ಸುಳೇಕಲ್ ಬ್ರಹನ್ಮಠಕ್ಕೆ ಸಚಿವ ತಂಗಡಗಿ ಭೇಟಿ

KannadaprabhaNewsNetwork |  
Published : Jan 05, 2026, 02:45 AM IST
ಪೋಟೋಕನಕಗಿರಿ ತಾಲೂಕಿನ ಸುಳೇಕಲ್ ಗ್ರಾಮದ ರಾಜರಾಜೇಶ್ವರಿ ಬ್ರಹನ್ಮಠಕ್ಕೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಭುವನೇಶ್ವರಶ್ರೀಗಳ ಆಶೀರ್ವಾದ ಪಡೆದರು.   | Kannada Prabha

ಸಾರಾಂಶ

ಸುಳೇಕಲ್ ಬ್ರಹನ್ಮಠದಲ್ಲಿನ ರಾಜರಾಜೇಶ್ವರಿ ದೇವಿಯ ಆಶೀರ್ವಾದದಿಂದ ನಾನು ಮೂರ ಭಾರಿ ಶಾಸಕ, ಸಚಿವನಾಗಿದ್ದೇನೆ

ಕನಕಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭಾನುವಾರ ತಾಲೂಕಿನ ಸುಳೇಕಲ್ ಗ್ರಾಮದ ರಾಜರಾಜೇಶ್ವರಿ ಬ್ರಹನ್ಮಠಕ್ಕೆ ಭೇಟಿ ನೀಡಿ ಭುವನೇಶ್ವರ ಶ್ರೀಗಳ ಆಶೀರ್ವಾದ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವರು, ಸುಳೇಕಲ್ ಬ್ರಹನ್ಮಠದಲ್ಲಿನ ರಾಜರಾಜೇಶ್ವರಿ ದೇವಿಯ ಆಶೀರ್ವಾದದಿಂದ ನಾನು ಮೂರ ಭಾರಿ ಶಾಸಕ, ಸಚಿವನಾಗಿದ್ದೇನೆ. ಅದಕ್ಕಾಗಿ ಶ್ರೀಮಠಕ್ಕೆ ಕ್ಷೇತ್ರದಲ್ಲಿ ಪ್ರವಾಸ ಕಾರ್ಯಕ್ರಮವಿದ್ದಾಗಲೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುತ್ತೇನೆ. ಸ್ವಾಮಿಜೀಯೊಂದಿಗೆ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸುತ್ತೇನೆ. ಶ್ರೀಗಳು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಲಹೆ, ಸೂಚನೆ ನೀಡಿದ್ದು, ಮುಂದಿನ ದಿನಮಾನದಲ್ಲಿ ಅವುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ, ಸಿದ್ದನಗೌಡ, ಬಸವಂತಗೌಡ, ವಿರೂಪಾಕ್ಷಗೌಡ, ಮಲಕನಗೌಡ ಬೆನಕನಾಳ, ಈಶಪ್ಪ ಮ್ಯಾಗಳಡೊಕ್ಕಿ, ಮಲ್ಲಿಕಾರ್ಜುನ ರೊಟ್ಟಿ, ವಿರೇಶ ಗಂಗಾವತಿ, ಜಗದೀಶಪ್ಪ ಅಂಗಡಿ, ಆಪ್ತ ಕಾರ್ಯದರ್ಶಿ ವೆಂಕಟೇಶ ಗೋಡಿನಾಳ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ