ಸೂಲಿಬೆಲೆ: ಸಂವಿಧಾನ ಬದ್ದವಾಗಿ ನೀಡಿರುವ ಮಹಿಳಾ ಮೀಸಲು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಹಾಗೂ ಮಹಿಳೆಯರು ಸಬಲರಾಗಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು.
ಗ್ರಾಪಂ ಸಭಾಂಗಣದಲ್ಲಿ ಜೇನುಗೂಡು ಟ್ರಸ್ಟ್, ನಾಡಪ್ರಭು ಕೆಂಪೇಗೌಡ ಯುವಕರ ಸಂಘ, ಸೂಲಿಬೆಲೆ ಗ್ರಾಪಂ ಹಾಗೂ ಆಶ್ರಯ ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಡುಗೆ ಮನೆಯಿಂದ ವಿಮಾನಯಾನದವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಗುರುತಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣದ ಆಸ್ತಿ ನೀಡಬೇಕು, ಸ್ವಾವಲಂಬಿಯಾಗಿ ಜೀವಿಸುವ ಅತ್ಮಸ್ಥರ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು ಎಂಬ ನಾಣ್ಣುಡಿಯಂತೆ ಒಬ್ಬ ವಿದ್ಯಾವಂತ ಹೆಣ್ಣು ಮಗು ಇಡೀ ಕುಟುಂಬವನ್ನು ವಿದ್ಯಾವಂತರನ್ನಾಗಿಸುವ ಶಕ್ತಿ ಹೊಂದಿರುತ್ತಾಳೆ ಎಂದರು.
ಸೂಲಿಬೆಲೆ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಮೋಹನ್‌ಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು, ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆಗಳಂತಹ ಉದ್ಯೋಗವಕಾಶಗಳನ್ನು ಪಡೆಯಬೇಕು, ಮಹಿಳಾ ಸಬಲೀಕರಣವಾಗಬೇಕು. ಸ್ವಯಂ ಉದ್ಯೋಗವಕಾಶ ಸೃಷ್ಟಿಸಿಕೊಳ್ಳಬೇಕು ಎಂದರು.ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ ಮಾತನಾಡಿ, ಸರ್ಕಾರಿ ಸವಲತ್ತುಗಳನ್ನು ಮಹಿಳೆಯರಿಗೆ ತಲುಪಿಸುತ್ತಿದ್ದೇವೆ, ಯೋಜನೆಗಳನ್ನು ಮಹಿಳಾ ಮೀಸಲಾತಿಯಂತೆ ಅನುಷ್ಠಾನ ಮಾಡುತ್ತೇವೆ, ಗ್ರಾಪಂ ಜನಪ್ರತಿನಿಧಿಗಳ ಆಯ್ಕೆಯಲ್ಲೂ ಶೇ. ೩೩ರಷ್ಟು ಮಹಿಳಾ ಸದಸ್ಯರು ಚುನಾಯಿತರಾಗಿದ್ದಾರೆ ಎಂದರು.
ಪಿಡಿಒ ವಿಜಯಕುಮಾರಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಒಂದು ಹೆಣ್ಣು ಸಬಲೆಯಾಗಿ ಸ್ವಾಲವಂಬಿಯಾಗಿ ಜೀವಿಸುವ ಎಲ್ಲಾ ಅವಕಾಶಗಳಿವೆ. ಹೆಣ್ಣು ಮಕ್ಕಳು ಕಡ್ಡಾಯ ಶಿಕ್ಷಣ ಪಡೆಯಬೇಕು ಎಂದರು.ಇದೇ ವೇಳೆ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಮಹಿಳಾ ಸಂಘ, ಧರ್ಮಸ್ಥಳದ ಸಂಘದ ಸಾಧಕ ಮಹಿಳೆಯರಿಗೆ ಜೇನುಗೂಡು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಹಸೀನಾ, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೆಗೌಡ, ನಿರ್ದೇಶಕ ದೇವಿದಾಸ್ ಸುಬ್ರಾಯ್ ಶೇಠ್, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ನಿರ್ದೇಶಕಿ ಕೆ.ವಿ.ವಿಜಯಲಕ್ಷ್ಮಿ, ಆಶ್ರಯ ಸಂಜೀವಿನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಅನುರಾಧ, ಸಂಚಾಲಕಿ ಮಹಾಲಕ್ಷ್ಮೀ, ಗ್ರಾಪಂ ಸದಸ್ಯರಾದ ವಿದ್ಯಾಶ್ರೀ, ಅನಿತಾ, ರಾಜೇಶ್ವರಿ, ಗ್ರಾಪಂ ಕಾರ್ಯದರ್ಶಿ ಚಂದ್ರಪ್ಪ, ಬಿಲ್ ಕಲೆಕ್ಟರ್ ನಾಗರತ್ನ, ಕವಿತಾ, ಪತ್ರಕರ್ತ ಮಂಜುನಾಥ್ ಇತರರಿದ್ದರು.(ಫೋಟೋ ಕ್ಯಾಪ್ಷನ್)
ಸೂಲಿಬೆಲೆ ಗ್ರಾಪಂ, ಜೇನುಗೂಡು ಟ್ರಸ್ಟ್ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಗೋಪಾಲಗೌಡ,ಉದ್ಘಾಟಿಸಿದರು..