ಡ್ಯಾನ್ಸ್ ಮೇಳದಲ್ಲಿ ಕಿಂಗ್ಸ್ ಆಫ್ ಕೂರ್ಗ್ ಪ್ರಥಮ

KannadaprabhaNewsNetwork |  
Published : Jan 31, 2024, 02:16 AM IST
ಚಿತ್ರ : 30ಎಂಡಿಕೆ6 : ಡ್ಯಾನ್ಸ್ ಮೇಳದಲ್ಲಿ ಕಿಂಗ್ಸ್ ಆಫ್ ಕೂರ್ಗ್ ಪ್ರಥಮ | Kannada Prabha

ಸಾರಾಂಶ

ಸುಂಟಿಕೊಪ್ಪದ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ಪ್ರಥಮ, ಕಾಲೇಜು ವಿಭಾಗದಲ್ಲಿ ಪ್ರಥಮ, ಹಾಗೂ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಮಾಡಿದೆ. ಇದರೊಂದಿಗೆ ಮುಳಿಯ ಜುವೆಲ್ಸ್ ಆನ್‌ಲೈನ್ ಮೂಲಕ ನಡೆಸಿದ ಮುಳಿಯ ರಾಷ್ಟ್ರ ಸಿಂಚನ ನೃತ್ಯ ಸ್ಪರ್ಧೆಯ ಗುಂಪು ಸ್ಪರ್ಧೆ ವಿಭಾಗದಲ್ಲಿಯೂ ದ್ವಿತೀಯ ಸ್ಥಾನ ಗಳಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸುಂಟಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ರಜತ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಡ್ಯಾನ್ಸ್ ಮೇಳದಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಪ್ರಥಮ ಸೇರಿದಂತೆ ಮೂರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.

ಸುಂಟಿಕೊಪ್ಪದ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ಪ್ರಥಮ, ಕಾಲೇಜು ವಿಭಾಗದಲ್ಲಿ ಪ್ರಥಮ, ಹಾಗೂ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಮಾಡಿದೆ. ಇದರೊಂದಿಗೆ ಮುಳಿಯ ಜುವೆಲ್ಸ್ ಆನ್‌ಲೈನ್ ಮೂಲಕ ನಡೆಸಿದ ಮುಳಿಯ ರಾಷ್ಟ್ರ ಸಿಂಚನ ನೃತ್ಯ ಸ್ಪರ್ಧೆಯ ಗುಂಪು ಸ್ಪರ್ಧೆ ವಿಭಾಗದಲ್ಲಿಯೂ ದ್ವಿತೀಯ ಸ್ಥಾನ ಗಳಿಸಿದೆ. ಕಿಂಗ್ಸ್ ಆಫ್ ಕೂರ್ಗ್‌ನ ನೃತ್ಯ ಸಂಯೋಜಕರಾದ ಮಹೇಶ್ ಹಾಗೂ ಕಿರಣ್ ಅವರು ಮಾರ್ಗದರ್ಶನದಲ್ಲಿ ಸಂಸ್ಥೆಯ ಕಲಾವಿದರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸಂವಿಧಾನ ಜಾಗೃತಿ ಜಾಥಾ:

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಸಮೀಪದ ಕಕ್ಕಬೆ - ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು.

ಜಾಥಾದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರುಪಾಲ್ಗೊಂಡಿದ್ದರು.

ಕಕ್ಕಬ್ಬೆಯ ಆಟೋ ಚಾಲಕರು ಆಟೋ ಮೆರವಣಿಗೆ ನಡೆಸಿ ಜಾಗೃತಿ ಜಾಥಾಕ್ಕೆ ಸ್ವಾಗತ ಕೋರಿ ಗಮನ ಸೆಳೆದರು.ಬಳಿಕ ಕಕ್ಕಬೆ ಕೃಷಿ ಪತ್ತಿನ ಸಹಕಾರ ಸಂಘ ದ ಸಭಾಂಗಣದಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ ಪಿ.ಎಲ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಬೀನಾ ಸುಚಿತ್ರ , ಪಂಚಾಯತಿ ಸದಸ್ಯರಾದ ಹರೀಶ್ ಮೊಣ್ಣಪ್ಪ, ಕುಂಡಂಡ ರಜಾಕ್ , ಬಷೀರ್, ಇಂದಿರಾ,ಶೈಲಾ, ಲೀಲಾವತಿ, ಬೋಪಣ್ಣ, ಸಫೀಯಾ, ಕುಡಿಯರ ಮುತ್ತಪ್ಪ, ಗ್ರಾಮ ಅಭಿವೃದ್ಧಿ ಅಧಿಕಾರಿ ಅಶೋಕ್ ಮತ್ತಿತರರು ಇದ್ದರು.

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ, ಛದ್ಮವೇಷ, ಭಾಷಣ, ಪ್ರಬಂಧ, ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನವನ್ನು ವಿತರಿಸಲಾಯಿತು.ಸಂವಿಧಾನದ ರಚನೆ, ಆಶಯಗಳ ಕುರಿತು ಶಿಕ್ಷಕಿ ರಜಿನಾ ಮತ್ತು ಸಮಾಜ ಕಲ್ಯಾಣ ಇಲಾಖೆಯ ಬಾಲಕೃಷ್ಣ ರೈ ಮಾತನಾಡಿ ಜಾತದ ಸಮಗ್ರ ಮಾಹಿತಿ ನೀಡಿದರು.

ಪಿಡಿಒ ಆಶೋಕ್ ಸ್ವಾಗತಿಸಿದರು. ಕೆ ಪಿ ಬಾಣೆ ಶಾಲೆಯ ಶಿಕ್ಷಕ ಗಣೇಶ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೇರುಕುಪ್ಪೆ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟನೆ
ಬೇಲೂರು ಪುರಸಭೆ ಅಧ್ಯಕ್ಷರಾಗಿ ಅಕ್ರಮ್ ಶರೀಫ್ ಆಯ್ಕೆ