ಕನ್ನಡಪ್ರಭವಾರ್ತೆ ಮೂಲ್ಕಿ
ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ರಾಮ ನಾಮ ಜಪ ಅಭಿಯಾನದಲ್ಲಿ ಭಾಗವಹಿಸಿ ಅನುಗ್ರಹ ಸಂದೇಶ ನೀಡಿ ಮಾತನಾಡಿದ ಅವರು, ರಾಮ ಮಂದಿರದಲ್ಲಿ ನಿರಂತರ ಭಜನೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ನಮ್ಮ ಸಮಾಜದ ಘನತೆ ಹೆಚ್ಚಿಸಿದ್ದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕಿನ್ನಿಗೋಳಿ ಶ್ರೀ ರಾಮ ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್, ಸಮಿತಿ ಉಪಾಧ್ಯಕ್ಷ ಅದಿತ್ಯ ಎಂ. ಕಾಮತ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಮಂಜುನಾಥ ಮಲ್ಯ, ರಾಘವೇಂದ್ರ ಪ್ರಭು, ನಾಮದೇವ ಕಾಮತ್, ಗಣೇಶ್ ಪ್ರಸಾದ್ ಕಾಮತ್, ಗುರುದತ್ತರಾವ್, ರಾಜೇಶ್ ಕಾಮತ್ , ಸಚ್ಚಿದಾನಂದ ಭಟ್, ರಘುವೀರ ಕಾಮತ್, ಅನಂತ ಕಾಮತ್ ಭಾಸ್ಕರ ಶೆಣೈ, ಮಾತೃ ಮಂಡಳಿಯ ಭಾರತೀ ಶೆಣೈ, ವಿಜಯಾ ಪ್ರಭು, ರಾಧಾ ಶೆಣೈ, ವಾರಿಜಾ ಕಾಮತ್, ಸಂಧ್ಯಾ ಮಲ್ಯ, ಸೀಮಾ ಭಟ್, ರಘುವೀರ ಕಾಮತ್, ಸಂಧ್ಯಾ ಮಲ್ಯ, ನಂದಿತಾ ರಾವ್ ಮತ್ತಿತರರಿದ್ದರು.ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್ ಸ್ವಾಗತಿಸಿದರು. ವೇ. ಮೂ. ಗಿರೀಶ್ ಭಟ್ ಪ್ರಸ್ತಾವನೆಗೈದರು.