ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಮ್ಮ ಹೃದಯದಲ್ಲಿ ಸ್ಥಾನ ಮಾನ ನೀಡಿದ್ದಾರೆ, ಇದರಿಂದನನಗೆ ಅತ್ಯಂತ ಸಂತಸವಾಗಿದೆ, ನಿಜಕ್ಕೂ ಇಂದು ಕೊಳ್ಳೇಗಾಲಕ್ಕೆ ಒಳ್ಳೇ ಕಾಲ ಅಭಿವೃದ್ದಿ ಯೋಗ ಕೂಡಿ ಬಂದಿದೆ. ಜನರ ಸೇವೆ, ಅಭಿವೃದ್ದಿ ಧ್ಯೇಯ ನನ್ನದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಮ್ಮ ಹೃದಯದಲ್ಲಿ ಸ್ಥಾನ ಮಾನ ನೀಡಿದ್ದಾರೆ, ಇದರಿಂದನನಗೆ ಅತ್ಯಂತ ಸಂತಸವಾಗಿದೆ, ನಿಜಕ್ಕೂ ಇಂದು ಕೊಳ್ಳೇಗಾಲಕ್ಕೆ ಒಳ್ಳೇ ಕಾಲ ಅಭಿವೃದ್ದಿ ಯೋಗ ಕೂಡಿ ಬಂದಿದೆ. ಜನರ ಸೇವೆ, ಅಭಿವೃದ್ದಿ ಧ್ಯೇಯ ನನ್ನದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೊಳ್ಳೇಗಾಲ ಕ್ಷೇತ್ರ ಹಾಗೂ ಚಾ.ನಗರ ಜಿಲ್ಲೆಗೆ ನೀರಾವರಿಗಾಗಿ ನೂರಾರು ಕೋಟಿ ರು. ಅನುದಾನ ನೀಡಲಾಗಿದ್ದು, ಆ ಮೂಲಕ ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ದಿಗಾಗಿ ಹೊಸ ಆಯಾಮ ನೀಡಲಾಗಿದೆ ಎಂದರು.
ಕೋವಿಡ್ ಮಹಾಮಾರಿ ಜಿಲ್ಲೆಯಲ್ಲಿ ಆಕ್ಸಿಜನ್ ಸಕಾಲದಲ್ಲಿ ಸಿಗದೆ 33ಮಂದಿ ಮೃತಪಟ್ಟ ಘಟನೆಯಲ್ಲಿ ನಾನು ಹಾಗೂ ಕಾಂಗ್ರೆಸ್ ನಾಯಕರು ಒಗ್ಗೂಡಿ ಸ್ಥಳೀಯ ನಾಯಕರ ಸಹಕಾರದೊಂದಿಗೆ 33 ಮಂದಿ ಜನರ ನೆರವಿಗೆ ದಾವಿಸಿದ್ದು ಅದೊಂದು ಇತಿಹಾಸ ಎಂದು ಸ್ಮರಿಸಿದರು.
ಜನ ಸೇವೆ ನಮ್ಮ ಗುರಿ,ಮುಂದಿನ 2028ರಲ್ಲೂ ಹೆಚ್ಚಿನ ಸೇವೆಗಾಗಿ ಗ್ಯಾರಂಟಿ ಯೋಜನೆ ಇನ್ನಷ್ಟು ಗಟ್ಟಿಗಾಗಿ, ಜನರ ಬದುಕಿನಲ್ಲಿ ಅಗಾಧ ಬದಲಾವಣೆಗಾಗಿ,ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ಬೆಂಬಲ ಸೂಚಿಸಬೇಕು, ಜನ ಸೇವೆ ನನ್ನ ದ್ಯೇಯ, ಅಭಿವೃದ್ದಿ ನನ್ನ ಗುರಿಯಾಗಿದೆ ಎಂದರು.
ರೈತರು ಶಿಸ್ತು ಹಾಗೂ ದುಡಿಮೆಯಿಂದ ಪ್ರಗತಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು, ಅಭಿವೃದ್ದಿ ದಿಡೀರ್ ಪವಾಡ ಸೃಷ್ಟಿಸಾಧ್ಯವಿಲ್ಲ, ನಾವು ಮಾಡುವ ಸೇವೆ ಹಾಗೂ ಅಭಿವೃದ್ದಿಯನ್ನು ನೆನೆಯುವುದು ಆದ್ಯ ಕರ್ತವ್ಯ ಎಂದರು.
ಕಮಲ ಕೆರೆಯ ಕೆಸರಲ್ಲಿದ್ದರೆ ಅಂದ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಚಂದ ಎಂದು ಬಿಜೆಪಿಯನ್ನು ವ್ಯಂಗ್ಯಮಾಡಿದ ಮುಖ್ಯಮಂತ್ರಿಗಳು, ಇಂದಿನ ಸಮಾರಂಭಕ್ಕೆ ಅಭಿಮಾನದಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದೀರಿ, ನಿಮಗೆಲ್ಲರಿಗೂ ಧನ್ಯವಾದ ಸಲ್ಲಿಸುವೆ, ಮುಂದಿನ ದಿನಗಳಲ್ಲೂ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ನಮ್ಮ ಸರ್ಕಾರದ ಜನಪ್ರತಿನಿಧಿಗಳು ನೀವು ಯಾವ ವೇಳೆ ಭೇಟಿ ಮಾಡಿದರೂ ನಿಮ್ಮ ಸೇವೆಗೆ ಸಿದ್ದರಾಗಿದ್ದಾರೆ ಎಂದರು.
ಪ್ರತಿ ಜಿಲ್ಲೆಗೆ ₹50 ಸಾವಿರ ನಿವೇಶನ: ಡಿಕೆಶಿ
ಪ್ರತಿ ಜಿಲ್ಲೆಗೂ ಮನೆ ಇಲ್ಲದ ಬಡವರಿಗೆ ಮನೆ ನಿರ್ಮಾಣಕ್ಕಾಗಿ 50 ಸಾವಿರ ಸೈಟ್ (ನಿವೇಶನ) ನೀಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡಲು ಸಂಪುಟ ಸಭೆಯಲ್ಲಿಟ್ಟು ಅಂತಿಮ ತೀರ್ಮಾ ಕೈಗೊಳ್ಳಲಾಗುವುದು. ಹಲವು ಅಭಿವೃದ್ದಿ ಕೆಲಸಗಳಲ್ಲಿ ಮಾಜಿ ಸಚಿವರುಗಳಾದ ಕೆ.ವೆಂಕಟೇಶ್ ಅವರು, ಎಚ್ ಸಿ ಮಹದೇವಪ್ಪ ಅವರ ಸಹಕಾರವಿತ್ತು. ಈ ಹಿನ್ನೆಲೆ ಅವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ, ಇಂದಿನ ಹಲವು ಅಭಿವೃದ್ಧಿ ಕಾರ್ಯ ಜಾರಿಯಲ್ಲಿಅವರ ಸೇವೆ ಪ್ರಶಂಸನೀಯ ಎಂದರು.
ಸಚಿವರಾದ ಯು.ಟಿ.ಖಾದರ್, ಚಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ,ಸಿ. ಪುಟ್ಟರಂಗಶೆಟ್ಟಿ, ಅಜಯ್‌ಸಿಂಗ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಎಚ್.ಎಂ.ಗಣೇಶ್ ಪ್ರಸಾದ್, ಸಂಸದ ಸುನೀಲ್ ಬೋಸ್, ಎಂಎಲ್‌ಸಿ ತಿಮ್ಮಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಂದ್ರ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಗ್ಯಾರಂಟಿ ಚಂದ್ರು, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಆರ್. ನರೇಂದ್ರ, ಡಿಸಿ ಶ್ರೀರೂಪ, ಎಡಿಸಿ ಜನರೇಗೌಡ, ಎಸ್ಪಿ ಎಂ. ಮುತ್ತುರಾಜು ಇತರರು ಇದ್ದರು.
ಆತ್ಮೀಯ ನರೇಂದ್ರ.. ನಮ್ಮ ಮಂಜುನಾಥ್ ಅವರೆ
ವೇದಿಕೆಯಲ್ಲಿ ಭಾಷಣಕ್ಕಿಳಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಾರಂಭದಲ್ಲಿ ಹನೂರು ಶಾಸಕರನ್ನು ಉದ್ದೇಶಿಸಿ ನಮ್ಮ ಮಂಜುನಾಥ್ ಅವರೇ ಎಂದು ಸಂಬೋಧಿಸಿದರು.
ಬಳಿಕ ಮಾಜಿ ಶಾಸಕರನ್ನು ಆತ್ಯೀಯ ನರೇಂದ್ರ ಅವರೇ, ಯುವ ಮಿತ್ರ ಸುನೀಲ್ ಬೋಸ್ ಅವರೆ ಎಂದು ಕರೆದರು. ಮಹದೇಶ್ವರ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಜಿಲ್ಲಾಭಿವೃದ್ದಿಗಾಗಿ ಮೂರು ಸಾವಿರ ಕೋಟಿ ರು. ಘೋಷಣೆ ಮಾಡಲಾಗಿತ್ತು. ಅನೇಕ ಕೆಲಸ-ಕಾರ್ಯಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಕೆಲಸವನ್ನು ಸರ್ಕಾರ ಮಾಡಿದೆ. ರಾಜ್ಯ ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಲು ನಾನು ಬಂದಿದ್ದೆನೆ. ಟೀಕೆಗಳನ್ನು ಎದುರಿಸಿ ಗೆದ್ದರೆ ಆತ ನಾಯಕನಾಗುತ್ತಾನೆ. ಈ ನಿಟ್ಟಿನಲ್ಲಿ ಬಡವರ ಬುದಕಿನಲ್ಲಿ ಹೊಸರೂಪ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.