ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ವಿಶೇಷವಾಗಿ ಅಲಂಕರಿಸಿದ್ದ ಭಾವಚಿತ್ರಕ್ಕೆ ವಿಶ್ವಕರ್ಮ ಸಮುದಾಯದವರಿಂದ ಪೂಜೆ ಸಲ್ಲಿಸಲಾಯಿತು. ವಿವಿಧ ಕಲಾವಿದರಿಂದ ವೀರಬ್ರಹ್ಮೇಂದ್ರ ಸ್ವಾಮಿಗಳ ಕುರಿತ ಗೀತೆಗಳ ಗಾಯನ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ಧೀರಜ್ ಮುನಿರಾಜು ಮಾತನಾಡಿ, ವೀರಬ್ರಹ್ಮೇಂದ್ರ ಸ್ವಾಮಿಗಳ ತತ್ವಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವರ ಆರಾಧನೆಯನ್ನು ಅರ್ಥಪೂರ್ಣವಾಗಿಸಬೇಕಿದೆ. ಅವರ ಕಾಲಜ್ಞಾನ ವೈಜ್ಞಾನಿಕ ಸತ್ಯಗಳನ್ನು ಹೇಳುತ್ತಾ ಬಂದಿದ್ದು, ಬಹುಪಾಲು ನಿಜವಾಗಿವೆ. ಮಹನೀಯರ ತತ್ವಾದರ್ಶ ಸಮಾಜಕ್ಕೆ ದಾರಿದೀಪ ಎಂದು ಹೇಳಿದರು.ವೀರಬ್ರಹ್ಮೇಂದ್ರಸ್ವಾಮಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ಟ್ರಸ್ಟ್ ವತಿಯಿಂದ ಪ್ರತಿವರ್ಷ ಆರಾಧನಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಜ್ಞಾನದ ಕೊರತೆಯಿಂದ ವೈಜ್ಞಾನಿಕ ಸತ್ಯಗಳಿಂದ ದೂರ ಉಳಿದಿರುವ ಸಮಾಜ, ಕಾಲಜ್ಞಾನಿಗಳ ಚಿಂತನೆಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮದ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಈಶ್ವರಾಚಾರ್, ಬಿ.ಉಮೇಶ್, ಬಾಬು ಪತ್ತಾರ್, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಶೋಭಾ, ರಾಜ್ಯ ಉಪಾಧ್ಯಕ್ಷ ರವಿಶಂಕರ್, ಶರತ್ ಚಂದ್ರ, ಲಕ್ಷ್ಮಣ್, ಚಂದ್ರಶೇಖರ್, ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಎಸ್.ನಾಗೇಶ್ ಹಾಗೂ ಟ್ರಸ್ಟಿನ ಗೌರವ ಅಧ್ಯಕ್ಷ ಬೋಜಾಚಾರ್, ಅಧ್ಯಕ್ಷ ವೆಂಕಟಾಚಲಪತಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಕುಮಾರ್, ಪರಮಶಿವಮೂರ್ತಿ, ಯಶೋಧ ಕುಮಾರ್, ವೇಣುಗೋಪಾಲಾಚಾರ್, ಮೋಹನಾಚಾರ್, ಜಗದೀಶಾಚಾರ್, ಮಂಜುನಾಥ್, ಮನೋಹರ್, ವೆಂಕಟೇಶ್ ಮೂರ್ತಿ, ನಾರಾಯಣಚಾರ್, ರಮೇಶಾಚಾರ್ ಇತರರು ಇದ್ದರು.