ಎಡನೀರು ಮಠಕ್ಕೆ ಕೇರಳ ಸಿಎಂ ಸತೀಶನ್

KannadaprabhaNewsNetwork |  
Published : Nov 21, 2026, 02:30 AM IST
 | Kannada Prabha

ಸಾರಾಂಶ

ಕಾಸರಗೋಡಿನ ಎಡನೀರು ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಎಡನೀರು ಮಠಾಧಿಪತಿ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಮುಖ್ಯಮಂತ್ರಿಗಳನ್ನು

ಮಂಗಳೂರು: ಜಾತ್ಯತೀತತೆಯ ಮಹೋನ್ನತ ಮಾದರಿಯೇ ಎಡನೀರು ಮಠ ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದರು. ಅವರು ಶುಕ್ರವಾರ ಕಾಸರಗೋಡಿನ ಎಡನೀರು ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಎಡನೀರು ಮಠಾಧಿಪತಿ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.

ನಾನು ಕಾನೂನು ವಿದ್ಯಾರ್ಥಿಯಾಗಿದ್ದ ಕಾಲದಲ್ಲೇ ಎಡನೀರು ಮಠದ ಬಗ್ಗೆ ಮೊದಲ ಬಾರಿಗೆ ಕೇಳಿದ್ದೆ. ಮಠಾಧಿಪತಿ ಶ್ರೀ ಕೇಶವಾನಂದ ಭಾರತಿ ಸ್ವಾಮಿ ಪ್ರಕರಣದ ತೀರ್ಪು ಕಾನೂನು ಇತಿಹಾಸದಲ್ಲಿ ಗಮನಾರ್ಹ ಅಧ್ಯಾಯವಾಗಿದೆ. ಇದಕ್ಕೂ ಮೊದಲು ಎರಡು ಬಾರಿ ಮಠಕ್ಕೆ ಭೇಟಿ ನೀಡಿದ್ದೇನೆ. ಶಾಸಕನಾಗಿದ್ದಾಗಲೂ, ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಎಡನೀರು ಮಠಕ್ಕೆ ಭೇಟಿ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.ಅಶೋಕ ಸ್ತಂಭವಿರುವ ಮಠದ ಸ್ಮರಣಿಕೆಯನ್ನು ಸ್ವಾಮೀಜಿ ಅವರು ಮುಖ್ಯಮಂತ್ರಿಗಳಿಗೆ ನೀಡಿದರು. ಮಠದ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಹೂಮಾಲೆ ಹಾಕಿದರು. ಬಳಿಕ ಮುಖ್ಯಮಂತ್ರಿ ಮಠದ ಶ್ರೀ ದಕ್ಷಿಣಾಮೂರ್ತಿ ದೇವರ ದರ್ಶನ ಪಡೆದರು.

ನಂತರ ಶ್ರೀ ಸಚ್ಚಿದಾನಂದ ಭಾರತಿ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಇನ್ನೊಮ್ಮೆ ಬರುವುದಾಗಿ ತಿಳಿಸಿದರು.

ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಕಲ್ಲಟ್ರ ಮಾಹಿನ್ ಹಾಜಿ ಸಿಎಂ ಜೊತೆಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟ್ಲ ನಾಗರಿಕರ ಕನಸು ನನಸು: ಶಾಸಕ ಅಶೋಕ್ ರೈ
ಬರವಣಿಗೆಯಿಂದ ಒತ್ತಡ ಕಡಿಮೆ: ಮೌಲ್ಯ‌ ಬಾಲಾಡಿ