ಕನ್ನಡಪ್ರಭ ವಾರ್ತೆ ನಾಪೋಕ್ಲುಬೆಂಗಳೂರು ಕೊಡವ ಸ್ನೇಹ ಕೂಟ ತಿಪ್ಪಸಂದ್ರ ತಿಯಿಂದ ಆಯೋಜಿಸಲಾಗಿದ್ದ 39ನೇ ಕೈಲ್ ಪೊಳ್ದ್ ನಮ್ಮೆ ಹಾಗೂ ‘ಒತ್ತೋರ್ಮೆ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಮಾತನಾಡಿದ ಪೊನ್ನಣ್ಣ, ಕೊಡವ ಸಮಾಜದ ಜನಸಂಖ್ಯೆ ಸಂಖ್ಯಾದೃಷ್ಟಿಯಿಂದ ಕಡಿಮೆಯಿದ್ದರೂ, ದೇಶ ಸೇವೆ, ಸೇನಾ ಕ್ಷೇತ್ರ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕೊಡವರ ಸಾಧನೆ ಮತ್ತು ಕೊಡುಗೆ ಅತ್ಯಂತ ಅಪಾರ ಹಾಗೂ ಹಿರಿದಾದುದು ಎಂದರು.
ಕೊಡವ ಸಮಾಜದ ಅಧ್ಯಕ್ಷ ರವಿ ನಾಣಯ್ಯ, ಖಜಾಂಚಿ ವಿನೋದ ಉತ್ತಪ್ಪ, ಗೌರವ
ಕಾರ್ಯದರ್ಶಿ ಸುಧಾ ಸುಬ್ಬಯ್ಯ ಮತ್ತಿತರರಿದ್ದರು.