ಓದುವ ಹವ್ಯಾಸವುಳ್ಳವರ ಗ್ರಹಿಕೆಯ ಶಕ್ತಿ ಹೆಚ್ಚುತ್ತದೆ. ಬರವಣಿಗೆಯಿಂದ ಒತ್ತಡ ಕಡಿಮೆಯಾಗುತ್ತದೆ. ಸ್ಕ್ರೀನ್ ಟೈಮಿಂಗ್ ಕಡಿಮೆ ಮಾಡಿ ಓದುವ ಪ್ರೀತಿಯನ್ನು, ಕೃತಕ ಬುದ್ಧಿಮತ್ತೆಯ ಬದಲು ಬುದ್ಧಿಗೆ ವಿದ್ಯಾರ್ಥಿಗಳು ಕೆಲಸಕೊಡಬೇಕೆಂದು ನಿಟ್ಟೆ ಪರಿಗಣಿತ ವಿವಿಯ ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಬಾಲಾಡಿ ಹೇಳಿದರು.
ಕನ್ನಡಪ್ರಭವಾರ್ತೆ ಉಳ್ಳಾಲ
ಓದುವ ಹವ್ಯಾಸವುಳ್ಳವರ ಗ್ರಹಿಕೆಯ ಶಕ್ತಿ ಹೆಚ್ಚುತ್ತದೆ. ಬರವಣಿಗೆಯಿಂದ ಒತ್ತಡ ಕಡಿಮೆಯಾಗುತ್ತದೆ. ಸ್ಕ್ರೀನ್ ಟೈಮಿಂಗ್ ಕಡಿಮೆ ಮಾಡಿ ಓದುವ ಪ್ರೀತಿಯನ್ನು, ಕೃತಕ ಬುದ್ಧಿಮತ್ತೆಯ ಬದಲು ಬುದ್ಧಿಗೆ ವಿದ್ಯಾರ್ಥಿಗಳು ಕೆಲಸಕೊಡಬೇಕೆಂದು ನಿಟ್ಟೆ ಪರಿಗಣಿತ ವಿವಿಯ ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಬಾಲಾಡಿ ಹೇಳಿದರು.ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಬಿ.ಎ ವಿವೇಕ ರೈ ವಿಚಾರ ವೇದಿಕೆಯಲ್ಲಿ ಬಿತ್ತಿ ಪತ್ರಿಕೆ ದಿನಾಚರಣೆಯನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.
ಪ್ರಾಥಮಿಕ ಶಾಲೆಯಿಂದಲೇ ಕನ್ನಡ ಕಲಿಸುವ ವಿಧಾನದಲ್ಲಿ ಬದಲಾವಣೆ ಆಗಬೇಕಿದೆ. ಕನ್ನಡ ಪ್ರೀತಿ ಹೆಚ್ಚಿಸುವ ಶಿಕ್ಷಣ ಬೇಕೇ ಹೊರತು ಅಂಕಗಳಿಗಾಗಿ ಕನ್ನಡ ಎಂಬ ಭಾವನೆ ಇರಬಾರದು ಎಂದರು.ಕಲ್ಪನೆ ಸೇರಿದಾಗ ತೃಪ್ತಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಮಾತನಾಡಿ ಲೋಕಾನುಭವಕ್ಕೆ ಒಡ್ಡಿಕೊಳ್ಳುವುದು, ಅಲ್ಲಿಂದ ಬಂದ ಅನುಭವವನ್ನು ಸಾಮಗ್ರಿ ಮಾಡಿಕೊಂಡು ನಮ್ಮ ಚಿಂತನೆ ಕಲ್ಪನೆಗಳನ್ನು ಸೇರಿಸಿಕೊಂಡು ಬರೆದಾಗ ಬರಹ ತೃಪ್ತಿ ಪ್ರಾಪ್ತವಾಗುತ್ತದೆ ಎಂದರು.
ವಿವಿ ಕಲಾ ನಿಕಾಯದ ಡೀನ್ ಪ್ರೊ.ಸೋಮಣ್ಣ, ಉಪನ್ಯಾಸಕ ಡಾ.ಯಶುಕುಮಾರ್, ಡಾ.ಆನಂದ ಬಿತ್ತಿ ಸಂಪಾದಕ ರವಿ, ಉಪಸಂಪಾದಕಿ ನೇತ್ರಾವತಿ ಇದ್ದರು. ವಿದ್ಯಾರ್ಥಿನಿ ನಿಶ್ಮಿತ ಸ್ವಾಗತಿಸಿದರು. ಸ್ನೇಹ ವಂದಿಸಿದರು. ದಿವ್ಯಶ್ರೀ ನಿರೂಪಿಸಿದರು.