ಕಿದಿಯೂರು ನಾಗಲಕ್ಷ್ಮಿ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿದಿಯೂರು ವೆಂಕಟ್ ರಾವ್ ಸಂಸ್ಮರಣೆ ಹಾಗೂ ಸಹಾಯಧನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಉಡುಪಿ: ಕಿದಿಯೂರು ನಾಗಲಕ್ಷ್ಮಿ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿದಿಯೂರು ವೆಂಕಟ್ ರಾವ್ ಸಂಸ್ಮರಣೆ ಹಾಗೂ ಸಹಾಯಧನ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿಯ ನ್ಯಾಯವಾದಿ ವಾಣಿ ವಿ. ರಾವ್ ಅವರು, ಮಕ್ಕಳಲ್ಲಿ ದೇವರನ್ನು ಕಂಡವರು ಕಿದಿಯೂರು ವೆಂಕಟ ರಾವ್. ಅವರು ಅವಕಾಶ ವಂಚಿತ ಮಕ್ಕಳು ಜೀವನದಲ್ಲಿ ಬೆಳಕನ್ನು ಕಾಣಬೇಕೆನ್ನುವುದು ಉದ್ದೇಶದಿಂದ ಈ ಟ್ರಸ್ಟ್ ಸ್ಥಾಪಿಸಿದ್ದಾರೆ. ಪ್ರತಿ ವಿನಿಯೋಗವೂ ಸಾದ್ವಿನಿಯೋಗ ಆಗಬೇಕೆಂಬುದು ಅವರ ಆಶಯವಾಗಿತ್ತು, ಈ ನಿಟ್ಟಿನಲ್ಲಿ ಈಗ ಟ್ರಸ್ಟ್ ಅವರ ಉದ್ದೇಶವನ್ನು ಸಾರ್ಥಕಗೊಳಿಸುತ್ತಿರುವುದು ಸಂತೋಷದ ವಿಷಯ ಎಂದರು.
ಟ್ರಸ್ಟಿನ ಅಧ್ಯಕ್ಷ ಮಂಗಳೂರಿನ ನ್ಯಾಯವಾದಿ ಪಿ. ರಂಜನ್ ರಾವ್, ಪ್ರತಿವರ್ಷ ನಮ್ಮ ಟ್ರಸ್ಟ್ ಸುಮಾರು 5 ಲಕ್ಷ ರು.ಗೂ ಮಿಕ್ಕಿ ಮೊತ್ತವನ್ನು ವಿದ್ಯಾರ್ಥಿಗಳ ಹಾಗೂ ಬಡಜನರ ಆರೋಗ್ಯಕ್ಕಾಗಿ ವಿನಯೋಗಿಸುತ್ತಿದೆ. ಇಂದು ಸಹಾಯ ಪಡೆದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡು, ನಂತರ ಇತರರಿಗೆ ನೆರವಾಗುವ ಸಂಕಲ್ಪ ಹೊಂದಬೇಕು ಎಂದರು.ವೆಂಕಟ ರಾವ್ ಕುಟುಂಬದಿಂದ ವಕೀಲ ವೃತ್ತಿಗೆ ಬಂದ ಪ್ರಥಮ ಮಹಿಳೆ ನಿಧಿ ರಾವ್ ಕಿದಿಯೂರು ಅವರನ್ನು ಸಮ್ಮಾನಿಸಲಾಯಿತು.ಟ್ರಸ್ಟ್‌ನ ಟ್ರಸ್ಟಿಗಳಾದ ಬಿ.ಜಿ. ರಾವ್ ಅಂಬಲಪಾಡಿ, ಪ್ರೊ. ಶ್ರೀಶ ಆಚಾರ್ಯ,ಯು. ಕೆ. ರಾಘವೇಂದ್ರ ರಾವ್, ಕೆ. ನಾಗೇಶ್ ಭಟ್, ಕೆ. ನಾಗರಾಜ ರಾವ್, ರಾಮಚಂದ್ರ ಉಪಾಧ್ಯಾಯ, ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್., ಕೆ. ರಘಪತಿ ರಾವ್ ಉಪಸ್ಧಿತರಿದ್ದರು. ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ ರಾವ್ ಸ್ವಾಗತಿಸಿದರು. ಟ್ರಸ್ಟಿಗಳಾದ ಮುರಲಿ ಕಡೆಕಾರು ಪ್ರಾಸ್ತಾವಿಕ ಮಾತನಾಡಿದರು. ಜಯಶ್ರೀ ಆರ್. ಕಿದಿಯೂರು ವಂದಿಸಿದರು. ಕಾರ್ಯದರ್ಶಿ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.