ಉಪ್ಪಿನಂಗಡಿ: ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ, ಬೆಳ್ತಂಗಡಿ ತಾಲೂಕು ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿ ಆಶ್ರಯದಲ್ಲಿ 200 ವರ್ಷಗಳಷ್ಟು ಹಳೆಯ ಪ್ರಸಿದ್ಧ ಗುತ್ತಿನ ಮನೆ, ‘ಕಲಾಯ ಗುತ್ತು’ ಪುತ್ತಿಲದಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ ಮತ್ತು ಪುಸ್ತಕ ಪ್ರಸ್ತುತಿ ಸಮಾರಂಭ ಹಾಗೂ ಸಾವಿರದ ಸಾಧಕರು ಕಾರ್ಯಕ್ರಮದಲ್ಲಿ ಏಳು ಮಂದಿ ಮೌನ ಸಾಧಕರಿಗೆ ಮನೆ -ಮನದ ಸಮ್ಮಾನ ಸಮಾರಂಭ ಜರುಗಿತು.ಕಾರ್ಯಕ್ರಮದಲ್ಲಿ ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಸಂಪತ್ ಬಿ ಸುವರ್ಣರವರು ಮಂಜ ಬೈದ್ಯರ ಹೋರಾಟ, ಬಲಿದಾನದ ತ್ಯಾಗವನ್ನು ನೆನೆದು, ಅವರ ಪ್ರತಿಮೆ ಅನಾವರಣ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಮಂಜ ಬೈದ್ಯರ ಕುರಿತಾಗಿ ಹೊರತಂದ ಪುಸ್ತಕವನ್ನು ಸಭೆಗೆ ಹಂಚಲಾಯಿತು.
ಪ್ರಮುಖರಾದ ಪ್ರಸನ್ನ ಗೌಡ , ಸಂಜೀವ ಪೂಜಾರಿ ಕಲಾಯ, ವಿಶ್ವನಾಥ್ ಪೂಜಾರಿ ಕೇರ್ಯ ಗುತ್ತು, ವಿಶ್ವನಾಥ್ ಪೂಜಾರಿ ಕಲಾಯ , ನಾಣ್ಯಪ್ಪ ಪೂಜಾರಿ ಕಲಾಯ, ಉಮೇಶ್ ಪೂಜಾರಿ ಕಲಾಯ, ಸುರೇಶ್ ಕಲಾಯ , ಪಾರ್ಶ್ವನಾಥ ಪೂಜಾರಿ ಕಲಾಯ, ಪ್ರಭಾಕರ್ ಪೂಜಾರಿ ಕಲಾಯ ಗಣೇಶ ಪೂಜಾರಿ ಬೆದ್ರಾಡಿ , ತಾಲೂಕು ಸಮಿತಿ ಸಂಚಾಲಕರಾದ ಶಶಿಧರ ಕಲ್ಮಂಜ, ಬಾಲಕೃಷ್ಣ ಶೆಟ್ಟಿ ಉಜಿರೆ, ವಿಶ್ವನಾಥ ಪೂಜಾರಿ ಮಡಂತ್ಯಾರು ಮತ್ತು ಕಲಾಯಗುತ್ತಿನ ಕುಟುಂಬದವರು ಇದ್ದರು.
ವಿಕೇಶ ಮಾನ್ಯ ಸ್ವಾಗತಿಸಿದರು. ಸತೀಶ್ ಪೂಜಾರಿ ಕಲಾಯ ಗುತ್ತು , ರೋಹಿತ್ ನಿರೂಪಿಸಿದರು.