ಸುರಪುರ: ವಿದ್ಯೆಯು ಭೂಮಿಯ ಮೇಲಿನ ಅತ್ಯಂತ ಶ್ರೇಷ್ಠ ಹಾಗೂ ಅಮೂಲ್ಯ ಆಸ್ತಿಯಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕಾರಟಗಿಯ ಉಪನ್ಯಾಸಕ ಡಾ.ಹಣಮಂತ ಚಂದಲಾಪುರ ಹೇಳಿದರು.
ಕಾಲೇಜಿನ ಪ್ರಾಚಾರ್ಯ ಮೋನಯ್ಯ ಗೋನಾಲ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜ ಜಮದರಖಾನಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಹಾಗೂ ಹಿರಿಯ ಉಪನ್ಯಾಸಕ ಬಸವರಾಜ ಇನಾಮದಾರ, ಸೈದಾಬಿ ಜಮಾದಾರ, ಉಪನ್ಯಾಸಕರಾದ ಗೀತಾ ಕಡೆಚೂರ, ರಾಜೇಶ್ವರಿ, ಶ್ರೀದೇವಿ, ವಿದ್ಯಾ. ಮಲ್ಲಿಕಾರ್ಜುನ ಹೊಟ್ಟಿ, ಕುಮಾರಗೌಡ ನಾಯಕ ಸೇರಿದಂತೆ ಸಿಬ್ಬಂದಿ. ವಿದ್ಯಾರ್ಥಿನಿಯರು ಉಪಸ್ಥಿರಿದ್ದರು. ಅನ್ನಪೂರ್ಣ ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂಜನಾ ನಿರೂಪಿಸಿದರು.
----
ಫೋಟೋ: