ಕನ್ನಡಪ್ರಭವಾರ್ತೆ ನಾಪೋಕ್ಲು
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕುಡಿಯೋಳಂಡ ಕುಟುಂಬಸ್ಥರು ಕುಂಡಿಯೊಳಂದ ಕಪ್ ಹಾಕಿ ಉತ್ಸವದ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ದಾಖಲೆಯ ಸವಿನೆನಪಿಗಾಗಿ ನೂತನವಾಗಿ ನಿರ್ಮಿಸಿದ ಕ್ರೀಡಾಂಗಣವನ್ನು ಶನಿವಾರ ಲೋಕಾರ್ಪಣೆ ಮಾಡಿದ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಕಿ ಕ್ರೀಡೆಗೆ ಒಂದು ಕೋಟಿ ರೂಪಾಯಿ ಸರ್ಕಾರ ಅನುದಾನ ನೀಡುವ ಮೂಲಕ ಹಾಕಿ ಕ್ರೀಡೆಯನ್ನು ಉತ್ತೇಜಿಸುತ್ತಿದೆ. ಸರ್ಕಾರದಿಂದ ಹಣ ತರುವುದು ಸುಲಭದ ಕೆಲಸವಲ್ಲ. ಕ್ರೀಡೆಗೆ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಒದಗಿಸುತ್ತಿರುವುದು ಹಾಕಿ ಉತ್ಸವಕ್ಕೆ ಮಾತ್ರ. ಕೊಡಗಿನಲ್ಲಿ ಪ್ರತಿ ವರ್ಷ ಹಾಕಿ ಉತ್ಸವ ನಡೆಯುವ ಸಂದರ್ಭದಲ್ಲಿ ಸರ್ಕಾರದ ಚಿಹ್ನೆ ಹಾಕಿ ಕ್ರೀಡಾ ಇಲಾಖೆಯನ್ನು ಗುರುತಿಸುವ ಕೆಲಸವನ್ನು ಮಾಡಬೇಕು ಎಂದರು. ಕೊಡಗಿನಲ್ಲಿ ಸಂಸ್ಕೃತಿ ಸಂಪ್ರದಾಯಗಳನ್ನು ಹೇಗೆ ಜೀವಂತವಾಗಿ ಉಳಿಸಿದ್ದೇವೆಯೋ ಅದೇ ರೀತಿ ಸಮುದಾಯದ, ಕ್ರೀಡಾ ಪ್ರೇಮಿಗಳ ಒಳಿತಿಗಾಗಿ ಕ್ರೀಡಾಂಗಣವನ್ನು ನಿರ್ಮಿಸಿರುವುದು ಆ ನಿಟ್ಟಿನಲ್ಲಿ ಒಂದು ಬಲವಾದ ಹೆಜ್ಜೆ ಎಂದರು.ಕುಂಡಿಯೊಳಂಡ ಹಾಕಿ ಉತ್ಸವದ ಅಧ್ಯಕ್ಷರಾದ ರಮೇಶ್ ಮುದ್ದಯ್ಯ ಮಾತನಾಡಿ ಯಾವುದೇ ಫಲ ನಿರೀಕ್ಷೆ ಮಾಡದೆ ಚೋಕಿರ, ಬೊಳ್ಳೆ ಪಂಡ, ಮಕ್ಕಿ ಬ್ರಾಹ್ಮಣ ಸೇರಿದಂತೆ ಐದು ಕುಟುಂಬಸ್ಥರು 52 ಎಕ್ರೆ ಜಾಗವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಾರೆ. ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಕ್ರೀಡೆಗೂ ಉತ್ತೇಜನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಕ್ರೀಡಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎಂದು ಆಶಿಸಿ ಹಾಕಿ ಉತ್ಸವದ ಎಂದರು. ಕುಂಡಿಯೊಳಂಡ ಹಾಕಿ ಉತ್ಸವದ ಸಂಚಾಲಕ ದಿನೇಶ್ ಕ್ರೀಡಾಭಿಮಾನಿಗಳ, ಸಂಘ ಸಂಸ್ಥೆಗಳ ಸಹಕಾರದಿಂದ ಕ್ರೀಡಾ ಕೂಟ ಯಶಸ್ವಿಯಾಗಿ ಜರುಗಿದೆ. ಈ ಒಂದು ಕ್ರೀಡಾಕೂಟದ ಮೂಲಕ ಜಿಲ್ಲೆಗೆ ಕೊಡುಗೆ ನೀಡುವ ಬಗ್ಗೆ ಕುಟುಂಬಗಳು, ಚಿಂತಿಸಿದ್ದು ನಾಲ್ಕು ನಾಡಿಗೆ ಸಂಬಂಧಿಸಿದಂತೆ ಉತ್ತಮ ಕ್ರೀಡಾಂಗಣವನ್ನು ಒದಗಿಸಿರುವುದು ಹೆಮ್ಮೆ ಅನಿಸಿದೆ ಎಂದರು.