ಕವಯಿತ್ರಿ ಅಕ್ಕಮಹಾದೇವಿ ಸ್ವಾಭಿಮಾನದ ಪ್ರತೀಕ: ಪ್ರೊ. ಅಶ್ವಿನಿ ಅಂಗಡಿ

KannadaprabhaNewsNetwork | Published : May 17, 2025 2:07 AM
Follow Us

ಸಾರಾಂಶ

ಅಕ್ಕಮಹಾದೇವಿಯ ಜೀವನವು ಪ್ರತಿದಿನವೂ ಅಗ್ನಿ ಪರೀಕ್ಷೆಯಂತೆ ಇತ್ತು. ತನ್ನ ಅಂತರಂಗದ ಅವಿರಳ ಜ್ಞಾನಕ್ಕೆ ವಚನಗಳ ರೂಪ ಕೊಟ್ಟು, ವಚನ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.

ಹಾವೇರಿ: ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿಯು ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿಯಾಗಿ, ತನ್ನ ಹತ್ತಿರಕ್ಕೆ ಬಂದ ಸರ್ವರನ್ನು ಪ್ರಭಾವಿಸಿದ ಪ್ರತಿಭಾ ಸಂಪನ್ನೆಯಾಗಿ, ಶರಣೆಯ ಕುಲದ ಶಿರೋಮಣಿಯಾಗಿದ್ದಾರೆ ಎಂದು ಜಿ.ಎಚ್. ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಅಶ್ವಿನಿ ಅಂಗಡಿ ತಿಳಿಸಿದರು.ನಗರದ ಅಕ್ಕಮಹಾದೇವಿ ಗುಡಿಯಲ್ಲಿ ಹುಕ್ಕೇರಿಮಠದ ಅಕ್ಕನಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ವೀರಯೋಧರ ರಕ್ಷಣೆಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಕ್ಕಮಹಾದೇವಿಯ ಜೀವನವು ಪ್ರತಿದಿನವೂ ಅಗ್ನಿ ಪರೀಕ್ಷೆಯಂತೆ ಇತ್ತು. ತನ್ನ ಅಂತರಂಗದ ಅವಿರಳ ಜ್ಞಾನಕ್ಕೆ ವಚನಗಳ ರೂಪ ಕೊಟ್ಟು, ವಚನ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅಧ್ಯಾತ್ಮದ ಮೇರು ಶಿಖರವನ್ನು ಏರಿದ ಅವರು ವೈರಾಗ್ಯದ ಪರಾಕಾಷ್ಠೆಗೆ ಅನ್ವರ್ಥವಾಗಿದ್ದಾರೆ. ಬಸವಾದಿ ಶಿವಶರಣರಿಂದ ಗೌರವಕ್ಕೆ ಪಾತ್ರಳಾದವರು ಅಕ್ಕಮಹಾದೇವಿ ಎಂದರು.ಬಳಗದ ಗೌರವಾಧ್ಯಕ್ಷೆ ಅಮೃತಮ್ಮ ಶೀಲವಂತರ ಮಾತನಾಡಿ, ಅಜಗಣ್ಣನ ಐದು ವಚನಕ್ಕೆ ಅಕ್ಕನ ಒಂದು ವಚನ ಸಮ ಎಂದು ವಚನಕಾರರೇ ಹೇಳಿದ್ದಾರೆ. ಇದರಿಂದ ಅಕ್ಕನ ವ್ಯಕಿತ್ವವನ್ನು ತಿಳಿಯಬಹುದು. ಅಕ್ಕನ ವಚನಗಳು ವಿಶಿಷ್ಟ ಸಂವೇದನೆ, ಅನುಭಾವದಿಂದಲೂ ಕನ್ನಡ ಸಾಹಿತ್ಯದ ಮೇರು ಬೆಳವಣಿಗೆಗಳಾಗಿವೆ. ವಚನಗಳ ಅಧ್ಯಯನವು ಅತಿ ಅಗತ್ಯವಾಗಿದೆ ಎಂದರು.ಸಮಾರಂಭದಲ್ಲಿ ಕುರುಬಗೊಂಡ ವೀರಭದ್ರಶಾಸ್ತ್ರಿ ಮತ್ತು ಲಲಿತಕ್ಕ ಹೊರಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಪರೇಶಷನ್ ಸಿಂಧೂರನಲ್ಲಿ ಭಾಗವಹಿಸಿದ್ದ ನಮ್ಮ ಸೈನಿಕರಿಗೆ ಅಭಿನಂದನೆ ಸಲ್ಲಿಸಿ, ಅವರ ಆತ್ಮಸ್ಥೈರ್ಯ ಹೆಚ್ಚಲಿ ಎಂದು ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.ಅಕ್ಕನ ಬಳಗದ ಅಧ್ಯಕ್ಷೆ ಅಕ್ಕಮಹಾದೇವಿ ಭರತನೂರಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗೀತಾ ಅಟವಾಳಗಿ, ಶೋಭಾ ಮೇವುಂಡಿಮಠ, ಸುರೇಖಾ ಮಳಗಿ, ಲಲಿತಾ ಅಂಕಲಕೋಟಿ, ಗೌರಮ್ಮ ತಾಂಡೂರ, ಶಶಿಕಲಾ ತುರಮರಿ, ಕುಸುಮಾ ಮಾಗನೂರ, ಶ್ವೇತಾ ಶೆಟ್ಟರ, ಎಸ್.ಎಚ್. ಮಡಿವಾಳರ, ಮಹಾಂತಮ್ಮ ಶೀಲವಂತರ, ಲೀಲಾವತಿ ಬಸನಗೌಡ್ರ, ರೇಣುಕಾ ಮಡಿವಾಳರ, ಬಿ.ವಿ. ಕನವಳ್ಳಿ ಇತರರಿದ್ದರು. ಸಂಗೀತಾ ಹಿರೇಮಠ ಪ್ರಾರ್ಥಿಸಿದರು. ಸಾವಿತ್ರಿ ವಾಡ್ನಾಳಮಠ ಸ್ವಾಗತಿಸಿದರು. ಸುರೇಖಾ ಮಾಗನೂರ ನಿರೂಪಿಸಿದರು. ಲಲಿತಾ ಶಿವಶೆಟ್ಟರ ವಂದಿಸಿದರು.Poet Akkamahadevi is a symbol of self-esteem: Prof. Ashwini shop

ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ. ಅಶ್ವಿನಿ ಅಂಗಡಿ

ಹಾವೇರಿ ಸುದ್ದಿ, ಅಕ್ಕಮಹಾದೇವಿ, ಪ್ರೊ. ಅಶ್ವಿನಿ ಅಂಗಡಿ, Haveri News, Akkamahadevi, Prof. Ashwini shopಅಕ್ಕಮಹಾದೇವಿಯ ಜೀವನವು ಪ್ರತಿದಿನವೂ ಅಗ್ನಿ ಪರೀಕ್ಷೆಯಂತೆ ಇತ್ತು. ತನ್ನ ಅಂತರಂಗದ ಅವಿರಳ ಜ್ಞಾನಕ್ಕೆ ವಚನಗಳ ರೂಪ ಕೊಟ್ಟು, ವಚನ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.