ಕುತ್ತೆತ್ತೂರು - ಪೆರ್ಮುದೆ ಗ್ರಾಮ ವ್ಯಾಪ್ತಿಯ ಪೆರ್ಮುದೆ ಗ್ರಾಮ ಪಂಚಾಯತ್ ಗ್ರಾಮ ಸಭೆ ಗುರುವಾರ ಪೆರ್ಮುದೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕುತ್ತೆತ್ತೂರು - ಪೆರ್ಮುದೆ ಗ್ರಾಮ ವ್ಯಾಪ್ತಿಯ ಪೆರ್ಮುದೆ ಗ್ರಾಮ ಪಂಚಾಯತ್ ಗ್ರಾಮ ಸಭೆ ಗುರುವಾರ ಪೆರ್ಮುದೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಡಿಮೆ ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿದ್ದು ಸಭೆಯ ಕೋರಂ ಬಗ್ಗೆ ಚರ್ಚೆ ನಡೆಯಿತು. ಗ್ರಾ.ಪಂ ಸದಸ್ಯರ ಅವಧಿ ಮುಗಿದಿರುವುದರಿಂದ ಇತ್ತೀಚಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಸೂಕ್ತ ರೀತಿಯ ಪ್ರಚಾರದ ವ್ಯವಸ್ಥೆ ಮಾಡಿದರೂ ಗ್ರಾಮಸಭೆಗೆ ಗ್ರಾಮಸ್ಥರು ಸೇರುವುದು ಕಡಿಮೆಯಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೇಳಿದರು.

ಕೈಗಾರಿಕೆ ಮತ್ತು ನಗರೀಕರಣದ ಕಾರಣದಿಂದಾಗಿ ಗ್ರಾಮಗಳ ಕುಡಿಯುವ ನೀರು ಕಲುಷಿತಗೊಳ್ಳುತ್ತಿದ್ದು ನೀರು ಕುಡಿಯುವುದಕ್ಕೆ ಯೋಗ್ಯವೇ ಎಂಬ ಪರೀಕ್ಷೆಗೆ ಸುರತ್ಕಲ್ ಎನ್ಐಟಿಕೆಯಲ್ಲಿ ನಾಲ್ಕು ಮತ್ತು ಎಂಟು ಸಾವಿರ ರೂಪಾಯಿಗಳ ದರವನ್ನು ಹೇಳುತ್ತಿದ್ದಾರೆ. ಗ್ರಾ.ಪಂ ಶಿಫಾರಸ್ಸು ಪತ್ರ ಇದ್ದರೆ ರೂ 500 ದರದಲ್ಲಿ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಲು ಸೂಚಿಸುವಂತೆ ಆರೋಗ್ಯ ಸಚಿವ ಯುಟಿ ಖಾದರ್ ಮತ್ತು ಸಂಸದರಿಗೆ ಪಂಚಾಯತ್ ಮೂಲಕ ಪತ್ರ ಬರೆಯಬೇಕೆಂಬ ಒತ್ತಾಯ ಕೇಳಿ ಬಂದಿತು.

ಕಾಟಿಪಳ್ಳ-ಕುಲ್ಲಾರು-ಬಾಜಾವು ರಸ್ತೆ ದುರಸ್ಥಿಯ ಬಗ್ಗೆ ಟೆಂಡರ್ ಪಾಸಾಗಿದ್ದು ಸೈಟ್ ಆರ್ಡರ್ ಬಂದಿರದ ಕಾರಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂಬ ಮಾಹಿತಿಯನ್ನು ಪಂಚಾಯತ್ ಅಧಿಕಾರಿಗಳು ನೀಡಿದ್ದು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಕೃಷಿ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿ ದೀಕ್ಷಾ ಮಾಹಿತಿ ನೀಡಿದರು. ಆಹಾರ ನಿರೀಕ್ಷಕ ಸಂತೋಷ್ ಪಡಿತರ ಮತ್ತು ಅಡುಗೆ ಅನಿಲ ಪೂರೈಕೆ ಬಗ್ಗೆ ದೂರುಗಳನ್ನು ಆಲಿಸಿ ಸೂಕ್ತ ಮಾಹಿತಿ ನೀಡಿದರು. ಮೆಸ್ಕಾಂ ಮತ್ತು ಇತರ ಇಲಾಖೆಗಳ ಅಧಿಕಾರಿಗಳು, ಪಂಚಾಯತ್ ಅಧಿಕಾರಿಗಳು ಹಾಜರಿದ್ದರು.