ಮಂಡ್ಯ ಮಂಜುನಾಥ
ನಾಗಮಂಗಲ ತಾಲೂಕು ಕಸಬಾ ಹೋಬಳಿ ಸರ್ವೇ ನಂ.೧೬೮ರಲ್ಲಿ ೧೯೮.೦೩ ಎಕರೆ ಡೀಮ್ಡ್ ಅರಣ್ಯ ಪ್ರದೇಶವಿದ್ದು, ಇದರಲ್ಲಿ ೧೫.೩೪ ಎಕರೆ ಪ್ರದೇಶದಲ್ಲಿ ಖಬರಸ್ಥಾನ್ ಸುನ್ನಿ ಕಟ್ಟಡಗಳಿರುವುದು ಕಂಡುಬಂದಿದೆ. ೧೧೭.೦೬ ಎಕರೆ ಪ್ರದೇಶವನ್ನು ವಿವಿಧ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗವನ್ನು ಅರಣ್ಯ ಇಲಾಖೆ ಮರುವಶಕ್ಕೆ ಪಡೆಯಬಹುದೆಂದು ಜಿಲ್ಲಾಧಿಕಾರಿ ಆದೇಶವಿದ್ದರೂ ಇದುವರೆಗೂ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳು ಮೂಡುವಂತೆ ಮಾಡಿದೆ.
೨೦೧೬ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ನಾಗಮಂಗಲ ತಾಲೂಕು ವ್ಯಾಪ್ತಿಯ ಡೀಮ್ಡ್ ಫಾರೆಸ್ಟ್ ಸಂಚಲನಾ ಸಮಿತಿ ಸಭೆಯಲ್ಲಿ ಡೀಮ್ಡ್ ಅರಣ್ಯ ಜಾಗವನ್ನು ಗುರುತಿಸಿ ೧೧೯ ಎಕರೆ ಜಮೀನನ್ನು ಅರಣ್ಯ ಇಲಾಖೆಯಲ್ಲೇ ಮುಂದುವರೆಸಬಹುದು ಎಂದು ಆದೇಶಿಸಿದ್ದರೂ ಆ ಜಾಗದಿಂದ ಕಟ್ಟಡಗಳು ತೆರವಾಗಿಲ್ಲ. ಈ ಸಭೆಯಲ್ಲಿ ಆದ ನಿರ್ಣಯಕ್ಕೆ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ವಲಯ ಅರಣ್ಯಾಧಿಕಾರಿ, ಜಿಲ್ಲಾಧಿಕಾರಿ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರು, ತಹಸೀಲ್ದಾರ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಷರಾ ಬರೆದು ಸಹಿ ಹಾಕಿದ್ದರೂ ಆ ಜಾಗವನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆಯದಿರುವುದು ದಾಖಲೆಗಳಿಂದ ತಿಳಿದುಬಂದಿದೆ.೪ ಮಾರ್ಚ್ ೧೯೮೨ರಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಹೊರಡಿಸಿರುವ ಅಧಿಸೂಚನೆ ಆದೇಶದಲ್ಲಿ ನಾಗಮಂಗಲ ತಾಲೂಕು ಕಸಬಾ ಹೋಬಳಿ ನಾಗಮಂಗಲ ಸರ್ವೇ ನಂ.೧೬೮ರಲ್ಲಿ ಡೀಮ್ಡ್ ಮೀಸಲು ಅರಣ್ಯಕ್ಕೆ ೧೯೮.೦೩ ಎಕರೆ ಪ್ರದೇಶ ನೀಡಲಾಗಿದೆ. ಆಕಾರ್‌ಬಂದ್‌ನಂತೆ ೧೯೮.೦೪ ಎಕರೆ ವಿಸ್ತೀರ್ಣವಿದ್ದು, ಅರಣ್ಯ ಇಲಾಖೆಗೆ ೩೪ ಎಕರೆ ಆರ್‌ಟಿಸಿ ಇಂಡೀಕರಣವಾಗಿದೆ.
ಸರ್ವೇ ನಂ.೧೬೮ರ ೧೫.೩೪ ಎಕರೆ ವಿಸ್ತೀರ್ಣದಲ್ಲಿ ನಾಗಮಂಗಲ ಖಬರ್‌ಸ್ಥಾನ ಸುನ್ನಿ (ದರ್ಗಾ ಹಜರತ್) ಕಟ್ಟಡಗಳು ಇವೆ. ಅಲ್ಲದೆ ಇದೇ ಸರ್ವೇ ನಂಬರ್‌ನ ೧೧೭.೦೬ ಎಕರೆ ಪ್ರದೇಶ ಕೆಲವು ಖಾಸಗಿ ವ್ಯಕ್ತಿಗಳಿಗೆ ಭೂ ಮಂಜೂರಾತಿಯಾಗಿದೆ. ಮಂಜೂರಾತಿಯ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಂಡು ಉಳಿಕೆ ಜಮೀನನ್ನು ಅರಣ್ಯ ಇಲಾಖೆಯಲ್ಲೇ ಮುಂದುವರೆಸಬಹುದು ಎಂದು ನಿರ್ಣಯ ಮಾಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಯವರು ಗುರುತಿಸಿಕೊಟ್ಟಿಲ್ಲವೆಂದು ದೂರುತ್ತಿದ್ದಾರೆ.
ಅನುಭವದಲ್ಲಿರುವ ಬಗ್ಗೆ ತಪ್ಪು ಮಾಹಿತಿ..!:
- ಸಂಪತ್, ವಲಯ ಅರಣ್ಯಾಧಿಕಾರಿ, ನಾಗಮಂಗಲ