ದೊಡ್ಡಬಳ್ಳಾಪುರ: ನಾವುಗಳು ಬದುಕುತ್ತಿರುವುದು ಪ್ರತಿಭಾವಂತ ಯುಗದಲ್ಲಿ. ಇಲ್ಲಿ ಸ್ಪರ್ಧೆಯೇ ಮುಖ್ಯ. ಈ ಸ್ಪರ್ಧೆಯಲ್ಲಿ ಜಯಿಸಲು ಅಗತ್ಯ ಇರುವ ಸಾಧನಗಳೆಂದರೆ ವಿದ್ಯೆ, ಜ್ಞಾನ, ಕೌಶಲ್ಯ ಎಂದು ಸಾಹಿತಿ ಡಾ.ಚಿಕ್ಕಹೆಜ್ಜಾಜಿ ಮಹದೇವ್ ಹೇಳಿದರು.
ನಗರದ ಬಸವ ಭವನದಲ್ಲಿ ತಾಲೂಕು ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ ಪತ್ರಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣಕ್ಕೆ ಬಡತನ ಹೋಗಲಾಡಿಸುವ ಶಕ್ತಿ ಇದೆ. ಪ್ರತಿಭೆ ಇದ್ದವರು ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಜೀವಿಸಬಲ್ಲ ಅರ್ಹತೆ ಹೊಂದಿರುತ್ತಾರೆ. ಬಾಲ್ಯದಲ್ಲಿ, ಯೌವನದಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿದರೆ ಇಡೀ ಜೀವನದಲ್ಲಿ ಸುಖವಾಗಿರಲು ಸಾಧ್ಯ. ಉತ್ತಮ ಗುರಿಯೊಂದಿಗೆ ಮುನ್ನುಗ್ಗಿ ನಡೆಯುವವರಿಗೆ ಅವಕಾಶಗಳು ಸದಾ ತೆರೆದುಕೊಳ್ಳುತ್ತವೆ. ಮನುಷ್ಯ ಸದಾ ಮಹತ್ವಾಕಾಂಕ್ಷಿಯಾಗಿರಬೇಕು. ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಸ್ನೇಹಿತರೊಂದಿಗೆ ಇದ್ದರೆ ಮಾತ್ರವೇ ನಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಯಾವುದೇ ಕೆಲಸಕ್ಕೆ ಮುಂದಾದರು ಶೇ.100ರಷ್ಟು ಗಮನ ಕೇಂದ್ರೀಕರಿಸಿದರಷ್ಟೇ ನಮ್ಮ ಗುರಿಮುಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ ನಗದು ಪುರಸ್ಕಾರ ನೀಡಿ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವುದು ಅಭಿನಂದನೀಯ ಎಂದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಹತ್ತು ವರ್ಷಗಳ ಕಾಲ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಸರ್ಕಾರಿ ಪದವಿ ಕಾಲೇಜು, ಐಟಿಐ ಕಾಂಲೇಜು ಪ್ರಾರಂಭಕ್ಕೆ ಹಾಗೂ ಅವುಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿದ್ದೇನೆ. ಇಂದು ಉನ್ನತ ಹುದ್ದೆಗಳಲ್ಲಿ ಇರುವವರು ಗ್ರಾಮೀಣ ಪ್ರತಿಭೆಗಳು ಹಾಗೂ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ್ದವರೇ ಆಗಿದ್ದಾರೆ ಎಂದರು.ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಬಸವರಾಜ್ ಮಾತನಾಡಿ, ಟ್ರಸ್ಟ್ ವತಿಯಿಂದ ನಗರದ ಹೊರಭಾಗದ ಶಿವಪುರ ಬಳಿ 4 ಎಕರೆ ಪ್ರದೇಶದಲ್ಲಿ ಪ್ರಾಥಮಿಕ ಹಂತದಿಂದ ಪದವಿ ತರಗತಿವರೆಗೆ ಶಿಕ್ಷಣ ಸಂಸ್ಥೆ ಹಾಗೂ ವಸತಿ ನಿಲಯ ನಿರ್ಮಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಜನಾಂಗದ ಹಾಗೂ ಇತರರ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸುವ ಯೋಜನೆ ಹೊಂದಲಾಗಿದೆ ಎಂದರು.
ಸಮಾರಂಭದ ಸಾನಿಧ್ಯವನ್ನು ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟಿನ ಗೌರವ ಅಧ್ಯಕ್ಷ ಎಚ್.ಜೆ.ರಾಜೇಂದ್ರ ವಹಿಸಿದ್ದರು. ಕಾರ್ಯಾಧ್ಯಕ್ಷ ಬಿ.ಶಿವಾನಂದ್, ಉಪಾಧ್ಯಕ್ಷ ಕೆ.ವಿ.ಪಾಪಣ್ಣ, ಖಜಾಂಚಿ ಆರ್.ಎಸ್.ಮಂಜುನಾಥ್, ನಿರ್ದೇಶಕರಾದ ಟಿ.ಎಸ್.ಮಹಾದೇವಯ್ಯ, ಬಾಲರಾಜ್, ಜೆ.ವೈ.ಮಲ್ಲಪ್ಪ, ಮುಖಂಡರಾದ ಎಚ್.ಜಿ.ಸೋಮರುದ್ರಶರ್ಮ, ಪ್ರಕಾಶ್, ಪುಟ್ಟಬಸವರಾಜು ಇತರರಿದ್ದರು.5ಕೆಡಿಬಿಪಿ2-
ದೊಡ್ಡಬಳ್ಳಾಪುರ ತಾಲೂಕು ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಪತ್ರಿಭಾ ಪುರಸ್ಕಾರ ಸಮಾರಂಭ ನಡೆಯಿತು.