿದೆ. ಈ ಹಡಗು ಗಂಟೆಗೆ 15 ರಿಂದ 20 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಕೇರಳದ ಬಂದರಿನಲ್ಲಿ ರಕ್ಷಣಾ ಮಾಡಿ ಕರೆದುಕೊಂಡು ಹೋಗಲು ಈ ಹಡಗಿಗೆ ಅನುಮತಿ ಸಿಕ್ಕಿರಲಿಲ್ಲ. ಕೇರಳದ ಕ್ಯಾಲಿಕಟ್‌ನ ಬೇಪೋರ್ ಪೋರ್ಟ್‌ಗೆ ಅನುಮತಿ ಸಿಗಲಿಲ್ಲ. ಹಾಗಾಗಿ ದೂರದ ಮಂಗಳೂರು ಬಂದರಿಗೆ ರವಾನಿಸಲಾಗಿದೆ. ಜೂನ್ 7 ರಂದು ಶ್ರೀಲಂಕಾದಿಂದ ಹೊರಟಿದ್ದ ಹಡಗು, ಜೂನ್ 8 ರಂದು ಕೇರಳದ ಬೇಪೋರ್ ಸಮೀಪ ಅಗ್ನಿ ಅವಘಡ ಸಂಭವಿಸಿದ್ದು, ಜೂನ್ 9 ರ ರಾತ್ರಿ 11.30 ಸುಮಾರಿಗೆ ಮಂಗಳೂರು ಆಸ್ಪತ್ರೆ ತಲುಪಿದ ಗಾಯಾಳುಗಳು. ಜೂನ್ 10 ಬೆಳಗ್ಗೆ 4.30 ಹಡಗು ಮಹಾರಾಷ್ಟ್ರದ ನವಾಶೇವ ತಲುಪಬೇಕಿತ್ತು.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ