ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು
ಈ ಸಂದರ್ಭ ಮಲಿನ ನೀರನ್ನು ನೇರವಾಗಿ ಚರಂಡಿಗಳ ಮೂಲಕ ನದಿಗಳಿಗೆ ಹರಿಸುತ್ತಿರುವ ಉದ್ದಿಮೆದಾರರಿಗೆ ಲೈಸೆನ್ಸ್ ರದ್ದು ಪಡಿಸುವ ಎಚ್ಚರಿಕೆ ನೀಡಲಾಯಿತು. ಹಾಗೂ 15 ದಿನಗಳ ಕಾಲಾವಕಾಶವನ್ನು ನೀಡಿದ್ದು, ಈ ಅವಧಿಯಲ್ಲಿ STP ನಿರ್ಮಾಣ ಮಾಡಿ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಮಾಡುವ ಬಗ್ಗೆ ತಿಳಿ ಹೇಳಲಾಯಿತು.
ವಾಣಿಜ್ಯ ಸಂಸ್ಥೆಗಳು ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸುತ್ತಿರುವುದನ್ನು ಈ ಸಂದರ್ಭದಲ್ಲಿ ಖಾತ್ರಿಪಡಿಸಲಾಯಿತು. ಅಲ್ಲದೆ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅನಧಿಕೃತವಾಗಿ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿರುವ ಉದ್ದಿಮೆದಾರರಿಗೆ ಹಾಗೂ ವಾರ್ಷಿಕ ತೆರಿಗೆ ಪಾವತಿಸದಿರುವ ವರ್ತಕರಿಗೆ ನೋಟಿಸ್ ಜಾರಿ ಮಾಡಲಾಯಿತು.ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಎಂ.ಆರ್. ಅವರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೌಮ್ಯ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪ್ಪ, ಪ್ರದೀಪ್, ಉಮಾ, ಚಿದಾನಂದ, ಸುಶೀಲಾ, ಯಶೋದಾ, ಸರ್ವ ಮಂಗಳ, ನಿತ್ಯಾನಂದ, ಗಂಗಮ್ಮ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರಸ್ವಾಮಿ, ಕರವಸೂಲಿಗಾರ ಸಮಂತ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.