ಕನ್ನಡಪ್ರಭ ವಾರ್ತೆ ಕೋಲಾರಭಾರತ ಸರ್ಕಾರದ ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್-ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲ್ಲೂಕಿನ ಚೌಡದೇನಹಳ್ಳಿ ಈ ನೆಲ-ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ-೨೦೨೫ ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಸಂಬಂಧ ಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ೧೧.೩೦ ಆದರೂ ಯಾವ ಕ್ರೀಡಾಪಟುಗಳು ಸಹ ಕಾರ್ಯಕ್ರಮದಲ್ಲಿ ಹಾಜರಾಗಿರಲ್ಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಇರಲಿಲ್ಲ. ಕೇವಲ ಮಾಡಿ ಇಂತಹ ಪುಕ್ಕಟೆ ಪ್ರಚಾರ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ನ್ಯಾಯಾಧೀಶರಾದ ಸುನಿಲ್ ಹೊಸಮನಿಯವರನ್ನು ಆಹ್ವಾನಿಸಲಾಗಿತ್ತು, ಉಳಿದಂತೆ ಸರ್ಕಾರಿ ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಗಳಲ್ಲಿ ಪ್ರಕಟಿಸಿ ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಅಧಿಕಾರಿಗಳೇ ನಾಪತ್ತೆ
ಈ ಕಾರ್ಯಕ್ರಮದ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ವೆಂಕಟಚಲಪತಿ ಹೊರತುಪಡಿಸಿ ಯಾವ ಅಧಿಕಾರಿಗಳು ಇರಲಿಲ್ಲ ೩-೪ ಮಂದಿ ದೈಹಿಕ ಶಿಕ್ಷಕರು ಹಾಜರಾಗಿದ್ದು ಹೊರತುಪಡಿಸಿ ಇಡೀ ಕ್ರೀಡಾಂಗಣದಲ್ಲಿ ಯಾರೂ ಕಂಡು ಬರಲಿಲ್ಲ. ನ್ಯಾಯಾಧೀಶರಾದ ಸುನಿಲ್ ಹೊಸಮನಿ ಅವರು ೨-೩ ಭಾರಿ ವೆಂಕಟಚಲಪತಿ ಅವರ ಮೊಬೈಲ್‌ಗೆ ಕರೆ ಮಾಡಿ ಕ್ರೀಡಾಪಟುಗಳು, ಅಧಿಕಾರಿಗಳು ಬಂದಿಲ್ಲವೇಕೆ ಎಂದು ಪ್ರಶ್ನಿಸಿ ಸುಸ್ತು ಆದರೂ ಮಾಧ್ಯಮದವರು ಬೇಸತ್ತು ವಾಪಸ್ಸಾದರು.