)
ಕನ್ನಡಪ್ರಭ ವಾರ್ತೆ, ಶ್ರೀನಿವಾಸಪುರ
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಜಿ ಶಾಸಕ ಮಂಜುನಾಥಗೌಡ ಅವರು ತಮ್ಮ ಹಾಗೂ ಹಾಲಿ ಶಾಸಕ, ಕೋಮುಲ್ ಅಧ್ಯಕ್ಷ ನಂಜೇಗೌಡ ಅವರ ನಡುವಿನ ರಾಜಕೀಯ ದ್ವೇಷಕ್ಕಾಗಿ ಪದೇ ಪದೇ ಕೋಮುಲ್ ಹೆಸರು ಬಳಸಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುವುದು ಸೂಕ್ತ ಅಲ್ಲ. ಇದರಿಂದ ಒಕ್ಕೂಟದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ನಿಮ್ಮ ರಾಜಕೀಯ ಆರೋಪ- ಪ್ರತ್ಯಾರೋಪ ಮಾಲೂರಿಗೆ ಸೀಮಿತವಾಗಿರಲಿ ಎಂದು ಮಂಜುನಾಥಗೌಡರಿಗೆ ತಿರುಗೇಟು ನೀಡಿದ್ದಾರೆ.ಸಾಮಾಜಿಕ ಕಾರ್ಯಕರ್ತ ಗೂಳಿಗಾನಹಳ್ಳಿ ನಾಗರಾಜ್ ಹಾಗೂ ವಕೀಲ ವೆಂಕಟಾಚಲಪತಿ ಮಾಡಿರುವ ಕೋಮೂಲ್ ಮೇಲಿನ ಆರೋಪದಲ್ಲಿ ಯಾವುದೆ ಉರುಳಿಲ್ಲ. ನೇಮಕಾತಿ ವಿಚಾರವಾಗಿ ಇಡಿ ತನಿಖೆಯಾಗಿದೆ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಹನ್ನೆರಡು ವರ್ಷಗಳ ಹಣದ ವಹಿವಾಟಿನ ಆಡಿಟ್ ಬಹಿರಂಗ ಮಾಡಲಾಗಿದೆ. ಎಲ್ಲಾ ಪಾರದರ್ಶಕವಾಗಿದೆ. ಚಿಂತಾಮಣಿ ಐಸ್ ಕ್ರೀಮ್ ತಯಾರಿಕಾ ಘಟಕಕ್ಕೆ ಕೋಚಿಮೂಲ್ ಇಬ್ಭಾಗ ಆಗುವ ಮೊದಲು ನಡೆದಿರುವುದು ಈಗ ಇಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.