ಕಾಲು ಜಾರಿ ಬಾವಿಯಲ್ಲಿ ಬಿದ್ದು ವ್ಯಕ್ತಿ ಸಾವು

KannadaprabhaNewsNetwork |  
Published : Apr 24, 2026, 03:15 AM IST
ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೇಟಿ ನೀಡಿದ ಚಿತ್ರ | Kannada Prabha

ಸಾರಾಂಶ

ಬಾದಾಮಿ: ತೆರೆದ ಬಾವಿಯಲ್ಲಿ ಮರ ಬಿದ್ದಿದ್ದನ್ನು ಸ್ವಚ್ಛಗೊಳಿಸಲು ಹೋಗಿ ಕಾಲು ಜಾರಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಮುಷ್ಟಿಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಬಾದಾಮಿ: ತೆರೆದ ಬಾವಿಯಲ್ಲಿ ಮರ ಬಿದ್ದಿದ್ದನ್ನು ಸ್ವಚ್ಛಗೊಳಿಸಲು ಹೋಗಿ ಕಾಲು ಜಾರಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಮುಷ್ಟಿಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ರೈತ ಸೋಮಲಿಂಗ ದ್ಯಾಮಣ್ಣ ಇದ್ಲಿ(50) ಮೃತಪಟ್ಟ ದುರ್ದೈವಿ. ಗ್ರಾಮದ ತೆರೆದ ಭಾವಿ ಹತ್ತಿರ ಮರ ಬಿದ್ದತ್ತು, ಅದನ್ನು ಸ್ವಚ್ಛಗೊಳಿಸಲು ಹೋಗಿ ಕಾಲು ಜಾರಿ ಬಾವಿಯೊಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತಹಸೀಲ್ದಾರ್‌ ಎಸ್.ಬಿ. ಬೊಮ್ಮನ್ನವರ, ಆರೋಗ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಶಾಸಕರು ಸಂತ್ರಸ್ತರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಊರಿನ ಗುರು-ಹಿರಿಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಲ್‌ ತುಂಬದ್ದಕ್ಕೆ ಶಾಸಕರ ಕಚೇರಿಗೆ ವಿದ್ಯುತ್ ಕಟ್
ವಿಪಕ್ಷಗಳಿಂದ ಭಾರತ ಮಾತೆಯ ಭ್ರೂಣ ಹತ್ಯೆ