ಪ್ರೇಯಸಿಯನ್ನು ಲಾಡ್ಜ್ನಿಂದ ತಳ್ಳಿ ಕೊಲೆಗೈದಿದ್ದ ಪ್ರಕರಣದ ಸಂಬಂಧ ಆಕೆಯ ಪ್ರಿಯಕರನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರೇಯಸಿಯನ್ನು ಲಾಡ್ಜ್ನಿಂದ ತಳ್ಳಿ ಕೊಲೆಗೈದಿದ್ದ ಪ್ರಕರಣದ ಸಂಬಂಧ ಆಕೆಯ ಪ್ರಿಯಕರನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ ಮೂಲದ ಐಶ್ವರ್ಯಾ (23) ಕೊಲೆಯಾದವಳು. ಕೃತ್ಯ ಎಸಗಿದ ಆಕೆಯ ಪ್ರಿಯಕರ ಸಂತೋಷ್ (26) ಎಂಬಾತನನ್ನು ಬಂಧಿಸಲಾಗಿದೆ. ನ.19ರಂದು ಅಬ್ಬಿಗೆರೆ ವೃತ್ತದ ಬಳಿಯ ಲಾಡ್ಜ್ವೊಂದರಲ್ಲಿ ಈ ಘಟನೆ ನಡೆದಿದೆ.ಖಾಸಗಿ ಕಂಪನಿ ಉದ್ಯೋಗಿ ಐಶ್ವರ್ಯಾ ಮತ್ತು ಸಂತೋಷ್ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಮಧ್ಯೆ ಐಶ್ವರ್ಯಾ, ತನ್ನ ದೂರದ ಸಂಬಂಧಿಯಾದ ಅರುಂಧತಿಯ ಸ್ನೇಹಿತ ಸಚಿನ್ ಜತೆ ಆತ್ಮೀಯವಾಗಿದ್ದಳು ಎನ್ನಲಾಗಿದೆ. ಈ ವಿಚಾರವನ್ನು ಅರುಂಧತಿ ಐಶ್ವರ್ಯಾ ಕುಟುಂಬ ಸದಸ್ಯರಿಗೆ ಹೇಳಿದ್ದಳು. ಹೀಗಾಗಿ ಕುಟುಂಬ ಸದಸ್ಯರು ಐಶ್ವರ್ಯಾಗೆ ನಿಂದಿಸಿ, ಎಚ್ಚರಿಕೆ ನೀಡಿದ್ದರು. ಮತ್ತೊಂದೆಡೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರೂ, ಪ್ರಿಯಕರ ಸಂತೋಷ್ ಆಗಲಿ, ಕುಟುಂಬ ಸದಸ್ಯರಾಗಲಿ ನಂಬುತ್ತಿಲ್ಲ ಎಂದು ಐಶ್ವರ್ಯ ನೊಂದುಕೊಂಡಿದ್ದಳು ಎಂದು ಹೇಳಲಾಗಿದೆ.
ಒತ್ತಾಯದ ಮೇರೆಗೆ ಲಾಡ್ಜ್ಗೆ ಬಂದಿದ್ದಳು:ನ.19ರಂದು ಕಂಪನಿಯೊಂದರ ಸಂದರ್ಶನಕ್ಕೆ ತೆರಳುವುದಾಗಿ ಹೇಳಿದ್ದ ಐಶ್ವರ್ಯಾ, ಪ್ರಿಯಕರ ಸಂತೋಷ್ ಒತ್ತಾಯದ ಮೇರೆಗೆ ಗಂಗಮ್ಮನಗುಡಿಯಲ್ಲಿರುವ ಲಾಡ್ಜ್ನ 3ನೇ ಮಹಡಿಗೆ ಬಂದಿದ್ದಳು. ಈ ವೇಳೆ ಸಂತೋಷ್, ಸಚಿನ್ ಜತೆಗಿನ ವಿಚಾರ ಪ್ರಸ್ತಾಪಿಸಿ ಜಗಳ ಮಾಡಿದ್ದಾನೆ. ಅದು ತಾರಕ್ಕೇರಿದೆ. ಆಗ ಐಶ್ವರ್ಯ ತನ್ನನ್ನು ಯಾರು ನಂಬುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಲಾಡ್ಜ್ನ ಕಿಟಕಿ ಬಳಿ ಹೋಗಿದ್ದಾಳೆ. ಈ ವೇಳೆ ಸಂತೋಷ್, ಏನು ಬೇಕಾದರೂ ಮಾಡಿಕೊ ಎಂದು ಹೇಳಿ ನಂತರ ಆಕೆಯನ್ನು ಕೈನಿಂದ ತಳ್ಳಿದ್ದು, ಆಕೆ ವಿದ್ಯುತ್ ಕಂಬದ ಮೇಲೆ ಬಿದ್ದು ಮೃತಪಟ್ಟಿದ್ದಳು.
ಆರಂಭದಲ್ಲಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಐಶ್ವರ್ಯ ಪಾಲಕರು ಮಗಳ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿದ್ದಾಗ ಆಕೆಯನ್ನು ತಳ್ಳಿ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.3 ವರ್ಷದ ತನಕ ಸಮಯ ಕೇಳಿ
ಮದುವೆಗೆ ನಿರಾಕರಿಸಿದ್ದ ಆರೋಪಿಐಶ್ವರ್ಯಾ ಮತ್ತು ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಆಕೆಯ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಐಶ್ವರ್ಯ ಸಂತೋಷ್ನನ್ನೇ ಮದುವೆ ಆಗುವುದಾಗಿ ಹಠ ಹಿಡಿದಿದ್ದರಿಂದ, ಅಂತಿಮವಾಗಿ ಅವರ ಕುಟುಂಬದವರು ಮದುವೆಗೆ ಒಪ್ಪಿಕೊಂಡಿದ್ದರು. ಆದರೆ, ಸಂತೋಷ್ ಮದುವೆ ಆಗಲು 3 ವರ್ಷಗಳ ಕಾಲಾವಕಾಶ ಕೇಳಿದ್ದ. ಆ ಅವಧಿ ಮುಗಿದರೂ, ಅವನು ಮದುವೆಯನ್ನು ಮುಂದೂಡುತ್ತಲೇ ಬಂದಿದ್ದ. ನಂತರ, ತನ್ನ ಕುಟುಂಬದವರು ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿ, ಆಕೆಯನ್ನು ಮದುವೆ ಆಗಲು ನಿರಾಕರಿಸಿದ್ದ. ಆ ಬಳಿಕ 2 ಕುಟುಂಬಗಳ ಮಧ್ಯಸ್ಥಿಕೆಯಿಂದಾಗಿ ಈ ಸಮಸ್ಯೆ ಬಗೆಹರಿದು, ಮದುವೆಯ ಬಗ್ಗೆ ಮತ್ತೆ ಮಾತುಕತೆಯೂ ನಡೆಯಿತು. ಆಗ ಸಂತೋಷ್ ಮತ್ತೆ 6 ತಿಂಗಳ ಕಾಲಾವಕಾಶ ಕೇಳಿದ್ದ. ಆ ನಂತರವೂ ಸಂತೋಷ್, ಐಶ್ವರ್ಯಾ ಮನೆಗೆ ಹೋಗಿ, ಅವರ ಕುಟುಂಬದವರೊಂದಿಗೆ ಜಗಳ ತೆಗೆದು, ಆಕೆಯನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದ ಎಂಬುದು ಗೊತ್ತಾಗಿದೆ.
ಖಾಸಗಿ ಫೋಟೋಗಳನ್ನುಇಟ್ಟುಕೊಂಡು ಬ್ಲ್ಯಾಕ್ಮೇಲ್
ಆರೋಪಿ ಸಂತೋಷ್, ಐಶ್ವರ್ಯಾ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ತನ್ನನ್ನು ಭೇಟಿಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ. ಆರೋಪಿಯ ಒತ್ತಡಕ್ಕೆ ಮಣಿದು ನ.19 ರಂದು, ಐಶ್ವರ್ಯಾ ತಾನು ಸಂದರ್ಶನವೊಂದಕ್ಕೆ ಹೋಗುವುದಾಗಿ ಮನೆಯವರಿಗೆ ಸುಳ್ಳು ಹೇಳಿ ಸಂತೋಷ್ ಜತೆ ಲಾಡ್ಜ್ಗೆ ಹೋಗಿದ್ದಳು. ಈ ವೇಳೆ ಘಟನೆ ನಡೆದಿದೆ.