ರಸ್ತೆ ಅಗಲೀಕರಣ: ಅಧಿಕಾರಿಗಳ ಸಭೆ ನಡೆಸಿದ ಶಾಸಕ

KannadaprabhaNewsNetwork |  
Published : Jun 13, 2026, 02:45 AM IST
ಶಾಸಕ ವೇದವ್ಯಾಸ್‌ ಕಾಮತ್‌ ಸಭೆ ನಡೆಸುತ್ತಿರುವುದು | Kannada Prabha

ಸಾರಾಂಶ

ಕೊಡಿಯಲ್ ಬೈಲ್ ನಲ್ಲಿರುವ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ ನಡೆಯಬೇಕಿರುವ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳ ವಿಶೇಷ ಸಭೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆಯಿತು.

ಮಂಗಳೂರು: ನಗರದ ಕೊಡಿಯಲ್ ಬೈಲ್ ನಲ್ಲಿರುವ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನದಿಂದ ಕಟ್ಟೆಮಾರುವರೆಗೆ ರಸ್ತೆ ಅಗಲೀಕರಣ ನಡೆಯಬೇಕಿರುವ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳ ವಿಶೇಷ ಸಭೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆಯಿತು.

ಇಲ್ಲಿನ ರಸ್ತೆ ಅಗಲೀಕರಣ ಸ್ಥಳೀಯ ನಾಗರಿಕರ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಈ ಬಗ್ಗೆ ಹಿಂದಿನ ಹಲವು ಜನಪ್ರತಿನಿಧಿಗಳು ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ರಸ್ತೆಗಳು ಅಗಲವಾದಲ್ಲಿ ಸುತ್ತಮುತ್ತಲಿನ ಎಲ್ಲ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಬೆಳೆಯುತ್ತಿರುವ ನಗರ, ಇಲ್ಲಿಗೆ ಆಗಮಿಸುವ ಭಕ್ತರ ಸಹಿತ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅಗಲೀಕರಣ ಅನಿವಾರ್ಯವಾಗಿದ್ದು ಟಿ.ಡಿ.ಆರ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಾವು ಮಾಡಿದ ಮನವಿಗೆ ಭಗವತಿ ದೇವಸ್ಥಾನದ ಆಡಳಿತ ಸಮಿತಿ ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ವಿಶೇಷ ಧನ್ಯವಾದಗಳು. ನಿಯಮಗಳನುಸಾರ ಟಿಡಿಆರ್ ಸಹಿತ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದವಿಲ್ಲದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಉಪ ಆಯುಕ್ತ ನರೇಶ್ ಶೆಣೈ, ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಲೀಲಾವತಿ ಪ್ರಕಾಶ್, ಕಾವ್ಯ ನಟರಾಜ್ ಆಳ್ವ, ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಗಣೇಶ್ ಕುಂಟಲ್ಪಾಡಿ, ಆಡಳಿತ ಮೊಕ್ತೇಸರರಾದ ವಿಶ್ವನಾಥ್ ಮಂಕಿಸ್ಟ್ಯಾಂಡ್, ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್, ಕೋಶಾಧಿಕಾರಿಗಳಾದ ಲೋಕೇಶ್ ಬೋಳಾರ್, ಮೊಕ್ತೇಸರರಾದ ಸುಜನ್ ದಾಸ್ ಕುಡುಪು ಹಾಗೂ ರವೀಂದ್ರ ಕೆ., ಉಪಾಧ್ಯಕ್ಷರಾದ ಉದಯ ಕುಮಾರ್ ಕುಡುಪು, ಮಹಿಳಾ ಸಮಿತಿಯ ಜಾಸ್ಮಿನ್ ಸುಜನ್ ದಾಸ್, ನಗರ ಯೋಜನಾಧಿಕಾರಿ ಶರತ್ ಗೌಡ, ಸಹಾಯಕ ನಗರ ಯೋಜನಾಧಿಕಾರಿ ಗುರುಪ್ರಸಾದ್, ಎಕ್ಸಿಕ್ಯೂಟಿವ್ ಎಂಜಿನಿಯರ್ ನಾಗರಾಜ್, ಪುನೀತ್ ಶಿವಲಿಂಗಯ್ಯ, ಸಹನಾ, ಚಿನ್ಮಯಿ ಗೋಪಾಲ್, ಶಿವುಕುಮಾರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಕ್ಯಾಬ ಸಂಸ್ಥೆ ಮೆಡಿಕಲ್ ಕಾಲೇಜಿಗೆ 5 ರ್‍ಯಾಂಕ್‌
ಮರಾಠ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ನಿಶ್ಚಿತ: ಸಚಿವ ಎಂ.ಬಿ. ಪಾಟೀಲ