ಧಾರವಾಡ:
ನಗರದ ಬಹುಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ (ಸಿಎಂಡಿಆರ್), ಕವಿವಿ ವಾಲ್ಮೀಕಿ ಅಧ್ಯಯನ ಪೀಠ ಜಂಟಿಯಾಗಿ ಕನ್ನಡ ಅಧ್ಯಯನ ಪೀಠದ ಸಭಾಂಗಣದಲ್ಲಿ ಆಯೋಜಿಸಿದ ಭಾರತೀಯ ಜ್ಞಾನ ಪರಂಪರೆ ಮತ್ತು ಆದಿಕವಿ ವಾಲ್ಮೀಕಿ ವಿಚಾರ ಗೋಷ್ಠಿ ಉದ್ಘಾಟಿಸಿದ ಅವರು, ತಕ್ಷ ಶಿಲೆಯ ವಿಶ್ವ ವಿದ್ಯಾನಿಲಯದಿಂದ ಜ್ಞಾನ ಹಂತ-ಹಂತವಾಗಿ ಬೆಳದು ಬಂದಿದೆ. ವಾಲ್ಮೀಕಿ, ಕಬೀರ, ಕನಕದಾಸರು, ಸ್ವಾಮಿ ವಿವೇಕಾನಂದರ ವಿಚಾರಗಳ ಮೂಲಕ ಜ್ಞಾನವನ್ನು ಭಾರತದ ಸಂಸ್ಕೃತಿ ಮತ್ತು ಪರಂಪರೆ ವಿಶೇಷ ಸ್ಥಾನ ಹೊಂದಿದೆ ಎಂದರು.
ಅಧ್ಯಯನ ಪೀಠಗಳು ವಿಶೇಷ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರ, ಚಿಂತನೆ, ವಿಚಾರ ಸಂಕಿರಣ ಆಯೋಜಿಸುವುದು ಅವಶ್ಯಕವಾಗಿದೆ. ಪ್ರಸ್ತುತ ತಂತ್ರಜ್ಞಾನದ ಪ್ರಭಾವದಿಂದಾಗಿ ಜ್ಞಾನದ ಹರಿವು ಹೆಚ್ಚಾಗಿದೆ ಎಂದು ಹೇಳಿದರು.ಹಂಪಿ ಕನ್ನಡ ವಿವಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ, ವಾಲ್ಮೀಕಿ ರಾಮಾಯಣ ಐತಿಹಾಸಿಕ ಮಹತ್ವ ಮತ್ತು ವೈಶಿಷ್ಟ್ಯಗಳು ಎಂಬ ವಿಷಯದ ಕುರಿತು ಮಾತನಾಡಿ, ವಾಲ್ಮೀಕಿ ರಾಮಾಯಣವನ್ನು ವಿವಿಧ ರೀತಿಯಲ್ಲಿ ಜನಮಾನರು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ರಾಮಾಯಣ ಮತ್ತು ಮಹಾಭಾರತ ಇವು ಭಾರತೀಯ ಸಂಸ್ಕೃತಿಯ ಭಾಷೆಗಳಾಗಿವೆ. ಬುಡಕಟ್ಟು ಸಮುದಾಯದಗಳಲ್ಲಿ ರಾಮಾಯಣ ಹಾಸುಹೊಕ್ಕಾಗಿದೆ. ವಾಲ್ಮೀಕಿ ಮತ್ತು ವ್ಯಾಸರು ಭಾರತದ ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.
ಮೂಲ ರಾಮಾಯಣದಿಂದ ಹಿಡಿದು ಈ ವರೆಗೆ ರಾಮಾಯಣದಲ್ಲಿ ಭಿನ್ನವಾದ ಪಠ್ಯಗಳಿಂದ ಹಲವಾರು ಮಿಥ್ಯಗಳು ಕಾಣಸಿಗುತ್ತವೆ ಎಂದ ಅವರು, ರಾಮನನ್ನು ವೈಭವಿಕರಿಸುವ ಉದ್ದೇಶ ವಾಲ್ಮೀಕಿಗೆ ಇರಲಿಲ್ಲ. ಆದರೆ, ಅನೇಕ ಐತಿಹಾಸಿಕ ಸಂಶೋಧಕರು ರಾಮಾಯಣವನ್ನು ಭಿನ್ನವಾಗಿ ಹೇಳಲು ಪ್ರಯತ್ನಿಸಿದ್ದಾರೆ. ಕೆಲವೊಂದು ಬಡಕಟ್ಟುಗಳಲ್ಲಿ ರಾವಣನನ್ನು ಪೂಜಿಸುತ್ತಿದ್ದರು ಎಂದ ವಿವರಿಸಿದರು.ನಿವೃತ್ತ ಪ್ರಾಧ್ಯಾಪಕ ಶ್ರೀರಾಮ ಭಟ್, ವಾಲ್ಮೀಕಿ ರಾಮಾಯಣದಲ್ಲಿ ಧರ್ಮದ ಪರಿಕಲ್ಪನೆ: ರಾಜ ಧರ್ಮ, ಕುಟುಂಬ ಧರ್ಮ ಮತ್ತು ಮಾನವ ಧರ್ಮ ಎಂಬ ವಿಷಯದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಿಎಂಡಿಆರ್ ನಿರ್ದೇಶಕ ಪ್ರೊ. ಬಸವಪ್ರಭು ಜಿರ್ಲಿ, ಜ್ಞಾನದ ಮೂಲಕ ವಿಜ್ಞಾನದ ವಿವಿಧ ವಿಷಯ ತಿಳಿಯಬಹುದು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ವೈಜ್ಞಾನಿಕ ಹಿನ್ನೆಲೆ ಇದೆ. ಭಾರತದ ಸಂಸ್ಕೃತಿ ಮತ್ತು ಪರಂಪರೆಯು ವೈಜ್ಞಾನಿಕತೆ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದರು.
ಕರ್ನಾಟಕ ವಿವಿ ವಾಲ್ಮೀಕಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಅಶೋಕ ಹುಲಬಂಡಿ, ಡಾ. ದುಂಡಪ್ಪ ಬಡಲಕ್ಕನವರ, ಪ್ರೊ. ಜೈ ಪ್ರಭಾಕರ, ಡಾ. ನಯನತಾರಾ, ಡಾ. ಪ್ರತೀಕ ಮಾಳಿ, ಪ್ರೊ. ವೇದಮೂರ್ತಿ ಇದ್ದರು.