ಕೊಡವ ಕೌಟುಂಬಿಕ ಹಾಕಿ: ಚೇನಂಡ, ಮುಕ್ಕಾಟಿರ ತಂಡಗಳಿಗೆ ಟೈ ಬ್ರೇಕರ್‌ ಗೆಲವು

KannadaprabhaNewsNetwork | Published : Apr 20, 2024 1:03 AM

ಸಾರಾಂಶ

ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯಗಳಲ್ಲಿ ಚೇನಂಡ ಮತ್ತು ಮುಕ್ಕಾಟಿರ (ಬೋಂದ) ತಂಡಗಳು ಟೈ ಬ್ರೇಕರ್‌ನಲ್ಲಿ ಗೆಲವು ಸಾಧಿಸಿದವು. ಹಲವು ತಂಡಗಳು ಮುನ್ನಡೆ ಹೊಂದಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯಗಳಲ್ಲಿ ಚೇನಂಡ ಮತ್ತು ಮುಕ್ಕಾಟಿರ (ಬೋಂದ) ತಂಡಗಳು ಟೈ ಬ್ರೇಕರ್‌ನಲ್ಲಿ ಗೆಲವು ಸಾಧಿಸಿದವು.ಚೇನಂಡ ತಂಡ ಮಾಚಿಮಂಡ ವಿರುದ್ಧ ಟೈ ಬ್ರೇಕರ್ ನಲ್ಲಿ 3- 0 ಅಂತರದ ಜಯ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಮುಕ್ಕಾಟಿರ (ಬೋಂದ) ಟೈ ಬ್ರೇಕರ್‌ನಲ್ಲಿ ಬಿದ್ದಂಡ ವಿರುದ್ಧ 5-4 ಅಂತರದಲ್ಲಿ ಗೆಲವು ಸಾಧಿಸಿತು.

ಪುಲ್ಲಂಗಡ ಮತ್ತು ಮಂಡೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುಲ್ಲಂಗಡ 1-0 ಅಂತರದಿಂದ ಮಂಡೇಟಿರ ವಿರುದ್ಧ ಜಯ ಸಾಧಿಸಿತು. ಮಣವಟ್ಟಿರ ಮತ್ತು ಚೆಪ್ಪುಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ ಮಣವಟ್ಟಿರ ವಿರುದ್ಧ 2-1ಅಂತರದ ಗೆಲವು ಸಾಧಿಸಿತು.

ಚಂದುರ ಮತ್ತು ಪುದಿಯೊಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಂದುರ 2-0 ಪುದಿಯೊಕ್ಕಡ ವಿರುದ್ಧ ಜಯ ಸಾಧಿಸಿತು. ತೀತಮಾಡ ತಂಡದ ವಿರುದ್ಧ ಚೆಕ್ಕೆರ 4-0 ಅಂತರದಲ್ಲಿ ಜಯ ಗಳಿಸಿತು.

ಅಮ್ಮಣಿಚಂಡ ತಂಡಕ್ಕೆ ಕೋಡಿಮಣಿಯಂಡ ವಿರುದ್ಧ ಜಯ ಲಭಿಸಿತು. ಅಮ್ಮಣಿಚಂಡ 2-0 ಅಂತರದ ಮುನ್ನಡೆ ಸಾಧಿಸಿತು. ಕೊಟ್ಟಂಗಡ ಮತ್ತು ಚಟ್ಟಂಗಡ ತಂಡಗಳು ನಡುವೆ ನಡೆದ ಪಂದ್ಯದಲ್ಲಿ ಕೊಟ್ಟಂಗಡ 1-0 ಅಂತರದಿಂದ ಹಾಗೂ ಕಂಬೀರಂಡ ಮತ್ತು ಕೊಂಗೆಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಬಿರಂಡ 2-0 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಕೆಲ ಪಂದ್ಯಗಳಿಗೆ ಮಳೆ ಅಡ್ಡಿ:

ಮಳೆಯಿಂದಾಗಿ ಕುಲ್ಲಚಂಡ –ಮೇಚಿಯಂಡ, ಬೊಟ್ಟೋಳಂಡ-ನೆರವಂಡ, ಚೇಂದಂಡ-ಚೀಯಕಪೂವಂಡ ಮತ್ತು ಚೋಯಮಾಡಂಡ-ಚೆರುಮಂದಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯಗಳನ್ನು ಮುಂದೂಡಲಾಯಿತು. ಈ ಪಂದ್ಯಗಳನ್ನು ಶನಿವಾರ ನಡೆಸಲಾಗುವುದು ಎಂದು ಟೂರ್ನಮೆಂಟ್ ಡೈರೆಕ್ಟರ್ ಅಂಜಪರವಂಡ ಕುಶಾಲಪ್ಪ ತಿಳಿಸಿದ್ದಾರೆ.

............

ಇಂದಿನ ಪಂದ್ಯಗಳು

ಮೈದಾನ 18 ಗಂಟೆಗೆ: ಕುಲ್ಲಚಂಡ-ಮೇಚಿಯಂಡ

9 ಗಂಟೆಗೆ: ಕಲಿಯಂಡ-ಕನ್ನಂಡ

10 ಗಂಟೆಗೆ: ಮಾತ್ರಂಡ-ಕೊಟ್ಟಂಗಡ

11 ಗಂಟೆಗೆ: ಚೇನಂಡ-ಚೀಯಕಪೂವಂಡ

1 ಗಂಟೆಗೆ: ಮೇರಿಯಂಡ-ಕುಪ್ಪಂಡ (ಕೈಕೇರಿ)

2 ಗಂಟೆಗೆ: ಪಾಡೆಯಂಡ-ಕರಿನೆರವಂಡ

3 ಗಂಟೆಗೆ: ನಂಬುಡಮಾಡ-ನಾಪಂಡಮೈದಾನ 2

10 ಗಂಟೆಗೆ: ಬೊವ್ವೇರಿಯಂಡ-ಅಪ್ಪನೆರವಂಡ

11 ಗಂಟೆಗೆ: ಸಣ್ಣುವಂಡ-ಚೇಂದೀರ

1 ಗಂಟೆಗೆ: ಕೊಳ್ಳಿರ-ಐಚೆಟ್ಟಿರ

2 ಗಂಟೆಗೆ: ಕೆಲೇಟಿರ-ಕಡೇಮಾಡ

3 ಗಂಟೆಗೆ: ಚೋಯಮಾಡಂಡ-ಚೆರುಮಂದಂಡ

2 ಗಂಟೆಗೆ: ಐನಂಡ-ಮುರುವಂಡ

3 ಗಂಟೆಗೆ: ಚೌರೀರ (ಹೊದ್ದೂರು)-ಬಾಳೆಯಡ

Share this article