ಕೊಣ್ಣೂರ ಶಾಲೆಯ ಕೀರ್ತಿ ರಾಜ್ಯಕ್ಕೆ ೭ನೇ ರ‍್ಯಾಂಕ್‌

KannadaprabhaNewsNetwork |  
Published : Apr 24, 2026, 03:15 AM IST
ಕೊಣ್ಣೂರ ಆಂಗ್ಲ ಮಾಧ್ಯಮ ಶಾಲೆಯ ಕೀರ್ತಿ ಸೋರಗಾಂವಿ ರಾಜ್ಯಕ್ಕೆ ೭ ನೇ ರ‍್ಯಾಂಕ! | Kannada Prabha

ಸಾರಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೊಣ್ಣೂರ ಆಂಗ್ಲ ಮಾಧ್ಯಮ ಶಾಲೆಯ ಫಲಿತಾಂಶ ಶೇ.99.43ರಷ್ಟಾಗಿದೆ.ಕೀರ್ತಿ ರವೀಂದ್ರ ಸೋರಗಾಂವಿ ೬೧೯ ಅಂಕ ಪಡೆದು ರಾಜ್ಯಕ್ಕೆ ೭ನೇ ರ‍್ಯಾಂಕ್‌, ಪವನ ಈಶ್ವರಪ್ಪ ಮಂಡಿ ೬೧೭ ರಾಜ್ಯಕ್ಕೆ ೯ನೇ ರ‍್ಯಾಂಕ್‌ ಪಡೆದಿದೆ.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೊಣ್ಣೂರ ಆಂಗ್ಲ ಮಾಧ್ಯಮ ಶಾಲೆಯ ಫಲಿತಾಂಶ ಶೇ.99.43ರಷ್ಟಾಗಿದೆ.ಕೀರ್ತಿ ರವೀಂದ್ರ ಸೋರಗಾಂವಿ ೬೧೯ ಅಂಕ ಪಡೆದು ರಾಜ್ಯಕ್ಕೆ ೭ನೇ ರ‍್ಯಾಂಕ್‌, ಪವನ ಈಶ್ವರಪ್ಪ ಮಂಡಿ ೬೧೭ ರಾಜ್ಯಕ್ಕೆ ೯ನೇ ರ‍್ಯಾಂಕ್‌ ಪಡೆದಿದ್ದು, ಅತ್ಯುತ್ತಮ ಶ್ರೇಣಿಯಲ್ಲಿ ೭೧, ಪ್ರಥಮ ಶ್ರೇಣಿಯಲ್ಲಿ ೭೯ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕನ್ನಡ–೨೫, ಹಿಂದಿ-೧೧, ಸಮಾಜ ವಿಜ್ಞಾನ–೭ ವಿದ್ಯಾರ್ಥಿಗಳು ವಿಷಯವಾರು ಪ್ರತಿಶತ ೧೦೦ ಅಂಕ, ಪ್ರಥಮ ಭಾಷೆ ಇಂಗ್ಲಿಷ್‌ ವಿಷಯದಲ್ಲಿ ೧೨೫ಕ್ಕೆ ೯ ವಿದ್ಯಾರ್ಥಿಗಳು ೧೨೪ ಅಂಕ ಪಡೆದಿದ್ದಾರೆ ಎಂದು ಸಂಸ್ಥಾಪಕ ಪ್ರಾಚಾರ್ಯ ಪ್ರೊ.ಬಸವರಾಜ ಕೊಣ್ಣೂರ ತಿಳಿಸಿದ್ದಾರೆ.

ಅನೂಪ ರಾಮಪ್ಪ ತೇಲಿ (೬೧೫) ತೃತೀಯ, ವಿಜಯ ಶ್ರೀಕಾಂತ ವಾಳಕೆ ೬೧೧, ಆರುಷ ದೀಪಕ ತೇಲಿ (೬೦೯), ಸತೀಶ ವಿರೂಪಾಕ್ಷ ಸಿದ್ದಾಪೂರ ೬೦೬, ವೇದಿಕಾ ಅಶೋಕ ರಾಠಿ (೬೦೬), ಅನುಷಾ ರಾಜು ಸಾವಕಾರ (೬೦೫), ವಿವೇಕ ಪ್ರಕಾಶ ಯರಗಟ್ಟಿ (೬೦೩), ಹರೀಶ ಸದಾಶಿವ ದಾಸರ (೫೯೭), ರುತುಜಾ ಬಾಹುಬಲಿ ಕೋರಿ (೫೯೪) ಉತ್ತಮ ಸಾಧನೆ ಮಾಡಿದ್ದಾರೆ. ಪ್ರಾಚಾರ್ಯ ಪ್ರೊ. ಬಸವರಾಜ ಕೊಣ್ಣೂರ, ಸಂಸ್ಥೆಯ ಉಪಾಧ್ಯಕ್ಷ ನಿಖಿಲ ಕೊಣ್ಣೂರ, ಆಡಳಿತಾಧಿಕಾರಿ ಶೀತಲ ಕೊಣ್ಣೂರ ಹಾಗೂ ದಾನೇಶ ಕೊಣ್ಣೂರ ಮುಖ್ಯಶಿಕ್ಷಕ ಈರಣ್ಣ ಯಾದವಾಡ, ಉಪ ಮುಖ್ಯಶಿಕ್ಷಕ ಸಿದ್ದು ಬೆಳಗಲಿ ಹಾಗೂ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಲ್‌ ತುಂಬದ್ದಕ್ಕೆ ಶಾಸಕರ ಕಚೇರಿಗೆ ವಿದ್ಯುತ್ ಕಟ್
ವಿಪಕ್ಷಗಳಿಂದ ಭಾರತ ಮಾತೆಯ ಭ್ರೂಣ ಹತ್ಯೆ