ಕುಶಾಲನಗರ: ಪಿತೃ ಪಿಂಡ ತರ್ಪಣ ಕಾರ್ಯಕ್ರಮ

KannadaprabhaNewsNetwork |  
Published : Aug 13, 2026, 02:45 AM IST
ಕಾರ್ಯಕ್ರಮ ಸಂದರ್ಭ | Kannada Prabha

ಸಾರಾಂಶ

ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ಕುಶಾಲನಗರ ಕಾವೇರಿ ನದಿ ತಟದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಟ್ರಸ್ಟ್, ಎಸ್‌ಎನ್‌ಡಿಪಿ ಕುಶಾಲನಗರ ಶಾಖೆ ಮತ್ತು ಕೇರಳ ಸಮಾಜದ ಸಹಭಾಗಿತ್ವದಲ್ಲಿ ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿ ತಟದಲ್ಲಿ ನಾಲ್ಕನೇ ವರ್ಷದ ಪಿತೃ ಪಿಂಡ ತರ್ಪಣ ಕಾರ್ಯಕ್ರಮ ನಡೆಯಿತು.

ಕುಶಾಲನಗರ: ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ಕುಶಾಲನಗರ ಕಾವೇರಿ ನದಿ ತಟದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಟ್ರಸ್ಟ್, ಎಸ್‌ಎನ್‌ಡಿಪಿ ಕುಶಾಲನಗರ ಶಾಖೆ ಮತ್ತು ಕೇರಳ ಸಮಾಜದ ಸಹಭಾಗಿತ್ವದಲ್ಲಿ ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿ ತಟದಲ್ಲಿ ನಾಲ್ಕನೇ ವರ್ಷದ ಪಿತೃ ಪಿಂಡ ತರ್ಪಣ ಕಾರ್ಯಕ್ರಮ ನಡೆಯಿತು.ಬೆಳಗ್ಗೆ 6 ಗಂಟೆಯಿಂದ ನದಿ ತಟದಲ್ಲಿ ರಾಮಣ್ಣ ಶಾಂತಿ ಅವರ ನೇತೃತ್ವದಲ್ಲಿ ಪಿತೃ ಪಿಂಡ ತರ್ಪಣ ಪೂಜೆ ವಿಧಿ ವಿಧಾನ ನೆರವೇರಿತು. ಜಿಲ್ಲೆ, ಹೊರ ಜಿಲ್ಲೆಗಳ ಸುಮಾರು 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.ಪಿತೃ ಪಿಂಡ ತರ್ಪಣ ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪ ಟ್ರಸ್ಟ್ ಅಧ್ಯಕ್ಷ ಕೆ. ವರದ, ಎಸ್‌ಎನ್‌ಡಿಪಿ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಟಿ. ಗಣೇಶ್, ಉಪಾಧ್ಯಕ್ಷ ಕರಣ್, ಕಾರ್ಯದರ್ಶಿ ಅನೀಶ್ ಕುಮಾರ್, ಖಜಾಂಚಿ ಟಿ.ಎಸ್. ಉದಯ್, ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಸ್ವರ್ಣಾನದಿಗೆ ಬಾಗಿನ, ಸ್ನಾನಘಟ್ಟ ಲೋಕಾರ್ಪಣೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೈಬಿಟ್ಟ ಹೆಸರು ಪರಿಶೀಲಿಸಿ: ಹರೀಶ್ ಕುಮಾರ್ ಕರೆ