ದೊಡ್ಡಬಳ್ಳಾಪುರ: ಅಭಯ ರಾಣಿ, ವೀರ ರಾಣಿ ಅಬ್ಬಕ್ಕ 500ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಎಬಿವಿಪಿಯಿಂದ ನಡೆಯುತ್ತಿರುವ ಅಬ್ಬಕ್ಕ ರಥಯಾತ್ರೆ ದೊಡ್ಡಬಳ್ಳಾಪುರದಲ್ಲಿ ಸಂಭ್ರಮದಿಂದ ನಡೆಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶ್ರೀಹರ್ಷ ಮಾತನಾಡಿ, ನೈಜ ತಿಹಾಸವನ್ನು ಅರಿಯುವ ಪ್ರಯತ್ನ ಆಗಬೇಕು. ನಮ್ಮ ವೀರಚರಿತ್ರೆಯ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಮಾಹಿತಿ ನೀಡದೆ ಕಡೆಗಣಿಸಲಾಗಿದೆ. ವಿದೇಶಿ ದಾಳಿಕೋರರನ್ನು ವೈಭವೀಕರಿಸಿ, ಈ ನಾಡಿನ ಅನನ್ಯತೆಯನ್ನು ಉಳಿಸಲು ಹೋರಾಟ ನಡೆಸಿದ ಅಪ್ಪಟ ದೇಶಭಕ್ತರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಮಕ್ಕಳಲ್ಲಿ ಇತಿಹಾಸದ ಅಮರ ಕಥಾನಕಗಳನ್ನು ಜಾಗರೂಕ ಪ್ರಜ್ಞೆಯಿಂದ ಬಿತ್ತಬೇಕು. ನಾಡು, ದೇಶದ ಕೀರ್ತಿಯನ್ನು ಬೆಳಗಲು ಶ್ರಮಿಸಿದ ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ಪರಾಕ್ರಮಿಗಳ ಕುರಿತು ವಿಶ್ಲೇಷಿಸಬೇಕು ಎಂದರು.ಎಬಿವಿಪಿ ರಾಜ್ಯ ಸುವಿಷ್ಕಾರ್ ಸಹ ಸಂಯೋಜಕ ಸುಬ್ರಮಣಿ, ಹಿಂದು ಜಾಗರಣ ವೇದಿಕೆಯ ಮಹಿಳಾ ಮುಖಂಡರಾದ ಯಶೋಧ, ದಾಕ್ಷಾಯಿಣಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ರವಿಕಿರಣ್.ಕೆ.ಆರ್, ಕಾಲೇಜಿನ ಪ್ರಾಂಶುಪಾಲ ಡಾ.ನರಸಿಂಹರೆಡ್ಡಿ, ಉಪಪ್ರಾಂಶುಪಾಲ ಗುರುದೇವ್ ಮತ್ತಿತರರು ಹಾಜರಿದ್ದರು.
11ಕೆಡಿಬಿಪಿ6- ದೊಡ್ಡಬಳ್ಳಾಪುರದಲ್ಲಿ ರಾಣಿ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ ಹಿನ್ನಲೆ ನಡೆದ ರಥಯಾತ್ರೆಗೆ ಅರ್ಥಪೂರ್ಣ ಸ್ವಾಗತ ನೀಡಲಾಯಿತು.