ಏ.೨ರಿಂದ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ

KannadaprabhaNewsNetwork |  
Published : Nov 21, 2025, 03:00 AM IST
 ಕ್ರೀಡಾಕೂಟ | Kannada Prabha

ಸಾರಾಂಶ

ಮುಲ್ಲೇಂಗಡ ಒಕ್ಕದ ಆಶ್ರಯದಲ್ಲಿ ಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆಯನ್ನು ೨೦೨೬ರ ಏ.೨,೩,೪ರಂದು ಕಂಡಂಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಡಿಕೇರಿ: ಮುಲ್ಲೇಂಗಡ ಒಕ್ಕದ ಆಶ್ರಯದಲ್ಲಿ ಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆಯನ್ನು ೨೦೨೬ರ ಏ.೨,೩,೪ರಂದು ಕಂಡಂಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಕೂಟ ಸಂಚಾಲಕ ಮುಲ್ಲೇಂಗಡ ಮದೋಷ್ ಪೂವಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ತಾಲೂಕು ಕಂಡಂಗಾಲ ಗ್ರಾಮದಲ್ಲಿ ಮುಲ್ಲೇಂಗಡ ಒಕ್ಕ ಐನ್ ಮನೆ ಹೊಂದಿದೆ. ಕೊಡವ ಸಮುದಾಯ ಬಾಂಧವರಿಗೆ ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಇತ್ಯಾದಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆಯನ್ನು ಇದೇ ಮೊದಲ ಬಾರಿಗೆ ಆಯೋಜನೆ ಮಾಡಲಾಗುತ್ತಿದೆ. ಆಸಕ್ತ ತಂಡಗಳು ಮಾ.೧೦ರೊಳಗೆ ತಂಡಗಳ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಕಬಡ್ಡಿ ಫೆಡರೇಶನ್ ನಿಯಮಾವಳಿಗಳಂತೆ ನಡೆಯುವ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಅಲ್ಲದೇ, ನೋಂದಾಯಿತ ಕಬಡ್ಡಿ ತೀರ್ಪುಗಾರರು ಕಾರ್ಯನಿರ್ವಹಿಸಲಿದ್ದಾರೆ. ಕೊಡವ ಕುಟುಂಬಗಳ ನಡುವೆ ನಡೆಯುವ ಪಂದ್ಯಾವಳಿಯಲ್ಲಿ ೧೦(೭+೩) ಆಟಗಾರರು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೪೮೦೫೫೬೬೬೭ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದರು.

ಕ್ರೀಡಾಕೂಟಕ್ಕೆ ೫೦ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ವಿಜೇತ ತಂಡಕ್ಕೆ ೩೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೨೦,೦೦೦ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಜತೆಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.ಮುಲ್ಲೇಂಗಡ ಕುಟುಂಬದ ಅಧ್ಯಕ್ಷ ಶಂಕರಿಪೊನ್ನಪ್ಪ, ಕಾರ್ಯದರ್ಶಿ ಕಿಟ್ಟು ಕುಟ್ಟಪ್ಪ, ನಿರ್ದೇಶಕರಾದ ರಘು ದೇವಯ್ಯ, ಸುರೇಶ್ ಭೀಮಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುವೆಂಪು ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಶ್ರೀ ಶ್ಯಾಮ್ ಸುಂದರ್ ಹೆಗ್ಡೆ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!