ಕೊಮ್ಮೆತೋಡು: ಕೆಸರುಗದ್ದೆ ಕ್ರೀಡಾ ಸಂಗಮ ಸ್ಪರ್ಧೆ ವಿಜೇತರು

KannadaprabhaNewsNetwork |  
Published : Aug 13, 2026, 02:45 AM IST
ಚಿತ್ರ :  11ಎಂಡಿಕೆ1  : ಕೆಸರುಗದ್ದೆ ಓಟದ ಸ್ಪರ್ಧೆ.   | Kannada Prabha

ಸಾರಾಂಶ

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆಎಂಎಸ್‌ಎ) ವತಿಯಿಂದ ಕೊಮ್ಮೆತೋಡಿನಲ್ಲಿ ನಡೆದ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ-2026ರ ಓಟದ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಒಟ್ಟು 15 ಸ್ಪರ್ಧಿಗಳು ಬಹುಮಾನ ಪಡೆದುಕೊಂಡರು.

ಪೊನ್ನಂಪೇಟೆ: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆಎಂಎಸ್‌ಎ) ವತಿಯಿಂದ ಕೊಮ್ಮೆತೋಡಿನಲ್ಲಿ ನಡೆದ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾ ಸಂಗಮ-2026ರ ಓಟದ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಒಟ್ಟು 15 ಸ್ಪರ್ಧಿಗಳು ಬಹುಮಾನ ಪಡೆದುಕೊಂಡರು.1ರಿಂದ 4ನೇ ತರಗತಿವರೆಗಿನ ಪುಟ್ಟ ಮಕ್ಕಳ ವಿಭಾಗದಲ್ಲಿ ವಿನಾಯಕ ನಗರದ ಭೂಶಿತ್ (ಪ್ರಥಮ), ಕೊಮ್ಮೆತೋಡಿನ ಅಶ್ಮಿತಾ (ದ್ವಿತೀಯ) ನಡಿಕೇರಿಯ ಮನ್ವಿತ್ (ತೃತೀಯ) ಬಹುಮಾನ ಗಳಿಸಿದರೆ, 5ರಿಂದ 8ನೇ ತರಗತಿವರೆಗಿನ ಸಬ್ ಜೂನಿಯರ್ ವಿಭಾಗದಲ್ಲಿ ನಲ್ವತ್ತೋಕ್ಲುವಿನ ಸಫ್ವಾನ್ (ಪ್ರಥಮ), ವಿರಾಜಪೇಟೆಯ ದೀಕ್ಷಾ (ದ್ವಿತೀಯ) ಮತ್ತು ನಲ್ವತ್ತೋಕ್ಲುವಿನ ಝಯಾನ್ (ತೃತೀಯ) ಸ್ಥಾನ ಪಡೆದರು.9ರಿಂದ ದ್ವಿತೀಯ ಪಿಯುಸಿ ತರಗತಿವರೆಗಿನ 17 ವರ್ಷದೊಳಗಿನ ವಿಭಾಗದಲ್ಲಿ ಬೇತ್ರಿಯ ಶಮ್ನಾಸ್ (ಪ್ರಥಮ), ಕಂಡಂಗಾಲದ ಅನಸ್ (ದ್ವಿತೀಯ), ಹಳ್ಳಿಗಟ್ಟಿನ ಆಶಿಕ್ (ತೃತೀಯ) ಸ್ಥಾನ ಪಡೆದರೆ, ಯಾವುದೇ ಪದವಿ ತರಗತಿ ವಿದ್ಯಾರ್ಥಿಗಳ ಕಾಲೇಜು ವಿಭಾಗದಲ್ಲಿ ಕುಂಜಿಲದ ಜೈನುದ್ದೀನ್ (ಪ್ರಥಮ), ಕುಂಜಿಲದ ಜಹೀದ್ (ದ್ವಿತೀಯ) ಮತ್ತು ಕಂಡಂಗಾಲದ ರಂಶೀದ್ (ತೃತೀಯ) ಬಹುಮಾನ ಪಡೆದರು.ಸಾರ್ವಜನಿಕ ವಿಭಾಗದಲ್ಲಿ ಅಮ್ಮತ್ತಿಯ ಸುಬ್ರಮಣಿ (ಪ್ರಥಮ), ಕುಂಜಿಲದ ಸುಳ್ಳಿ (ದ್ವಿತೀಯ) ಹಾಗೂ ಕುಂಜಿಲದ ತಾಹಿರ್ (ತೃತೀಯ) ಬಹುಮಾನ ಗಳಿಸಿದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕೆಎಂಎಸ್‌ಎ ಅಧ್ಯಕ್ಷ ಆಲೀರ ಎಂ. ರಶೀದ್ ನೇತೃತ್ವದಲ್ಲಿ ನಡೆದ ಕೆಸರುಗದ್ದೆ ಕ್ರೀಡಾ ಸಂಗಮದಲ್ಲಿ ಕೆಎಂಎಸ್‌ಎ ಪದಾಧಿಕಾರಿಗಳಾದ ಮೀತಲ್ ತಂಡ ಎಂ. ಇಸ್ಮಾಯಿಲ್, ಕತ್ತಣಿರ ಅಂದಾಯಿ, ಚಿಮ್ಮಿಚ್ಚಿರ ಕೆ. ಅಬ್ದುಲ್ಲಾ, ಮಂದಮಾಡ ಮುನ್ನಾ, ಪುಂಜೆರ ಹಂಸ, ಬಲ್ಯತ್ಕಾರಂಡ ಅಶ್ರಫ್, ಅಕ್ಕಳತಂಡ ಶಫೀಕ್ (ಜಿಯಾ), ಪುಂಜೆರ ಇಸ್ಮಾಯಿಲ್, ಮಂದಮಾಡ ಜಂಶೀರ್ ಮೊದಲಾದವರು ಕೆಸರುಗದ್ದೆ ಓಟದ ಸ್ಪರ್ಧೆಯ ಉಸ್ತುವಾರಿ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಸ್ವರ್ಣಾನದಿಗೆ ಬಾಗಿನ, ಸ್ನಾನಘಟ್ಟ ಲೋಕಾರ್ಪಣೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೈಬಿಟ್ಟ ಹೆಸರು ಪರಿಶೀಲಿಸಿ: ಹರೀಶ್ ಕುಮಾರ್ ಕರೆ