ಕನ್ನಡಪ್ರಭ ವಾರ್ತೆ ಉಡುಪಿ
90ರ ದಶಕದಿಂದ ಕನ್ನಡ ಸಿನಿಮಾರಂಗದಲ್ಲಿದ್ದ ಅವರು ಉಪೇಂದ್ರ ನಿರ್ದೇಶನದ ಓಂ ಸಿನಿಮಾದಿಂದ ಖ್ಯಾತರಾಗಿದ್ದರು. ಇತ್ತೀಚೆಗಿನ ಹಿಟ್ ಸಿನಿಮಾ ಕೆಜಿಎಫ್‌ನಲ್ಲಿ ಚಾಚಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಆಸ್ಪತ್ರೆ ಪಾಲಾದ ನಂತರ ಅವರು ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿದ್ದರು. ಕೆಜಿಎಫ್ ಸಿನಿಮಾ ಹೀರೋ ಯಶ್ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಮಾಡಿದ್ದರು.ಉಡುಪಿಯಲ್ಲಿ ಕಾಲೇಜು ದಿನಗಳಲ್ಲಿಯೇ ಸಿನಿಮಾದ ವಿಪರೀತ ಹುಚ್ಚು ಬೆಳೆಸಿಕೊಂಡಿದ್ದ ಹರೀಶ್ ಆಚಾರ್ಯ, ಒಂದೆರಡು ಹೊಡೆದಾಟ, ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದರು. ನಂತರ ಉಪೇಂದ್ರ ಅವರ ಪರಿಚಯದಲ್ಲಿ ಬೆಂಗಳೂರಿಗೆ ತೆರಳಿ ಸಿನಿಮಾರಂಗ ಸೇರಿ, ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದರು. ರಾಜ್ ಬಹದ್ದೂರ್, ನನ್ನ ಕನಸಿನ ಹೂವೆ, ಜೋಡಿ ಹಕ್ಕಿ, ತಾಯವ್ವ, ಅಂಡರ್ ವರ್ಲ್ಡ್, ನಲ್ಲ, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ಮತ್ತು ಮೀಂದುಮ್ ಒರು ಕಾದಲ್ ಕಧೈ ಎಂಬ ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು.