ವಿರಾಜಪೇಟೆ: 60 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ

KannadaprabhaNewsNetwork |  
Published : Sep 17, 2026, 02:45 AM IST
ವ್ಯಾಪ್ತಿಯಲ್ಲಿ | Kannada Prabha

ಸಾರಾಂಶ

ಕೊಡಗು ಜಿಲ್ಲೆ ಸಾಂಸ್ಕೃತಿಕವಾಗಿ ಆಧ್ಯಾತ್ಮಿಕವಾಗಿ ಪ್ರಸಿದ್ಧಿ. ವೀರ ರಾಜೇಂದ್ರ ಪೇಟೆಯ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ 60 ಸ್ಥಳಗಳಲ್ಲಿ ವಿಘ್ನ ನಿವಾರಕ ಗಣಪತಿ ಯ ಉತ್ಸವ ಮೂರ್ತಿ ಪ್ರತಿಪ್ಠಾನೆಗೊಂಡಿದ್ದು ತಾಲೂಕಿನ ಎಲ್ಲಡೆ ಉತ್ಸವದಂತೆ ಆಚರಣೆಗಳು ನಡೆಯುತ್ತಿದೆ.

ವಿರಾಜಪೇಟೆ: ಕೊಡಗು ಜಿಲ್ಲೆ ಸಾಂಸ್ಕೃತಿಕವಾಗಿ ಆಧ್ಯಾತ್ಮಿಕವಾಗಿ ಪ್ರಸಿದ್ಧಿ. ವೀರ ರಾಜೇಂದ್ರ ಪೇಟೆಯ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ 60 ಸ್ಥಳಗಳಲ್ಲಿ ವಿಘ್ನ ನಿವಾರಕ ಗಣಪತಿ ಯ ಉತ್ಸವ ಮೂರ್ತಿ ಪ್ರತಿಪ್ಠಾನೆಗೊಂಡಿದ್ದು ತಾಲೂಕಿನ ಎಲ್ಲಡೆ ಉತ್ಸವದಂತೆ ಆಚರಣೆಗಳು ನಡೆಯುತ್ತಿದೆ.ಕೊಡಗು ಜಿಲ್ಲೆ ವೀರ ರಾಜೇಂದ್ರ ಪೇಟೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾದರು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಾರ್ವಜನಿಕ ಗೌರಿ ಗಣೇಶೋತ್ಸವದ ವಿಸರ್ಜನೆಯ ಮಹೋತ್ಸವ ಜಗತ್‌ ವಿಖ್ಯಾತವಾಗಿದೆ. ಎರಡು ದಶಕಗಳ ಹಿಂದೆ ಸಾಮಾಜಿಕ ಜಾಲತಾಣದ ಉಲ್ಲೇಖ ಇಲ್ಲದಿದ್ದರೂ ಇಂದು ಸಾಮಾಜಿಕ ಜಾಲತಾಣದ ಮೂಲಕ ಹಾಗು ಮಾಧ್ಯಮದ ಮೂಲಕ ಜಗಜಾಹೀರಾಗಿ ವಿಜೃಂಭಿಸಿದೆ.

ವೀರ ರಾಜೇಂದ್ರ ಪೇಟೆಯ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವಕ್ಕೆ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದ ಪ್ರದೇಶದ ಗೌರಿ ಬರುವಿಕೆಯೊಂದಿಗೆ ಚಾಲನೆ ನೀಡಲಾಯಿತು. ತೆಲುಗರ ಬೀದಿ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರ ಕೆರೆಯಲ್ಲಿ ಮೊದಲಿಗೆ ಬಾಗಿನ ಅರ್ಪಣೆ ಮಾಡಿದ ಬಸವೇಶ್ವರ ದೇವಾಲಯದ ಪುರೋಹಿತರು ಧಾರ್ಮಿಕ ವಿಧಿ ವಿಧಾನ ಗಳನ್ನು ನೆರೆವೇರಿಸಿದ ಬಳಿಕ ಬಾಗಿನ ಅರ್ಪಣೆ ಮಾಡುತ್ತಾರೆ. ನಂತರ ಮುಳುಕು ಹಾಕಿದ ನಂತರ ಮೇಲ್ ಬಂದು ಕೈಯಲ್ಲಿ ಬಂದ ವಸ್ತು ಒಂದು ವರ್ಷದ ಕಾಲ ನಿರ್ಣಯ ಮಾಡುತ್ತದೆ ಎಂಬುದು ದೈವ ಸಂದೇಶವಾಗಿದೆ. ಈ ಬಾರಿ ಮಂಗಳ ಮುಖವಾಗಿ ಕಾಡಿಗೆ ಬಂದಿರುವುದು ದೇವಿಗೆ ಸೌಂದರ್ಯ ವರ್ದಕ ಎಂಬಂತೆ ಬಿಂಬಿಸಲಾಗಿದೆ. ಪ್ರದೇಶದ ಗೌರಮ್ಮನ ಅಲಂಕರಿಸಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಬಾಗಿನ ಅರ್ಪಿಸಿ ಮುತೈದ್ಯರಿಂದ ಪೂಜೆ ಕೈಗೊಂಡು. ನಗರ ಪ್ರದಕ್ಷಿಣೆಯೊಂದಿಗೆ ಸಂಜೆ ವೇಳೆಗೆ ದೇಗುಲ ಪ್ರವೇಶವಾಗಿ ಮಹಾಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ವಿರಾಜಪೇಟೆ ನಗರ ವ್ಯಾಪ್ತಿಯಲ್ಲಿ 21 ಸ್ಥಳಗಳಲ್ಲಿ ಮತ್ತು ನಗರ ಠಾಣಾ ವ್ಯಾಪ್ತಿಯಲ್ಲಿ 09 ಸ್ಥಳಗಳಲ್ಲಿ ಶ್ರೀ ಗಣಪತಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಅಲ್ಲದೇ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ಸ್ಥಳಗಳಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ವಿವಿಧ ಧಾರ್ಮಿಕ ಉತ್ಸವಾದಿ ಕಾರ್ಯಕ್ರಮ ಗಳೊಂದಿಗೆ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

ನಗರದ ವಿಶೇಷ ಗಣಪತಿ ಪ್ರತಿಷ್ಠಾಪನೆ: ನಗರದ ಅರಸು ನಗರ ವ್ಯಾಪ್ತಿಯಲ್ಲಿ ಕುಳ್ಳರಿಸುವ ಗಜಮುಖನಿಗೆ ವಿಶೇಷ ವೈವಿಧ್ಯ. ಮೂರು ದಶಕಗಳಿಂದ ಅರಸುನಗರದ ಸಮುದಾಯ ಭವನದಲ್ಲಿ ಚಲನಚಿತ್ರ ದ ಸೆಟ್ ಅಳವಡಿಸಿ ಅದ್ಧೂರಿಯಾಗಿ ಸಾರ್ವಜನಿಕರಿಗೆ ಮುದ ನೀಡುವಂತೆ ವಾತಾವರಣ ಸೃಷ್ಟಿ ಮಾಡುವುದು ಸಮಿತಿಯ ವಿಶೇಷ. ಈ ಬಾರಿ ಅಯೋಧ್ಯೆ ರಾಮ ಲಲ್ಲಾನ ಭವ್ಯ ದೇಗುಲದ ಗರ್ಭಗುಡಿಯ ಮತ್ತು ಒಳ ಪ್ರಾಂಗಣದ ಮೇಲ್ವಿಚಾವಣಿಯ ವಿನ್ಯಾಸದೊಂದಿಗೆ ಅರಸು ನಗರದ ನವ ಹರಿಕೃಷ್ಣ ಕೆ.ಡಿ, ಅವರ ಪರಿಕಲ್ಪನೆಯಲ್ಲಿ ಮೂಡಿಬಂದು ಶಾಹುಲ್, ಮತ್ತು ಅಕ್ಷಯ್ ಹಾಗೂ ಸಂಗಡಿಗರ ಸುಮಾರು 20 ದಿನಗಳ ಕಠಿಣ ಪರಿಶ್ರಮದಿಂದ ಭವ್ಯ ರಾಮಲಲ್ಲಾ ಗಣಪತಿ ಉತ್ಸವ ಮೂರ್ತಿ ಮೂಡಿ ಬಂದಿರುವುದು ಸಾರ್ವಜನಿಕರ ಮೆಚ್ಚುಗೆ ಗೆ ಪಾತ್ರವಾಗಿದೆ. ನಗರದ ವಿವಿಧೆಡೆಗಳ 21 ಉತ್ಸವ ಸಮಿತಿಗಳ ಉತ್ಸವ ಮೂರ್ತಿಗಳು ಅನಂತ ಪದ್ಮನಾಭ ವ್ರತದಂದು ಸೆ. 25 ಶುಕ್ರವಾರ ರಾತ್ರಿ ಶನಿವಾರ ಮುಂಜಾನೆ ಸಾಮೂಹಿಕವಾಗಿ ನಗರದ ಇತಿಹಾಸ ಪ್ರಸಿದ್ಧ ಗೌರಿ ಕೆರೆಯಲ್ಲಿ ವಿಸರ್ಜನೆಯಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗೆ ನೀರು ಹರಿಸಿ, ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹ
ಅಗ್ನಿ ದುರಂತ: ಗಾಯಗೊಂಡಿದ್ದ ಮತ್ತಿಬ್ಬರ ಸಾವು