ಕನ್ನಡಪ್ರಭದ ಸಾಮಾಜಿಕ ಬದ್ಧತೆಯ ಕೆಲಸದಿಂದ ಹೆಸರುವಾಸಿ: ಡಾ.ತಿಮ್ಮಣ್ಣ ಅರಳಿಕಟ್ಟಿ

KannadaprabhaNewsNetwork |  
Published : Dec 31, 2025, 03:15 AM IST
ಪೊಟೋ ಡಿ.30ಎಂಡಿಎಲ್ 2. ಮುಧೋಳ ಅರಳಿಕಟ್ಟಿ ಫೌಂಡೇಶನ್ ದ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ಅರಳಿಕಟ್ಟಿ ಮತ್ತಿತರರು 2025ರ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಕನ್ನಡ ನಾಡಿನ ಜನಪ್ರೀಯ ಕನ್ನಡಪ್ರಭ ದಿನಪತ್ರಿಕೆ ಕೇವಲ ಸುದ್ದಿಗಳ ಪ್ರಸಾರ ಜೊತೆಗೆ ಸಾಮಾಜಿಕ ಬದ್ಧತೆಯ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ಹೊರತಂದಿರುವುದು ಅತೀವ ಸಂತೋಷ ತಂದಿದೆ. ಈ ಗೋಡೆ ಕ್ಯಾಲೆಂಡರ್ ನ್ನು ಅವಲೋಕಿಸಿದಾಗ ಸಮಗ್ರ ಮಾಹಿತಿಗಳನ್ನು ಒ‍ಳಗೊಂಡಿದೆ. ಹೀಗಾಗಿ ಇದು ಎಲ್ಲರಿಗೂ ಉಪಯುಕ್ತವಾದ ಪಂಚಾಂಗವಾಗಿದೆ ಎಂದು ಮುಧೋಳ ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ರಜತ ಸಾಧಕರು ಪ್ರಶಸ್ತಿ ಪುರಸ್ಕೃತ ಡಾ.ತಿಮ್ಮಣ್ಣ ಅರಳಿಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಕನ್ನಡ ನಾಡಿನ ಜನಪ್ರೀಯ ಕನ್ನಡಪ್ರಭ ದಿನಪತ್ರಿಕೆ ಕೇವಲ ಸುದ್ದಿಗಳ ಪ್ರಸಾರ ಜೊತೆಗೆ ಸಾಮಾಜಿಕ ಬದ್ಧತೆಯ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ಹೊರತಂದಿರುವುದು ಅತೀವ ಸಂತೋಷ ತಂದಿದೆ. ಈ ಗೋಡೆ ಕ್ಯಾಲೆಂಡರ್ ನ್ನು ಅವಲೋಕಿಸಿದಾಗ ಸಮಗ್ರ ಮಾಹಿತಿಗಳನ್ನು ಒ‍ಳಗೊಂಡಿದೆ. ಹೀಗಾಗಿ ಇದು ಎಲ್ಲರಿಗೂ ಉಪಯುಕ್ತವಾದ ಪಂಚಾಂಗವಾಗಿದೆ ಎಂದು ಮುಧೋಳ ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ರಜತ ಸಾಧಕ ಪ್ರಶಸ್ತಿ ಪುರಸ್ಕೃತ ಡಾ.ತಿಮ್ಮಣ್ಣ ಅರಳಿಕಟ್ಟಿ ಹೇಳಿದರು.ಮುಧೋಳ ರಾಯಲ್ ಸ್ಕೂಲ್ ಆಡಳಿತ ಕಚೇರಿಯಲ್ಲಿ ಮಂಗಳವಾರ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಕನ್ನಡಪ್ರಭ ಪತ್ರಿಕೆ ಹೊಸತನದಲ್ಲಿ ಹೊಸತನ ಹೊಂದಿದೆ. ಸರ್ವ ಜನಾಂಗದ ನಾಡಿಮಿಡಿತ ಅರಿತಿರುವ ಪತ್ರಿಕೆಯು ವಿವಿಧ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಮತ್ತು ಪ್ರೋತ್ಸಾಹಿಸುವಂತ ಕೆಲಸ ಮಾಡುತ್ತಾ ಬಂದಿದೆ ಎಂದರು.

ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ, ಕನ್ನಡಪ್ರಭ ಹಾಗೂ ಎಷಿಯಾನೆಟ್ ಸುವರ್ಣ ನ್ಯೂಸ್ ಮಹಿಳಾ ಸಾಧಕಿ ಪ್ರಶಸ್ತಿ ಪುರಸ್ಕೃತೆ ಸವಿತಾ ತಿಮ್ಮಣ್ಣ ಅರಳಿಕಟ್ಟಿ ಮಾತನಾಡಿ, ಕನ್ನಡಪ್ರಭ ಪತ್ರಿಕೆ ಪುರುಷ ಸಾಧಕರಲ್ಲದೆ ಮಹಿಳಾ ಸಾಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ, ಬೆಂಬಲಿಸುವಂತಹ ಕೆಲಸ ಮಾಡುತ್ತಾ ಬಂದಿದೆ. ಹೀಗಾಗಿಯೇ ಪತ್ರಿಕೆ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಮುಧೋಳ ರಾಯಲ್ ಸ್ಕೂಲ್ ಕಾರ್ಯದರ್ಶಿ ವಿನಾಯಕ ತಿಮ್ಮಣ್ಣ ಅರಳಿಕಟ್ಟಿ, ಪ್ರಾಚಾರ್ಯ ಚಂದ್ರಶೇಖರ ಆರ್. ನಾಗವಂದ, ಗಣೇಶ ಮಾಶೆಟ್ಟಿ ಹಾಗೂ ಪ್ರೊ.ಅನೀಲಕುಮಾರ ಪತ್ತಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ