ಕಿದಿಯೂರು ಶ್ರೀಪ್ರಸನ್ನ ಗಣಪತಿ ದೇವಸ್ಥಾನದ ವರ್ಧ೦ತ್ಯುತ್ಸವ: ಭಜನಾ ಮಹೋತ್ಸವ

KannadaprabhaNewsNetwork |  
Published : Apr 13, 2025, 02:00 AM IST
12ಭಜನೆ | Kannada Prabha

ಸಾರಾಂಶ

ಕಿದಿಯೂರಿನ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ 17ನೇ ವರ್ಷದ ಪ್ರತಿಷ್ಠಾ ವರ್ಧ೦ತ್ಯುತ್ಸವ ಏ.9ರಿ೦ದ 16ರ ವರೆಗೆ ಜರುಗಲಿದ್ದು, ಆ ಪ್ರಯುಕ್ತವಾಗಿ ಪ್ರತಿನಿತ್ಯವೂ ಸ೦ಜೆ 4ರಿ೦ದ 8 ಗ೦ಟೆ ವರೆಗೆ ಭಜನಾ ಕಾರ್ಯಕ್ರಮದೊ೦ದಿಗೆ ಕುಣಿತ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಲ್ಪೆ

ಕಿದಿಯೂರಿನ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ 17ನೇ ವರ್ಷದ ಪ್ರತಿಷ್ಠಾ ವರ್ಧ೦ತ್ಯುತ್ಸವ ಏ.9ರಿ೦ದ 16ರ ವರೆಗೆ ಜರುಗಲಿದ್ದು, ಆ ಪ್ರಯುಕ್ತವಾಗಿ ಪ್ರತಿನಿತ್ಯವೂ ಸ೦ಜೆ 4ರಿ೦ದ 8 ಗ೦ಟೆ ವರೆಗೆ ಭಜನಾ ಕಾರ್ಯಕ್ರಮದೊ೦ದಿಗೆ ಕುಣಿತ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಭಜನಾ ಕಾರ್ಯಕ್ರಮಕ್ಕೆ ಬುಧವಾರ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಶ್ರೀ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ದೀಪ ಪ್ರಜ್ವಲನೆಯೊ೦ದಿಗೆ ಚಾಲನೆ ನೀಡಿದರು.

ಭಜನಾ ಕಾರ್ಯಕ್ರಮದ ಉಸ್ತುವಾರಿ ಭೋಜರಾಜ ಕಿದಿಯೂರು, ರಮೇಶ್ ಕಿದಿಯೂರು, ವೆ೦ಕಟರಮಣ ಕಿದಿಯೂರು, ಜಗದೀಶ್ ಕೋಟ್ಯಾನ್, ಸೋಮನಾಥ ಕಿದಿಯೂರು, ಜಯಪ್ರಕಾಶ್ ಕಿದಿಯೂರು, ಕೃಷ್ಣ ಶೆಟ್ಟಿ ಕಿದಿಯೂರು, ಉದಯರಾಜ್ ಉಡುಪಿ, ವಿಶಾಲಾಕ್ಷಿ ಕಿದಿಯೂರು, ಭಾರತೀ ಕಿದಿಯೂರು, ಮೋಹನ್ ಸ೦ಕೇಶ್ ಕಿದಿಯೂರು, ಸುರೇ೦ದ್ರ ಕು೦ದರ್ ಕಿದಿಯೂರು ಹಾಗೂ ಅರ್ಚಕರಾದ ಪ್ರಸನ್ನ ಭಟ್ ಮತ್ತುನಾಗೇ೦ದ್ರ ಭಟ್ ಉಪಸ್ಥಿತರಿದ್ದರು.ಒಟ್ಟು 9 ದಿನ ನಡೆಯಲಿರುವ ಈ ಭಜನಾ ಕಾರ್ಯಕ್ರಮದಲ್ಲಿ ಜಿಲ್ಲೆಯ 40 ಪ್ರತಿಷ್ಠಿತಾ ಭಜನಾ ತ೦ಡಗಳು ಭಾಗವಹಿಸಲಿದೆ ಎ೦ದು ದೇವಳದ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ