ರಿಯಾಜಅಹ್ಮದ ಎಂ. ದೊಡ್ಡಮನಿ
ಲಾರಿ ಮತ್ತು ಟಿಪ್ಪರ್ ಬ್ಯಾಟರಿ ಹಾಗೂ ಬೊಲೆರೋ ವಾಹನದ ಟೈರ್‌ಗಳನ್ನು ಈ ಪ್ರದೇಶದಲ್ಲಿ ಪದೇ ಪದೇ ಕಳವು ಮಾಡಲಾಗುತ್ತಿದೆ. ಅಂತಹ ಹಲವು ಪ್ರಕರಣಗಳು ನಡೆದಿವೆ. ಈಗ ಗ್ರಾಮಸ್ಥರು ಹೊರಗಿನವರು ಯಾರೇ ಬಂದರೂ ಅನುಮಾನದಿಂದ ನೋಡುವಂತಾಗಿದೆ.
ಡಂಬಳ ಹೊರಠಾಣೆ ವ್ಯಾಪ್ತಿಗೆ 24 ಹಳ್ಳಿಗಳು ಬರುತ್ತವೆ. ರಾಷ್ಟ್ರೀಯ ಹೆದ್ದಾರಿ, ಐತಿಹಾಸಿಕ ದೇವಾಲಯಗಳು, ಮಠಗಳು, ಸಸ್ಯ ಸಂಪತ್ತು ಹೊಂದಿರುವ ಕಪ್ಪತ್ತಗುಡ್ಡ, 10 ಗ್ರಾಪಂ ಕಟ್ಟಡಗಳು, ನೂರಾರು ಗಾಳಿಯಂತ್ರಗಳು, ಸಾವಿರಾರು ಎಕರೆಗಳಲ್ಲಿ ಸೋಲಾರ್, ಶಾಲೆ, ಕಾಲೇಜುಗಳು, ಆಸ್ಪತ್ರೆಗಳ ಸುರಕ್ಷತೆ ನೋಡಿಕೊಳ್ಳಲು ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿ ಕೂಡ ಇರುವುದಿಲ್ಲ.ಗ್ರಾಮೀಣ ಭಾಗದಲ್ಲಿ ಜಮೀನುಗಳಿಗೆ ತೆರಳಲು ರೈತ ಮಹಿಳೆಯರು ಅಂಜುವ ಸ್ಥಿತಿ ಉಂಟಾಗಿದೆ. ಕೆಲವರು ಮನೆ ಭದ್ರತೆಗೆ ಕಬ್ಬಿಣದ ಗ್ರಿಲ್ ಅಳವಡಿಸಿಕೊಳ್ಳತೊಡಗಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳತೊಡಗಿದ್ದಾರೆ. ರಾತ್ರಿ ವೇಳೆ ತಿರುಗಾಡಲು ಕೆಲವರು ಹೆದರುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಹಲವು ಕಳ್ಳತನಗಳು ನಡೆದಿವೆ. ರೈತರ ಜಮೀನುಗಳಲ್ಲಿ ಇಟ್ಟಿರುವ ಟ್ರ್ಯಾಕ್ಟರ್ ಕುಂಟೆ, ರಂಟೆ, ಬಿತ್ತುವ ಯಂತ್ರ, ಹನಿ ನೀರಾವರಿ ಯೋಜನೆಯ ಉಪಕರಣಗಳು ಕಳ್ಳತನವಾಗಿವೆ.
ಇಂತಹ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ರೈತ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು, ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಧೈರ್ಯವಾಗಿರಿ: ಶೀಘ್ರದಲ್ಲಿ ಕಳ್ಳರನ್ನು ಪತ್ತೆ ಹಚ್ಚಲಾಗುವುದು. ಜನರು ಭಯ ಬೀಳುವ ಅವಶ್ಯಕತೆ ಇಲ್ಲ. ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಧೈರ್ಯವಾಗಿರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ