ಚೇರಂಬಾಣೆ ಬೆಂಗ್‌ನಾಡ್‌ ಕಕ್ಕಡ ತೀನಿ ಪೈಪೋಟಿ, ಸನ್ಮಾನ

KannadaprabhaNewsNetwork |  
Published : Aug 13, 2026, 02:45 AM IST
2-ಎನ್ ಪಿ ಕೆ-1.ಚಲನಚಿತ್ರ ರಂಗದಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದ ಚಿತ್ರನಿರ್ಮಾಪಕ,ನಿರ್ದೇಶಕ ದಂಪತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮತ್ತು ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.12-ಎನ್ ಪಿ ಕೆ-2.ಕಕ್ಕಡ ತಿಂಗಳಿನಲ್ಲಿ ಮಾಡುವ ತರಾವರಿ ತಿನಿಸುಗಳು.  .12-ಎನ್ ಪಿ ಕೆ-3.ಚೇರಂಬಾಣೆಯ ಬೆಂಗ್ ನಾಡ್  ಕೊಡವ ಸಮಾಜದ ವತಿಯಿಂದ ತೀನಿ ನಮ್ಮೆಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಭಿಕರು .===================================================================== | Kannada Prabha

ಸಾರಾಂಶ

ಚೇರಂಬಾಣೆಯ ಬೆಂಗ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಳ ಕೂಟ ವತಿಯಿಂದ ಕಕ್ಕಡ ತೀನಿ ಪೈಪೋಟಿ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ದಂಪತಿಯ ಸನ್ಮಾನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ನಾಪೋಕ್ಲು: ಚೇರಂಬಾಣೆಯ ಬೆಂಗ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಳ ಕೂಟ ವತಿಯಿಂದ ಕಕ್ಕಡ ತೀನಿ ಪೈಪೋಟಿ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ದಂಪತಿಯ ಸನ್ಮಾನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಬೆಂಗ್‌ ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚಿರಣಿಯಂಡ ದಿನೇಶ್ ಗಣಪತಿ ಉದ್ಘಾಟಿಸಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದರು.

ಬೆಂಗ್ ನಾಡ್ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕುಟ್ಟೇಟಿರ ಕೆ. ಕುಂಞಪ್ಪ ಮಾತನಾಡಿ, ಬೇಂಗ್ ನಾಡ್ ಕೊಡವ ಸಮಾಜ, ಮೊಮ್ಮಕ್ಕಡ ಕೂಟ, ರಿಕ್ರಿಯೇಷನ್ ಕ್ಲಬ್ ಜೊತೆಗೂಡಿ ಕೊಡವ ಜನಾಂಗದ ಏಳಿಗೆಗೆ ಶ್ರಮಿಸುವಂತಾಗಬೇಕು ಎಂದರು.ಅಪ್ಪಾರಂಡ ರತಿ ಬಿದ್ದಪ್ಪ ಕಕ್ಕಡತರ ಬದುಕು ಅಂದು-ಇಂದು ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು.

ಚಲನಚಿತ್ರ ರಂಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ನಿರ್ಮಾಪಕ, ನಿರ್ದೇಶಕ ದಂಪತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮತ್ತು ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬೆಂಗ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡೀರ ನಳಿನಿ ಮಾತನಾಡಿ, ಕಕ್ಕಡ ತೀನಿ ಎನ್ನುವುದು ಕೇವಲ ಆಹಾರ ಪದ್ಧತಿ ಮಾತ್ರವಲ್ಲ ಕೊಡವ ಜನಾಂಗದ ಸಂಸ್ಕೃತಿಯ ಒಂದು ಭಾಗ ಎಂದರು.

ಮಹಿಳೆಯರಿಂದ ಕಕ್ಕಡ ತಿಂಗಳಿನಲ್ಲಿ ಮಾಡುವ ತರಾವರಿ ತಿನಿಸುಗಳ ಪೈಪೋಟಿಯನ್ನು ಆಯೋಜಿಸಲಾಗಿತ್ತು. ಕಕ್ಕಡ ತೀನಿ ಸ್ಪರ್ಧೆ, ಸಮೂಹ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕುಂಚೆಟ್ಟಿರ ಶಿಲ್ಪ ಪೆಮ್ಮಯ್ಯ ಮತ್ತು ತೇಲಪಂಡ ಲಕ್ಷ್ಮಿ ಪ್ರಾರ್ಥಿಸಿದರು. ಅನಿತಾ ಗಣಪತಿ ಅತಿಥಿಗಳನ್ನು ಪರಿಚಯಿಸಿದರು. ಪಟ್ಟಮಡ ಮಿಲನ ಸ್ವಾಗತಿಸಿ, ಜಯಂತಿ ಚಂಗಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಸ್ವರ್ಣಾನದಿಗೆ ಬಾಗಿನ, ಸ್ನಾನಘಟ್ಟ ಲೋಕಾರ್ಪಣೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೈಬಿಟ್ಟ ಹೆಸರು ಪರಿಶೀಲಿಸಿ: ಹರೀಶ್ ಕುಮಾರ್ ಕರೆ