ಹಿರೇಕೆರೂರು: ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸಂಘಟನೆ ಅತಿ ಅವಶ್ಯವಾಗಿದೆ. ಛಾಯಾಗ್ರಹಣ ಎಂಬುದು ಒಂದು ವಿಶಿಷ್ಟ ಕಲೆ. ಪ್ರತಿ ನಿತ್ಯದ ಜೀವನದಲ್ಲಿ ಅತ್ಯಂತ ಅವಶ್ಯಕವಾಗಿರುವ ವೃತ್ತಿ ಅಂದರೆ ಅದು ಛಾಯಾಗ್ರಾಹಕ ವೃತ್ತಿಯಾಗಿದೆ. ಛಾಯಾಗ್ರಾಹಕರಿಗೆ ವಿಜ್ಞಾನ ತಂತ್ರಜ್ಞಾನದ ಜೊತೆಗೆ ಪರಿಸರದ ಕಾಳಜಿವೂ ಇದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ನಡೆದ ವರಕವಿ ಸರ್ವಜ್ಞ ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಒಂದು ಕಾಲದಲ್ಲಿ ಛಾಯಾಗ್ರಾಹಣ ವೃತ್ತಿ ಲಾಭದಾಯಕ ವೃತ್ತಿಯಾಗಿತ್ತು. ಸ್ಟುಡಿಯೋ ಮಾಲೀಕ ಮತ್ತು ಛಾಯಾಗ್ರಾಹಕರು ಛಾಯಾಗ್ರಾಹಕ ವೃತ್ತಿ ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಪ್ರಸ್ತುತ ಛಾಯಾಗ್ರಾಹಕರು ವಿವಿಧ ಕಾರಣಗಳಿಂದ ಅತಂತ್ರ ಪರಿಸ್ಥಿತಿಯಲ್ಲಿ ಪರಿತಪಿಸುತ್ತಿದ್ದಾರೆ. ಇಂದಿನ ಮೊಬೈಲ್ ಯುಗದಲ್ಲಿ ಛಾಯಾಗ್ರಾಹಕ ವೃತ್ತಿಗೆ ತೊಂದರೆ ಉಂಟಾಗುತ್ತಿದೆ. ಹಲವು ವರ್ಷಗಳ ಹಿಂದೆ ಗ್ರಾಹಕರು ದಾಖಲಾತಿಗೆ ಸಂಬಂಧಪಟ್ಟಣದಂತೆ ಭಾವಚಿತ್ರ ತೆಗೆಸಿಕೊಳ್ಳಲು ಮಾತ್ರ ಸ್ಟುಡಿಯೋಗಳಿಗೆ ಹೋಗುತ್ತಿರಲಿಲ್ಲ, ನಿಶ್ಚಿತಾರ್ಥ, ಮದುವೆ ಸೇರಿದ್ದಂತೆ ಇತರೆ ಎಲ್ಲಾ ಖಾಸಗಿ ಸಮಾರಂಭಗಳಿಗೆ ಛಾಯಾಚಿತ್ರಗಾರರನ್ನು ಕರೆಸಿಕೊಳ್ಳುತ್ತಿದ್ದರು. ಈ ಸಂಘಟನೆ ಉತ್ತಮವಾಗಿ ಬೆಳೆಯಬೇಕು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ. ಸದಾ ನಿಮ್ಮ ಸಂಘಟನೆ ಜೊತೆ ಇರುತ್ತೇನೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದರು.ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಗಿರೀಶ ಬಣಕಾರ ಮಾತನಾಡಿ, ಸಂಘವು ಸಾಮಾಜಿಕ ಕಳಕಳಿಯ ಕಾರ್ಯ ಮಾಡುತ್ತಾ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂದು ಮೊಬೈಲ್‌ಗಳ ಹಾವಳಿಯಿಂದ ಛಾಯಾಗ್ರಾಹಕ ವೃತ್ತಿಗೆ ಬರೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ ಎಚ್. ಪ್ರಭಾಕರಗೌಡ ಹಾಗೂ ಶಿಕಾರಿಪುರ ಎಕ್ಸ್ ಬ್ಯಾಂಕ್ ಮ್ಯಾನೇಜರ್ ಚಂದ್ರಶೇಖರ್ ಕೊಂಡೋಜಿ ಮಾತನಾಡಿದರು. ಕರಬಸಯ್ಯ ಬಸರಿಹಳ್ಳಿಮಠ, ಸುಭಾಷ್‌ಚಂದ್ರ ಗುಡ್ಡೇರ, ಮುರಗೇಶ್ ಬಣಕಾರ, ಮಧುಕೇಶ್ವರ ಹುಲ್ಲಾಳದ, ಮಾಲತೇಶ ತಿರಕಪ್ಪನವರ, ಶಂಭುಗೌಡ ಅಂದಾನಿಗೌಡ್ರ, ವೀರೇಶ ಪೂಜಾರ, ನಿಜಗುಣ ಎನ್.ಎಚ್., ವಿಜಯಕುಮಾರ ಜಾಧವ್, ರಾಜೇಂದ್ರಕುಮಾರ ರಿತ್ತಿ, ಶ್ರೀನಾಥ ಅಗಡಿ, ಮಹ್ಮದ್‌ಗೌಸ್ ತಿಗಡಿ, ಯೋಗೆಶ್ ಅರಿಕಟ್ಟಿ ಸ್ವಾಗತಿಸಿದರು. ಎಚ್,ಎಸ್. ಹಲಗೇರಿ ನಿರೂಪಿಸಿದ್ದರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.