ಹಾನಗಲ್ಲ: ನಾಡಿನ ಎಲ್ಲ ಗ್ರಾಮಗಳಿಗೆ ರಂಗಗ್ರಾಮ ಶೇಷಗಿರಿ ಮಾದರಿಯಾಗಿದ್ದು, ಕಲೆ ಸಂಸ್ಕೃತಿಯ ಉಳಿವಿಗಾಗಿ ಇಲ್ಲಿನ ಯುವಕರ ಶ್ರಮ ಸಾರ್ಥಕವಾಗಿದೆ ಎಂದು ಶಿಗ್ಗಾಂವಿಯ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡರ ತಿಳಿಸಿದರು.ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಕರ್ನಾಟಕ ರಂಗಾಯಣ ಧಾರವಾಡ, ಶೇಷಗಿರಿಯ ಗಜಾನನ ಯುವಕ ಮಂಡಳದ ಸಹಯೋಗದಲ್ಲಿ ಆಯೋಜಿಸಿದ್ದ ನಾಟಕಕಾರ ಜಿ.ಬಿ. ಜೋಷಿ ಅವರ ಸತ್ತವರ ನೆರಳು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಕಲಾ ಪೋಷಣೆಯಲ್ಲಿ ಯುವ ಜನಾಂಗದ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳಲ್ಲಿ ರಂಗಭೂಮಿಯ ಅಭಿರುಚಿ ಮೂಡಿಸಬೇಕು. ಇದರಿಂದ ಅನೇಕ ಕೆಡುಕುಗಳನ್ನು ತಪ್ಪಿಸಲು ಸಾಧ್ಯ ಎಂದರು.ಹಾವೇರಿಯ ಹಂಚಿನಮನಿ ಆರ್ಟ್ ಗ್ಯಾಲರಿಯ ಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ಶೇಷಗಿರಿ ಒಂದು ಸಾಂಸ್ಕೃತಿಕ ಆಂದೋಲನವನ್ನೇ ಯಶಸ್ವಿ ಮಾಡಿದೆ. ನಾಟಕ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಶೇಷಗಿರಿಯ ಕೊಡುಗೆ ಅಪಾರವಾದುದು. ರಂಗಭೂಮಿಯ ಅತ್ಯುಚ್ಛವಾದ ಬೆಳವಣಿಗೆಯನ್ನು ಇಲ್ಲಿ ನೋಡಲು ಸಾಧ್ಯ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಮಾತನಾಡಿ, ಶೇಷಗಿರಿ ಹಲವು ದಶಕಗಳ ಪ್ರಾಮಾಣಿಕ ಪ್ರಯತ್ನದಿಂದಾಗಿ ಇಷ್ಟು ದೊಡ್ಡದಾಗಿ ರಂಗಭೂಮಿ ಕಾರ್ಯದಲ್ಲಿ ಬೆಳೆದು ನಿಂತಿದೆ. ರಂಗಭೂಮಿಯಂತಹ ಸಾಂಸ್ಕೃತಿಕ ಮಾಧ್ಯಮ ಪ್ರತಿ ಊರು ಕೇರಿಯಲ್ಲಿ ಬೆಳೆಯುವಂತಾದರೆ ಸಾಂಸ್ಕೃತಿಕ ಭಾರತದ ಕನಸು ನನಸಾಗಬಲ್ಲದು ಎಂದರು.ಶಂಕ್ರಪ್ಪ ಗುರಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಿಳವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕುರುಬರ, ಗ್ರಾಪಂ ಸದಸ್ಯೆ ಸುಶೀಲಾ ತಳವಾರ, ಸಿದ್ದಪ್ಪ ಅಂಬಿಗೇರ, ವಿರುಪಾಕ್ಷ ಹಾವನೂರ, ಪ್ರಭು ಗುರಪ್ಪನವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಾಗರಾಜ ಧಾರೇಶ್ವರ ಸ್ವಾಗತಿಸಿದರು. ಸಂತೋಷ ಎಸ್.ಎಲ್. ಕಾರ್ಯಕ್ರಮ ನಿರೂಪಿಸಿದರು. ಕಾಲುವೆ, ಸೇವಾ ರಸ್ತೆ ಅಭಿವೃದ್ಧಿಗೆ ಚಾಲನೆ
ಹಾನಗಲ್ಲ: ಸಿಂಗಾಪುರ ಕಾಲುವೆ ಅಭಿವೃದ್ಧಿಪಡಿಸಬೇಕೆಂಬ ಹಲವು ದಿನಗಳ ಬೇಡಿಕೆ ಈಗ ಈಡೇರಿದ್ದು, ತಾಲೂಕಿನ ವರ್ದಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ₹91 ಲಕ್ಷ ವೆಚ್ಚದಲ್ಲಿ ಸಿಂಗಾಪುರ ಕಾಲುವೆ ಮತ್ತು ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಅವರು ಭೂಮಿಪೂಜೆ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಸಿಂಗಾಪುರ ಕಾಲುವೆ ಅಭಿವೃದ್ಧಿಪಡಿಸಬೇಕು ಎನ್ನುವುದು ಹತ್ತಾರು ವರ್ಷಗಳ ಬೇಡಿಕೆಯಾಗಿತ್ತು. ಕಾಲುವೆ ಬಹುತೇಕ ಮುಚ್ಚಿ ಹೋಗಿದ್ದರಿಂದ ನರೇಗಲ್ ಕೆರೆ ನೀರು ಮುಂದೆ ಹರಿದು ಸಿಂಗಾಪುರ ಕೆರೆಗೆ ತಲುಪದೇ ಹೊಲ, ಗದ್ದೆಗಳಿಗೆ ನುಗ್ಗಿ, ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಟಿಸುತ್ತಿತ್ತು. ಹಾಗಾಗಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಲುವೆ ಮೂಲಕ ನೀರು ಸಿಂಗಾಪುರ ಕೆರೆಯ ಒಡಲು ಭರ್ತಿ ಮಾಡುವುದರಿಂದ 700 ಎಕರೆಗೂ ಹೆಚ್ಚು ಪ್ರದೇಶಕ್ಕೆ ಭತ್ತದ ನಾಟಿಗೆ ಅನುಕೂಲವಾಗಲಿದ್ದು, ಕಾಲುವೆಗೆ ಮರುಜೀವ ನೀಡಿದ ಖುಷಿ ಇದೆ ಎಂದರು.ಗ್ರಾಪಂ ಸದಸ್ಯರಾದ ಫಕ್ಕಿರೇಶ ಅಗಸಿಬಾಗಿಲ, ಈರಪ್ಪ ಬೂದಿಹಾಳ, ರೇವಣೆಪ್ಪ ಬಾರ್ಕಿ, ಬಸವರಾಜ ಬಾರ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಡಿಯವರ, ಮುಖಂಡರಾದ ಕಲವೀರಪ್ಪ ಪವಾಡಿ, ಮಹಬಳೇಶ್ವರ ಸವಣೂರ, ಹೂವಯ್ಯ ಹಿರೇಮಠ, ರಜಾಕ್ ನರೇಗಲ್, ಸುರೇಶ ಮರಿಲಿಂಗಣ್ಣನವರ, ಸುರೇಶ ಮಾಚಾಪೂರ, ತಿರಕಪ್ಪ ಹಂಚಿನಮನಿ, ಬಸಪ್ಪ ಮಲ್ಲಮ್ಮನವರ, ಗುರುಶಾಂತಪ್ಪ ಹಲಸೂರ, ತಿರಕಪ್ಪ ಹಂಚಿನಮನಿ, ಕರ್ನಾಟಕ ನೀರಾವರಿ ನಿಗಮದ ಎಇಇ ಪ್ರಹ್ಲಾದ್ ಶೆಟ್ಟಿ ಇದ್ದರು.