ಕನ್ನಡಪ್ರಭ ವಾರ್ತೆ ಕೆಜಿಎಫ್ಯುದ್ಧದ ವೇಳೆ ದಾಳಿ ನಡೆದ್ರೆ ನಮ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು, ಸೈರನ್ ಆದ ವೇಳೆಯಲ್ಲಿ ಯಾವ ರೀತಿ ತುರ್ತು ಕ್ರಮಗಳನ್ನು ಕೈಗೊಂಡು ದಿಟ್ಟವಾಗಿ ಎದರಿಸಿ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿದರು.
ಅಣಕು ಪ್ರದರ್ಶನಕ್ಕೆ ಚಾಲನೆ
ಆಪರೇಷನ್ ಅಭ್ಯಾಸ್ ನಾಗರಿಕರ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನಕ್ಕೆ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ತಹಸಿಲ್ದಾರ್ ನಾಗವೇಣಿ, ನಗರಸಭೆ ಪೌರಾಯುಕ್ತ ಪವನ್‌ಕುಮಾರ್ ಚಾಲನೆ ನೀಡಿದರು.ಜನ ನಿಬಿಡ ಪ್ರದೇಶಗಳಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆ, ಅಗ್ನಿಅವಘಡ, ಬಾಂಬ್ ಸ್ಟೋಟ, ಕಟ್ಟಡ ದುರಂತ ಇತರ ಅಹಿತಕರ ಘಟನೆಗಳಿಂದ ಸಾರ್ವಜನಿಕರು ಭಯ ಭೀತರಾಗದೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಸಹಕಾರದೊಂದಿಗೆ ಗೃಹರಕ್ಷದಳ, ಪೋಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಆರೋಗ್ಯ ಇಲಾಖೆ, ತಾಲೂಕು ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ಕೆಜಿಎಫ್‌ನ ನಗರಸಭೆ ಬಸ್ ನಿಲ್ದಾಣದಲ್ಲಿ ಅಣುಕ ಪ್ರದರ್ಶನ ನಡೆಸಲಾಯಿತು.ಒತ್ತೆಯಾಳು ಅಣಕು ಪ್ರದರ್ಶನ
ಬಸ್ ಪ್ರಯಾಣಿಕರ ಒತ್ತ
ಆತಂಕವಾದಿಗಳು ಬಸ್ ಅನ್ನು ಹಾಗೂ ಪ್ರಯಾಣಿಕರನ್ನು ಒತ್ತೆಯಿರಿಸಿಕೊಂಡ ಸಂದರ್ಭದಲ್ಲಿ ನಡೆಯುವ ಘಟನಾವಳಿ ಗಳನ್ನು ರೋಚಕವಾಗಿ ಪ್ರದರ್ಶಿಸಲಾಯಿತು. ವಾಸಸ್ಥಳಗಳ ಮೇಲೆ ಡ್ರೋನ್ ದಾಳಿಯಾದಾಗಿನ ಸಂದರ್ಭಗಳನ್ನು ಸೃಷ್ಟಿಸಿ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನ ನಡೆಸಿದರು.ಅಣುಕು ಪ್ರದರ್ಶನದಲ್ಲಿ ಪೋಲೀಸ್ ಕಮಾಂಡೋಪಡೆ, ಎನ್.ಸಿ.ಸಿ, ಅಗ್ನಿಶಾಮಕ ದಳ, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ, ಗೃಹರಕ್ಷಣ ದಳ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಣುಕು ಕಾರ್ಯನಿರ್ವಹಿಸಿದರು.