ಡಿಜಿಟಲ್ ಜನಗಣತಿಗೆ ಕೋಲಾರ ಸಜ್ಜು: ಜಿಲ್ಲಾಧಿಕಾರಿ

KannadaprabhaNewsNetwork |  
Published : Mar 29, 2026, 01:15 AM IST
೨೮ಕೆಎಲ್‌ಆರ್-೪ಕೋಲಾರದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ. | Kannada Prabha

ಸಾರಾಂಶ

ಸಾರ್ವಜನಿಕರು ತಾವೇ ಸ್ವತಃ ಆನ್‌ಲೈನ್ ಮೂಲಕ ತಮ್ಮ ಮನೆಯ ವಿವರಗಳನ್ನು ದಾಖಲಿಸಲು ಈ ಬಾರಿ ವಿಶೇಷ ಅವಕಾಶ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ೨೦೨೭ರ ಜನಗಣತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳು ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಡಿಜಿಟಲ್ ಜನಗಣತಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಗಣತಿಯ ಮೊದಲ ಹಂತವಾಗಿ ಮನೆಗಳ ಪಟ್ಟಿ ಮಾಡುವಿಕೆ ಮತ್ತು ಮನೆಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಸಾರ್ವಜನಿಕರು ತಾವೇ ಸ್ವತಃ ಆನ್‌ಲೈನ್ ಮೂಲಕ ತಮ್ಮ ಮನೆಯ ವಿವರಗಳನ್ನು ದಾಖಲಿಸಲು ಈ ಬಾರಿ ವಿಶೇಷ ಅವಕಾಶ ನೀಡಲಾಗಿದೆ. ಏಪ್ರಿಲ್ ೧ ರಿಂದ ೧೫ ರವರೆಗೆ ಸಾರ್ವಜನಿಕರು ತಿತಿತಿ.se.ಛಿeಟಿsus.gov.iಟಿ ಜನಗಣತಿ ಕಾರ್ಯ ವ್ಯವಸ್ಥಿತವಾಗಿ ನಡೆಸಲು ಜಿಲ್ಲೆಯನ್ನು ಒಟ್ಟು ೩,೩೮೫ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ೨,೫೪೦ ಬ್ಲಾಕ್‌ಗಳು. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ೮೦೮ ಬ್ಲಾಕ್‌ಗಳು. ಪಟ್ಟಣ ಪಂಚಾಯಿತಿಯಲ್ಲಿ ೩೭ ಬ್ಲಾಕ್‌ಗಳು ಹೊಂದಿವೆ ಎಂದರು.

ಒಂದು ಬ್ಲಾಕ್ ಅಂದರೆ ಸುಮಾರು ೧೮೦ ರಿಂದ ೨೦೦ ಮನೆಗಳು ಅಥವಾ ಅಂದಾಜು ೮೦೦ ಜನರ ಜನಸಂಖ್ಯೆ ಒಳಗೊಂಡಿದೆ, ಜಿಲ್ಲೆಯಲ್ಲಿ ಗಣತಿ ಕಾರ್ಯಕ್ಕಾಗಿ ಬೃಹತ್ ಸಿಬ್ಬಂದಿ ಪಡೆ ನಿಯೋಜಿಸಲಾಗಿದೆ. ಗಣತಿದಾರರು: ೨,೮೬೧ ಜನ. ಮೇಲ್ವಿಚಾರಕರು: ೪೭೪ ಜನ. ತರಬೇತುದಾರರು: ಒಬ್ಬರು ಮಾಸ್ಟರ್ ಟ್ರೈನರ್ ಹಾಗೂ ೬೨ ಫೀಲ್ಡ್ ಟ್ರೈನರ್‌ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಗಣತಿದಾರರಿಗೆ ಏ.೭ ರಿಂದ ೧೨ ರವರೆಗೆ ಅಂತಿಮ ಹಂತದ ತರಬೇತಿ ನಡೆಯಲಿದೆ. ಬಹುತೇಕವಾಗಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇತರ ಇಲಾಖೆಯ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.ಡಿಜಿಟಲ್ ಗಣತಿಯಲ್ಲಿ ಸಂಗ್ರಹವಾಗುವ ಎಲ್ಲಾ ಮಾಹಿತಿಗಳು ಎನ್‌ಕ್ರಿಪ್ಟ್ ಆಗಿರುವುದರಿಂದ ಅತ್ಯಂತ ಗೋಪ್ಯವಾಗಿರಲಿವೆ. ಈ ದತ್ತಾಂಶ ದೇಶದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ನಿರೂಪಣೆಗೆ ಮಾತ್ರ ಬಳಸಿಕೊಳ್ಳಲಾಗುತ್ತದೆ. ಗಣತಿದಾರರಿಗೆ ಒಂದು ತಿಂಗಳ ಗೌರವ ಸಂಭಾವನೆಯಾಗಿ ರೂ ೨೫,೦೦೦ ನೀಡಲಾಗುವುದೆಂದು ಎಂದು ಜಿಲ್ಲಾಧಿಕಾರಿ ತಿಳಿಸಿದರುಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಿಖರ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಎಡಿಸಿ ಎಸ್.ಎಂ.ಮಂಗಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಿಯದರ್ಶಿನಿ ಶಾಲೆ ಬಳಿ ರಸ್ತೆ ಹಂಪ್ ವಿಸ್ತರಣೆ
ವಸಂತ ನವರಾತ್ರಿ ಉತ್ಸವ ಸಂಪನ್ನ