ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಎಂ ಜಿ ಎಸ್ ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಎಚ್ ಕೆ ಟ್ರಸ್ಟ್ ಆಯೋಜಿಸಿದ್ದ ಆರಕ್ಷಕರಿಗೆ ನಮನ, ವಿಜಯಗಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಳ್ಳೇಗಾಲದಂತಹ ಸ್ಥಳಕ್ಕೆ ಆಗಮಿಸಿ ಇಲ್ಲಿನ ಜನಸ್ತೋಮ ನೋಡಿ ನನಗೆ ಹೖದಯ ತುಂಬಿ ಬಂದಿದೆ ಎಂದರು.ವಿಜಯಗಾನಕ್ಕೆ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಚಪ್ಪಾಳೆ ಕೇಕೆಗಳೊಂದಿಗೆ ತಲೆದೂಗಿದರು. ವಿಜಯಪ್ರಕಾಶ್ ಅವರು ಹಲೋ ಹಲೊ ಹಲೋ, ಬೆಳಗಿದ್ದು ಯಾರ ಮುಖವ ನಾನು ನೋಡಿದೆ, ಗೊಂಬೆ ಹೇಳುತ್ತೈತೆ ಅನೇಕ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ನಟ ಮಾಸ್ಟರ್ ಆನಂದ್ ಮಾತನಾಡಿ, ಮಾಪ್ಪನ ಮಡಿಲಲ್ಲಿರುವ ನೀವು ಪುಣ್ಯವಂತರಪ್ಪ. ನಿಮ್ಮ ಈ ಪುಣ್ಯ ಸ್ಥಳಕ್ಕೆ ಬಂದ ನಾನು ಧನ್ಯನಾದನೆಪ್ಪ. ಪೋಷಕರು ಮಕ್ಕಳನ್ನು ಮುದ್ದಾಗಿ ಬೆಳಸುವ ಜೊತೆ ಸಂಸ್ಕಾರ ಕಲಿಸಬೇಕು ಎಂದರು.ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ, ಈ ಕಾರ್ಯಕ್ರಮ ಅರ್ಥಪೂರ್ಣವಾದುದು. ಎಚ್ ಕೆ ಟ್ರಸ್ಟ್ ಸೇವಾ ಕೈಂಕರ್ಯ ನಿರಂತವಾಗಿ ಸಾಗಲಿ ಎಂದರು.
ಮಹದೇಶ್ವರ ಬೆಟ್ಟದ ಸಾಲೂರು ಮಠಾಧ್ಯಕ್ಷ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ದೊಡ್ಡ ಆಸ್ತಿ ಎಂದರೆ ಶಿಕ್ಷಣ. ಹಲವು ಕಲೆ ಕಲಿಸುವ ಜೊತೆಗೆ ಮಾನವೀಯ ಸೇವೆಗೂ ಮುಂದಾಗಿರುವು ಹೆಮ್ಮೆಯ ಸಂಗತಿ ಎಂದು ಹೇಳಿದರು.ದೇಶ ಸುಭೀಕ್ಷವಾಗಲು ರೈತರು, ಸೈನಿಕರ ಶ್ರಮ ಕಾರಣ. ಸಾರ್ವಜನಿಕರು ನೆಮ್ಮದಿ ಹಾಗೂ ಶಾಂತಿಯುತವಾಗಿ ಬದುಕಲು ಆರಕ್ಷಕರ ಸೇವೆ ಪರಿಶ್ರಮವೂ ಪ್ರಮುಖ ಕಾರಣ, ನಾಡಿನ ಜನರ ನೆಮ್ಮದಿಯ ಬದುಕಿಗೆ ಪೊಲೀಸರ ಸೇವೆ
ಮೆಚ್ಚುವಂತದ್ದು ಎಂದರು.ಶಾಸಕ ಮಂಜುನಾಥ್, ಕೊಳ್ಳೇಗಾಲ ಶಾಸಕ ಎ. ಆರ್. ಕೖಷ್ಣಮೂರ್ತಿ, ಶಾಸಕ ಸುನೀಲ್ ಗೌಡ ಪಾಟೀಲ್, ನಟ ನಿರ್ಮಾಪಕ ನಾರಾಯಣ್, ಎಸಿಪಿ ಮಹಾನಂದ, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಪ್ರೇಮಲತಾ ಕೖಷ್ಣಸ್ವಾಮಿ, ಮಾಜಿ ಶಾಸಕ ನಂಜುಂಡಸ್ವಾಮಿ, ಲೋಕೇಶ್, ಹರ್ಷ, ಶಿವಾನಂದ, ನಟರಾಜು, ಪ್ರವೀಣ್, ರಾಜೇಶ್ ಇನ್ನಿತರಿದ್ದರು.