17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಸುಂಟಿಕೊಪ್ಪದ ಸಮಸ್ಯೆಗಳು ಸೇರಿದಂತೆ ಕನ್ನಡ ನಾಡು ನುಡಿ, ಆನೆ ಮಾನವ ವನ್ಯಜೀವಿ ಸಂಘರ್ಷ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಸೇರಿದಂತೆ ಹತ್ತು ಪ್ರಮುಖ ನಿರ್ಣಯಗಳನ್ನು ಮಂಡಿಸಿ ಅನುಮೋದಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಸುಂಟಿಕೊಪ್ಪದ ಸಮಸ್ಯೆಗಳು ಸೇರಿದಂತೆ ಕನ್ನಡ ನಾಡು ನುಡಿ, ಆನೆ ಮಾನವ ವನ್ಯಜೀವಿ ಸಂಘರ್ಷ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಸೇರಿದಂತೆ ಹತ್ತು ಪ್ರಮುಖ ನಿರ್ಣಯಗಳನ್ನು ಮಂಡಿಸಿ ಅನುಮೋದಿಸಲಾಯಿತು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯ ನೆರವನರೇವತಿ ರಮೇಶ್ ಅವರು ನಿರ್ಣಯಗಳನ್ನು ಮಂಡಿಸಿದರು. ಮೊದಲ ನಿರ್ಣಯವಾಗಿ ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದ್ದು 8 ಗ್ರಾಮ ಪಂಚಾಯಿತಿಗಳು ಈ ಕೇಂದ್ರಕ್ಕೆ ಸೇರಿದ್ದು, ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಈ ಆರೋಗ್ಯ ಕೇಂದ್ರವನ್ನು ಮೇಲ್ದದರ್ಜೇಗೇರಿಸಬೇಕಾಗಿದೆ. 2ನೇ ನಿರ್ಣಯವಾಗಿ ಸುಂಟಿಕೊಪ್ಪ ಹೋಬಳಿಯು 8 ಗ್ರಾಮ ಪಂಚಾಯಿತಿಗಳನ್ನು ಹೊಂದಿದ್ದು ಹೆಚ್ಚಿನ ಮೂಲಭೂತ ಸೌಲಭ್ಯಗಳಿಗೆ ಸುಂಟಿಕೊಪ್ಪವನ್ನೇ ಅವಲಂಬಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸುಸ್ಸಜಿತ ಬಸ್‌ನಿಲ್ದಾಣ, ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯವನ್ನು ನಿರ್ಮಿಸಬೇಕು. 3ನೇ ನಿರ್ಣಯವಾಗಿ ಸುಂಟಿಕೊಪ್ಪ ಹೋಬಳಿಯ ನಾಡ ಕಚೇರಿಯು ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು ಇಲ್ಲಿ ನೂತನ ನಾಡಕಚೇರಿ ಕಟ್ಟಡವನ್ನು ನಿರ್ಮಿಸಬೇಕಾಗಿದೆ. 4 ನೇ ನಿರ್ಣಯವಾಗಿ ಕೊಡಗು ಜಿಲ್ಲೆಯೂ ಅದರಲ್ಲೂ ಸುಂಟಿಕೊಪ್ಪ ಹೋಬಳಿಯಲ್ಲಿ ವನ್ಯ ಜೀವಿ ಮಾನವ ಸಂಘರ್ಷದ ಅಡಿಯಲ್ಲಿ ಆನೆ ಹಾವಳಿ ತುಂಬಾ ಗಂಭೀರವಾಗಿದ್ದು ಈ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ರೂಪಿಸಲು ಆಗ್ರಹ, 5ನೇ ನಿರ್ಣಯವಾಗಿ ಕೊಡಗು ಜಿಲ್ಲೆ ಪ್ರವಾಸೋದ್ಯಮಕ್ಕೆ ತೆರೆದುಕೊಂಡ ಮೇಲೆ ವಿಶ್ವದ ಗಮನಸೆಳೆದಿದೆ. ವಾರ್ಷಿಕವಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಅವರು ಬಿಟ್ಟು ಹೋಗುತ್ತಿರುವ ತ್ಯಾಜ್ಯದ ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೂಡ ತ್ಯಾಜ್ಯ ನಿರ್ವಹಣೆ ಒಂದು ಸವಾಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತ್ತು ಪ್ರವಾಸಿಗರಿಗೆ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು. 6 ನೇ ನಿರ್ಣಯವಾಗಿ ಕೊಡಗು ಪುಟ್ಟ ಜಿಲ್ಲೆಯಾಗಿದ್ದರೂ 19 ಮಂದಿ ಒಲಂಪಿಯನ್ ಆಟಗಾರರು 200 ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಆಟಗಾರರನ್ನು ಪುಟ್ಟ ಜಿಲ್ಲೆ ಕೊಡಗನ್ನು ಕ್ರೀಡಾ ಜಿಲ್ಲೆಯೆಂದು ಘೋಷಿಸುವಂತೆ ಮನವಿ. 7ನೇ ನೇ ನಿರ್ಣಯವಾಗಿ ಕೊಡಗನ್ನು ಆಳಿದ ಹಾಲೇರಿ ವಂಶಸ್ಥರಾದ ಲಿಂಗರಾಜ ಕೊಡಗಿನ ಭೂ ಪ್ರದೇಶವನ್ನು ಸರ್ವೆ ಮಾಡಿಸಿ ಲಿಂಗರಾಜನ ಶಿಸ್ತು ಎಂದು ದಾಖಲಿಸಿದ್ದಾನೆ ಇದನ್ನು ಡಿಜಿಟಲೀಕರಣಗೊಳಿಸಿ ಸರ್ವರಿಗೂ ತಿಳಿಯುವಂತೆ ಮಾಡಬೇಕು. 8ನೇ ನಿರ್ಣಯವಾಗಿ ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ನಿವೇಶನ ಇದ್ದು, ಈ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಕೋರಿಕೆ. 9ನೇ ನಿರ್ಣಯವಾಗಿ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿಷಯವಾರು ಶಿಕ್ಷಕರನ್ನು ನೇಮಿಸಿ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕು 10ನೇ ನಿರ್ಣಯವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ತಾಲೂಕು ಹೋಬಳಿ ಘಟಕಗಳಿಗೆ ಹೆಚ್ಚಿನ ಅನುದಾನ ನೀಡಿ ಹೆಚ್ಚು ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುವಂತಾಗಿ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಆಗ್ರಹ.
ಈ ಎಲ್ಲಾ ನಿರ್ಣಯಗಳನ್ನು ಸಭೆ ಒಮ್ಮತದಿಂದ ಅಂಗೀಕರಿಸಿತು.ಸಮಾರಂಭದ ವೇದಿಕೆಯಲ್ಲಿ ಹಣಕಾಸು ಸಮಿತಿಯ ಅಧ್ಯಕ್ಷರು ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎ.ಲೋಕೇಶ್ ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಂಘಟನಾ ಕಾರ್ಯದರ್ಶಿ ಬಿ.ಎಂ.ಕೆ.ವಾಸು ರೈ, ಸಹ ಕಾರ್ಯದರ್ಶಿ ಎ.ವಿ.ಮಂಜುನಾಥ್ ಮತ್ತಿತರ ಪರಿಷತ್ ಪದಾದಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.