ಕೆರೂರ ಪಿಕೆಪಿಎಸ್‌ಗೆ 95.01 ಲಕ್ಷ ಲಾಭ

KannadaprabhaNewsNetwork |  
Published : Sep 24, 2025, 01:03 AM IST
ಕೆರೂರ | Kannada Prabha

ಸಾರಾಂಶ

ಆಡಳಿತ ಮಂಡಳಿಯ ಪಾರದರ್ಶಕ ಸೇವೆ, ಸಿಬ್ಬಂದಿಯ ಪ್ರಾಮಾಣಿಕ ಜವಾಬ್ದಾರಿ ಜೊತೆ ಠೇವಣಿದಾರರ ಹಾಗೂ ಸಾಲಗಾರರ ಪ್ರಾಮಾಣಿಕ ವಹಿವಾಟು ಸಂಘದ ಬೆಳವಣಿಗೆಗೆ ಕಾರಣ

ಕನ್ನಡಪ್ರಭ ವಾರ್ತೆ ಕೆರೂರ

ಆಡಳಿತ ಮಂಡಳಿಯ ಪಾರದರ್ಶಕ ಸೇವೆ, ಸಿಬ್ಬಂದಿಯ ಪ್ರಾಮಾಣಿಕ ಜವಾಬ್ದಾರಿ ಜೊತೆ ಠೇವಣಿದಾರರ ಹಾಗೂ ಸಾಲಗಾರರ ಪ್ರಾಮಾಣಿಕ ವಹಿವಾಟು ಸಂಘದ ಬೆಳವಣಿಗೆಗೆ ಕಾರಣವಾಗಿದೆ ಎಂದು ಕೆರೂರ ಪಿಕೆಪಿಎಸ್‌ ಅಧ್ಯಕ್ಷ ಆರ್‌.ಎಚ್‌.ಮೆಣಸಗಿ ಹೇಳಿದರು.

ಅವರು ಸೋಮವಾರ ನಡೆದ ಸಂಘದ 65ನೇ ವರ್ಷದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಂಘವು 1786 ಸದಸ್ಯರನ್ನು ಹೊಂದಿ ₹176.75 ಲಕ್ಷ ಶೇರ ಬಂಡವಾಳ ₹442.57ಲಕ್ಷ ಠೇವು, ₹1684.30 ಲಕ್ಷ ದುಡಿಯುವ ಬಂಡವಾಳ ಹೊಂದಿದೆ. ₹490.13 ಲಕ್ಷ ಬೆಳೆಸಾಲ, ಮೆಂಬರ್‌ ಎಂ.ಟಿ. ಸಾಲ ₹25.55, ಕೃಷಿಯೇತರ ಸಾಲ ₹711.69 ಲಕ್ಷ ಸಾಲ ಕೊಟ್ಟು ಕೃಷಿಕರ ಹಾಗೂ ಗ್ರಾಹಕರ ಅಭಿವೃದ್ಧಿಗೆ ಶ್ರಮಿಸಿದೆ. ಪ್ರಸಕ್ತ ವರ್ಷದ ವಸೂಲಲಾತಿ ಶೇ.96.45 ಆಗಿದ್ದು ಸದಸ್ಯರಿಗೆ ಶೇ.9 ಡಿವಿಡೆಂಡ್‌ ವಿತರಿಸಲು ನಿರ್ಧರಿಸಲಾಗಿದೆ. ಆಡಿಟ್‌ ವರ್ಗಿಕರಣ ಎ ಆಗಿದ್ದು ಪ್ರಸಕ್ತ ವರ್ಷದ ನಿವ್ವಳ ಲಾಭ ₹95.01 ಲಕ್ಷ ಆಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉತ್ತಮ ಗ್ರಾಹಕರು, ಉತ್ತಮ ಅಂಕ ಪಡೆದ ಪ್ರತಿಭಾವಂತ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಬದ್ರುದ್ದೀನ ಮುಲ್ಲಾ, ಆಡಳಿತ ಮಂಡಳಿಯ ಮಲ್ಲಿಕಾರ್ಜುನ ಸಾಲೀಮಠ, ಚನ್ನಮಲ್ಲಪ್ಪ ಘಟ್ಟದ, ಬಸಲಿಂಗಪ್ಪ ನಿಲೂಗಲ್ಲ, ಬಸವರಾಜ ಹುಂಡೇಕಾರ, ಹನಮಪ್ಪ ಚೂರಿ, ಬಸವರಾಜ ಬಂತಿ, ಮಹಾದೇವಿ ಮೆಣಸಗಿ, ಲಕ್ಷ್ಮಿ ಜಾಲಿಹಾಳ, ಮಲ್ಲಪ್ಪ ಯಾಳಗಿ, ವಿಠ್ಠಲ ಮಾದರ, ಕೆ.ಎಸ್‌.ಮಠಪತಿ, ಮುಖ್ಯ ಕಾರ್ಯ ನಿರ್ವಾಹಕ ಅಬ್ದುಲ್‌ ರಜಾಕ ನದಾಫ, ವಿಜಯಕುಮಾರ ಕನಕೇರಿಮಠ, ವೀರಪ್ಪ ಕ್ವಾಟಿ, ಮುತ್ತು ಚಾಂದಕವಟೆ, ಮಹ್ಮದ ರಫೀಕ ನದಾಫ, ಮಾರುತಿ ಪೂಜಾರ ಇದ್ದರು. ಪ್ರಗತಿಪರ ರೈತರಾದ ಸಿದ್ದು ಕೊಣ್ಣುರ ರಂಗನಾಥ ದೇಸಾಯಿ, ದಾನಪ್ಪ ಕಿರಗಿ, ಪ್ರಭು ಘಟ್ಟದ, ಪರಶುರಾಮ ಮಲ್ಲಾಡದ ಇದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ