ಕನ್ನಡಪ್ರಭ ವಾರ್ತೆ ವಿಜಯಪುರ
ರಾಣಿ ಚನ್ನಮ್ಮಳ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸಿ ಗೌರವ ಸಲ್ಲಿಸುವ ಜತೆಗೆ ನಾಡಿಗೆ ಒಗ್ಗಟ್ಟಿನ ಸಂದೇಶ ಸಾರುವುದು ಉತ್ಸವದ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸಂಸ್ಕೃತಿ ಉತ್ಸವ ಆಯೋಜಿಸುವ ಯೋಜನೆಯಿದ್ದು, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾವಂತರಿಗೆ ಪುರಸ್ಕಾರ, ಕೃಷಿಕರಿಗೆ ಉಪನ್ಯಾಸ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ನಾಳೆ ಪೂರ್ವಭಾವಿ ಸಭೆ
ಕಾರ್ಯಕ್ರಮದ ರೂಪುರೇಷಗಳ ಕುರಿತು ನ.19ರಂದು ಸಂಜೆ 5ಕ್ಕೆ ನಗರದ ಶಾಂತಿನಿಕೇತನ ಸಿಬಿಎಸ್‌ಇ ಶಾಲೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಎಲ್ಲ ಸಮಾಜಗಳ ಮುಖಂಡರು ಹಾಗೂ ಬಾಂಧವರು ಸಭೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಹೊನ್ನಮಲ್ಲ ಸಾರವಾಡ ಮಾತನಾಡಿ, ನಾಡಿನ ನೆಲ, ಜಲದ ರಕ್ಷಣೆಗಾಗಿ ಹೋರಾಡಿದ ಎಲ್ಲ ಹೋರಾಟಗಾರರು ಹಾಗೂ ಮಹಾತ್ಮರನ್ನು ಗೌರವಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಚನ್ನಮ್ಮ ಅವರ ಹೋರಾಟಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಉತ್ಸವ ಆರಂಭಿಸಲಾಗಿದೆ. ಇದರಲ್ಲಿ ಸರ್ವ ಜನಾಂಗದ ನಾಯಕರು ಭಾಗವಹಿಸಲಿದ್ದಾರೆ. ಕಳೆದ ವರ್ಷ ಸಮಾಜದ 470ಕ್ಕೂ ಅಧಿಕ ಪ್ರತಿಭಾವಂತರನ್ನು ಪುರಸ್ಕರಿಸಲಾಗಿತ್ತು. ಮುಂದಿನ ದಿನಗಳಲ್ಲಿಯೂ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಪದಾಧಿಕಾರಿಗಳಾದ ಅಶೋಕ ಪಾಟೀಲ, ಬಿ.ಎಂ.ಬಿರಾದಾರ, ಬಸವರಾಜ ಕಳಸಗೊಂಡ, ಅಶೋಕ ಬಿರಾದಾರ, ಎಂ.ಎಂ.ಪಾಟೀಲ ಹಾಗೂ ಶಂಕರ ಸೋಂಪುರ ಉಪಸ್ಥಿತರಿದ್ದರು.