ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಕಿರಣ್‌ ಕುಮಾರ್

KannadaprabhaNewsNetwork |  
Published : Mar 21, 2025, 12:34 AM IST
ಅರಸೀಕೆರೆ: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಎ.ಜಿ. ಕಿರಣ್‌ಕುಮಾರ್ ಅವರನ್ನು ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಹೇಮಂತ್‌ಕುಮಾರ್ ಅವರನ್ನು ನೇಮಕ ಮಾಡಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಹೇಳಿದರು. | Kannada Prabha

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಎ.ಜಿ. ಕಿರಣ್‌ ಕುಮಾರ್ ಅವರನ್ನು ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಹೇಮಂತ್‌ ಕುಮಾರ್ ಅವರನ್ನು ನೇಮಕ ಮಾಡಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಎ.ಜಿ. ಕಿರಣ್‌ ಕುಮಾರ್ ಅವರನ್ನು ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಹೇಮಂತ್‌ ಕುಮಾರ್ ಅವರನ್ನು ನೇಮಕ ಮಾಡಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಅಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ನೆಲ, ಜಲ, ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ನಾಡಿಗೆ ಅನ್ಯಾಯವಾದಾಗ ಹೋರಾಡಿ ಸರ್ಕಾರವನ್ನು ಸರಿ ದಾರಿಗೆ ತರುವ ಕರ್ನಾಟಕ ರಕ್ಷಣಾ ವೇದಿಕೆ ಹಲವು ವರ್ಷಗಳಿಂದ ತನ್ನ ಹೋರಾಟದ ಮೂಲಕ ನಾಡಿಗೆ ನ್ಯಾಯವನ್ನು ಒದಗಿಸುವಲ್ಲಿ ಶ್ರಮಿಸುತ್ತಿದೆ ಎಂದರು.

ಕೇವಲ ರಾಜ್ಯದ ಸಮಸ್ಯೆ ಅಲ್ಲದೇ ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಒತ್ತು ನೀಡುವುದು, ಹಲವು ಪರೀಕ್ಷೆಗಳನ್ನು ಕನ್ನಡದಲ್ಲಿ ಮಾಡುವಂತೆ, ಕನ್ನಡದಲ್ಲಿ ನಾಮಫಲಕ ಅಳವಡಿಕೆ, ಗಡಿ ಸಮಸ್ಯೆ, ಖಾಸಗಿ ಕೈಗಾರಿಕೆಯಲ್ಲಿ ಕನ್ನಡಿಗರಿಗೆ ಉದ್ಯೋಗ, ಎಂವಿಎಸ್‌ನ ಪುಂಡಾಟಿಕೆಗೆ ಬುದ್ಧಿ ಹೇಳುವ ಕೆಲಸವನ್ನು ಮಾಡಿ ಕನ್ನಡ ನಾಡು, ಕನ್ನಡಿಗರ ರಕ್ಷಣೆಗೆ ಕರವೇ ಶ್ರಮಿಸುತ್ತಿದೆ ಎಂದರು.

ನೂತನ ತಾಲೂಕು ಅಧ್ಯಕ್ಷ ಎ.ಜಿ. ಕಿರಣ್‌ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕಳೆದ ೨೫ ವರ್ಷಗಳಿಂದ ರಕ್ಷಣಾ ವೇದಿಕೆ ಸ್ಥಾಪನೆಗೊಂಡು ಹಲವು ಹೋರಾಟಗಳನ್ನು ಮಾಡುತ್ತ ಬಂದಿದೆ. ಇನ್ನು ಮುಂದೆಯೂ ಹಲವು ಸೇವಾ ಕಾರ್ಯಗಳನ್ನು ಮಾಡಲಾಗುವುದು ಎಂದರು. ನಗರಸಭೆ ಮಾಜಿ ಅಧ್ಯಕ್ಷ ಸಿ. ಗಿರೀಶ್, ರಮೇಶ್‌ನಾಯ್ಡು, ಜಿಲ್ಲಾ ಉಪಾಧ್ಯಕ್ಷ ಹೇಮಂತ್‌ ಕುಮಾರ್, ತುಳಸಿದಾಸ್, ತಾ.ಗೌರವಾಧ್ಯಕ್ಷ ಲಕ್ಷ್ಮೀಶ್, ರಮೇಶ್, ಎ.ಬಿ. ಸಂತೋಷ್, ಗಂಗಾಧರ್, ಕಮಲಮ್ಮ, ರವಿಶಂಕರ್, ರಘು, ರುಕ್ಮಿಣಿ ಜಯಕುಮಾರ್, ದಿಲೀಪ್‌ಕುಮಾರ್, ಪ್ರಸನ್ನ, ಯುವ ಘಟಕದ ಅಧ್ಯಕ್ಷ ರಕ್ಷಿತ್, ದಿವಾಕರ್, ಪರಮೇಶ್, ಅರುಣ್, ಗಂಡಸಿ ಶಶಿಧರ್ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ